ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಇಂಡಿಯನ್ಸ್‌ಗೆ ಕರ್ನಾಟಕದ ವಿನಯ್ ಕುಮಾರ್ ಪ್ರತಿಭಾ ಶೋಧಕ

Last Updated 29 ಜುಲೈ 2021, 14:38 IST
ಅಕ್ಷರ ಗಾತ್ರ

ಮುಂಬೈ: ಭಾರತ ತಂಡದ ಮಾಜಿ ವೇಗಿ, ಕರ್ನಾಟಕದ ವಿನಯ್ ಕುಮಾರ್ ಅವರು ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್‌ ಫ್ರಾಂಚೈಸ್‌ ಮುಂಬೈ ಇಂಡಿಯನ್ಸ್‌ಗೆ ಪ್ರತಿಭಾ ಶೋಧಕರಾಗಿ ನೇಮಕವಾಗಿದ್ದಾರೆ. ಫ್ರಾಂಚೈಸ್‌ ಗುರುವಾರ ಈ ವಿಷಯ ತಿಳಿಸಿದೆ.

ಮುಂಬೈ ತಂಡವು ಇತ್ತೀಚೆಗಷ್ಟೇ ಭಾರತ ತಂಡದ ಮಾಜಿ ವಿಕೆಟ್‌ ಕೀಪರ್‌ ಪಾರ್ಥಿವ್ ಪಟೇಲ್ ಅವರನ್ನು ಪ್ರತಿಭಾ ಶೋಧಕ ಗುಂಪಿಗೆ ಸೇರಿಸಿಕೊಂಡಿತ್ತು.

ಬಲಗೈ ಮಧ್ಯಮವೇಗದ ಬೌಲರ್‌ ಆಗಿರುವ ವಿನಯ್‌, ಭಾರತ ತಂಡದ ಪರ ಒಂದು ಟೆಸ್ಟ್, 31 ಏಕದಿನ ಮತ್ತು ಒಂಬತ್ತು ಟ್ವೆಂಟಿ–20 ಪಂದ್ಯಗಳಲ್ಲಿ ಆಡಿದ್ದಾರೆ. ಕರ್ನಾಟಕ ಎರಡು ಬಾರಿ ರಣಜಿ ಟ್ರೋಫಿ ಚಾಂಪಿಯನ್ ಆದ ಸಂದರ್ಭಗಳಲ್ಲಿ ಅವರು ತಂಡದ ನಾಯಕರಾಗಿದ್ದರು. 2015 ಮತ್ತು 2017ರಲ್ಲಿ ಮುಂಬೈ ಇಂಡಿಯನ್ಸ್ ಐಪಿಎಲ್‌ ಪ್ರಶಸ್ತಿ ಗೆದ್ದುಕೊಂಡ ಸಂದರ್ಭಗಳಲ್ಲಿ ವಿನಯ್ ಅವರು ತಂಡದ ಭಾಗವಾಗಿದ್ದರು.

ಈ ವರ್ಷದ ಫೆಬ್ರುವರಿಯಲ್ಲಿ ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

‘ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿರುವುದಕ್ಕೆ ಹೆಮ್ಮೆಯಿದೆ. ತಂಡವು ಆಟದ ಪ್ರತಿಯೊಂದು ವಿಭಾಗದಲ್ಲಿ ಉತ್ಕೃಷ್ಟತೆಗಾಗಿ ಶ್ರಮಿಸುತ್ತಿದೆ. ಪ್ರತಿಭಾಶೋಧನೆ ನಿಸ್ಸಂದೇಹವಾಗಿ ಅದರ ಪ್ರಮುಖ ಶಕ್ತಿ. ಇದು ನನಗೆ ಹೊಸ ಅಧ್ಯಾಯ. ಕ್ರಿಕೆಟ್‌ಗೆ ಮರಳಿ ಏನನ್ನಾದರೂ ನೀಡುವ ಅವಕಾಶವೆಂದು ನಾನು ಭಾವಿಸುತ್ತೇನೆ‘ ಎಂದು ವಿನಯ್ ಹೇಳಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು 139 ಪಂದ್ಯಗಳಿಂದ 504 ವಿಕೆಟ್ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT