ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ನೆಲದಲ್ಲಿ ಅತ್ಯಂತ ವೇಗದ 150 ರನ್‌ ಗಳಿಸಿ ದಾಖಲೆ ಬರೆದ ಕೊಹ್ಲಿ

Last Updated 15 ಜನವರಿ 2023, 12:58 IST
ಅಕ್ಷರ ಗಾತ್ರ

ತಿರುವನಂತಪುರ: ಭಾರತದ ನೆಲದಲ್ಲಿ ನಡೆದ ಏಕದಿನ ಪಂದ್ಯವೊಂದರಲ್ಲಿ ಅತ್ಯಂತ ವೇಗವಾಗಿ 150ರನ್‌ ಗಳಿಸಿದ ಸಾಧನೆಯನ್ನು ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರು ಭಾನುವಾರ ಮಾಡಿದ್ದಾರೆ.

34ರ ಹರೆಯದ ಕೊಹ್ಲಿ, ಶ್ರೀಲಂಕಾ ವಿರುದ್ಧ ತಿರುವನಂತಪುರಂನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ 106 ಎಸೆತಗಳಲ್ಲಿ 150 ರನ್ ಗಳಿಸಿದರು. ಈ ಮೂಲಕ ಅವರು ವೇಗದ 150 ರನ್‌ ಗಳಿಸಿದ ಖ್ಯಾತಿಗೆ ಪಾತ್ರರಾದರು. ಈ ಪಂದ್ಯದಲ್ಲಿ ಅವರು ಒಟ್ಟು 110 ಎಸೆತಗಳಿಂದ 166 ರನ್‌ ಗಳಿಸಿದ್ದಾರೆ.

ಈ ಹಿಂದೆ ಭಾರತದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಅತಿ ವೇಗದ 150 ರನ್ ಗಳಿಸಿದ್ದ ಆಸ್ಟ್ರೇಲಿಯಾದ ಜಾರ್ಜ್ ಬೈಲಿ, ಅದಕ್ಕಾಗಿ 109 ಎಸೆತಗಳನ್ನು ಎದುರಿಸಿದ್ದರು.

ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಐದು ಬಾರಿ 150ಕ್ಕಿಂತಲೂ ಹೆಚ್ಚು ಸ್ಕೋರ್‌ಗಳನ್ನು ಗಳಿಸಿದ್ದಾರೆ.

ಇದೇ ಪಂದ್ಯದಲ್ಲಿ ಅವರು ಮತ್ತೊಂದು ದಾಖಲೆಯನ್ನೂ ಬರೆದಿದ್ದರು. ತವರಿನಲ್ಲಿ ಅತಿ ಹೆಚ್ಚು ಏಕದಿನ ಶತಕ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದರು. ಭಾರತದಲ್ಲಿ ವಿರಾಟ್‌ ಕೊಹ್ಲಿ ಈವರೆಗೆ 21 ಏಕದಿನ ಶತಕ ಗಳಿಸಿದ್ದಾರೆ. ಈ ಮೂಲಕ ಅವರು ತವರಿನಲ್ಲಿ 20 ಏಕದಿನ ಶತಕ ಗಳಿಸಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT