ಶುಕ್ರವಾರ, ಮೇ 20, 2022
26 °C

ನಿನ್ನಿಂದ ನಾನು ಪರಿಪೂರ್ಣವಾದೆ: ಅನುಷ್ಕಾರನ್ನು ಹೊಗಳಿ ಟಿಪ್ಪಣಿ ಬರೆದ ವಿರಾಟ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಕ್ರಿಕೆಟಿಗ ವಿರಾಟ್‌ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಅವರು ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಅವರು ವಿವಾಹವಾಗಿ ಇಂದಿಗೆ ನಾಲ್ಕು ವರ್ಷಗಳು ಸಂದಿವೆ.

ಈ ಹಿನ್ನೆಲೆಯಲ್ಲಿ ಅನುಷ್ಕಾರನ್ನು ಹೊಗಳಿ ಸರಣಿ ಟ್ವೀಟ್‌ ಮಾಡಿರುವ ವಿರಾಟ್‌, ‘ನನ್ನ ಸಿಲ್ಲಿ ಜೋಕ್‌ಗಳನ್ನು ಮತ್ತು ಸೋಮಾರಿತನವನ್ನು 4 ವರ್ಷಗಳ ಕಾಲ ಸಹಿಸಿಕೊಂಡೆ. ನೀನು ನನ್ನನ್ನು ಪ್ರತಿದಿನವೂ ಒಪ್ಪಿಕೊಂಡೆ. ನಾನು ಎಷ್ಟು ಕಿರಿಕಿರಿ ಉಂಟು ಮಾಡಬಹುದು ಎಂಬುದನ್ನು ಲೆಕ್ಕಿಸದೆ ನನ್ನನ್ನು ಪ್ರೀತಿಸುತ್ತಿರುವೆ. ಈ ನಾಲ್ಕು ವರ್ಷಗಳಲ್ಲಿ ತನ್ನ ಶ್ರೇಷ್ಠ ಕರುಣೆಯನ್ನು ದೇವರು ನಮ್ಮ ಮೇಲೆ ಸುರಿದಿದ್ದಾನೆ’ ಎಂದು ತಿಳಿಸಿದ್ದಾರೆ.

‘ಅತ್ಯಂತ ಪ್ರಾಮಾಣಿಕ, ಪ್ರೀತಿಯ, ಕೆಚ್ಚೆದೆಯ ಮಹಿಳೆಯನ್ನು ಮದುವೆಯಾಗಿ 4 ವರ್ಷಗಳಾದವು. ಇಡೀ ಜಗತ್ತು ನಮ್ಮ ವಿರುದ್ಧವಾಗಿದ್ದರೂ ಸಹ ನ್ಯಾಯದ ಪರವಾಗಿ ನಿಲ್ಲಲು ನನಗೆ ಸ್ಫೂರ್ತಿ ನೀಡಿದ ಮಹಿಳೆ ನೀನು’ ಎಂದು ಅನುಷ್ಕಾರನ್ನು ಹೊಗಳಿ ವಿರಾಟ್‌ ಟ್ವೀಟಿಸಿದ್ದಾರೆ. 

‘ನೀನು ನನ್ನನ್ನು ಎಲ್ಲಾ ರೀತಿಯಲ್ಲಿ ಪರಿಪೂರ್ಣಗೊಳಿಸಿರುವೆ. ನಾನು ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇನೆ. ಮದುವೆ ವಾರ್ಷಿಕೋತ್ಸವದ ಈ ದಿನವು ಹೆಚ್ಚು ವಿಶೇಷವಾಗಿದೆ. ಈ ಪುಟ್ಟ ಮಗುವಿನೊಂದಿಗೆ ನಮ್ಮ ಜೀವನವು ಪರಿಪೂರ್ಣಗೊಂಡಿದೆ’ ಎಂದೂ ವಿರಾಟ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು