ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಲಖನೌ ವಿರುದ್ಧ ಸ್ವಲ್ಪ ಹೊತ್ತು ನಾಯಕತ್ವದ ಹೊಣೆ ನಿಭಾಯಿಸಿದ ಕೊಹ್ಲಿ

Last Updated 20 ಏಪ್ರಿಲ್ 2022, 11:09 IST
ಅಕ್ಷರ ಗಾತ್ರ

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಮಂಗಳವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ, ಸ್ವಲ್ಪ ಹೊತ್ತು ನಾಯಕತ್ವದ ಹೊಣೆ ನಿಭಾಯಿಸುವ ಮೂಲಕ ಗಮನ ಸೆಳೆದಿದ್ದಾರೆ.

ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ, ನಾಯಕ ಫಫ್ ಡುಪ್ಲೆಸಿ (96) ಅಮೋಘ ಆಟದ ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತ್ತು.

ಇನ್ನಿಂಗ್ಸ್ ಪೂರ್ತಿ ಬ್ಯಾಟಿಂಗ್ ಮಾಡಿದ್ದ ಫಫ್‌ಗೆ ದಣಿವು ಕಾಡಿದ್ದರಿಂದ ಎರಡನೇ ಇನ್ನಿಂಗ್ಸ್‌ನ ಆರಂಭದಲ್ಲೇ ಕ್ಷೇತ್ರರಕ್ಷಣೆ ಮಾಡಲು ಮೈದಾನಕ್ಕಿಳಿಯಲಿಲ್ಲ.

ಪರಿಣಾಮ ಸ್ವಲ್ಪ ಹೊತ್ತು ತಂಡವನ್ನು ಮುನ್ನಡೆಸುವ ಅವಕಾಶ ಕೊಹ್ಲಿಗೆ ದೊರೆಯಿತು. ಹಳೆಯ ಶೈಲಿಯಲ್ಲಿ ನಾಯಕತ್ವದ ಹೊಣೆ ನಿಭಾಯಿಸಿದ ಕೊಹ್ಲಿ, ಸಹ ಆಟಗಾರರನ್ನು ಹುರಿದುಂಬಿಸುತ್ತಾ, ಮಹತ್ವದ ಫೀಲ್ಡಿಂಗ್ ಬದಲಾವಣೆ ಮಾಡುವ ದೃಶ್ಯ ಕಂಡುಬಂತು.

ವಿರಾಟ್ ಕೊಹ್ಲಿ ಮತ್ತೆ ನಾಯಕತ್ವ ವಹಿಸಿರುವುದು ಅಭಿಮಾನಿಗಳಲ್ಲೂ ಸಂಭ್ರಮಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವಿಡಿಯೊ ಹರಿದಾಡುತ್ತಿದೆ.

ಒಂದು ಓವರ್ ಬಳಿಕ ಫಫ್ ಡುಪ್ಲೆಸಿ ಮೈದಾನಕ್ಕಿಳಿದರು. ಬಳಿಕ ಕೊಹ್ಲಿ ನಾಯಕತ್ವವನ್ನು ಡುಪ್ಲೆಸಿಗೆ ಹಸ್ತಾಂತರಿಸಿದರು.

ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಸ್ಥಾನಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT