ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19 | ಸುರಕ್ಷತೆಯ ಸಂದೇಶ ಸಾರಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

‘ಮುನ್ನೆಚ್ಚರಿಕೆ ವಹಿಸುವುದು ಗುಣಮುಖರಾಗುವುದಕ್ಕಿಂತ ಉತ್ತಮ’
Last Updated 14 ಮಾರ್ಚ್ 2020, 6:27 IST
ಅಕ್ಷರ ಗಾತ್ರ

ನವದೆಹಲಿ:ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿರುವಕೋವಿಡ್‌–19 ವೈರಸ್‌ ಕುರಿತುಪ್ರತಿಕ್ರಿಯಿಸಿರುವ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.

ಸೋಂಕು ಕುರಿತುಟ್ವಿಟರ್‌ನಲ್ಲಿ ಬರೆದುಕೊಂಡಿರುವ ಅವರು, ‘ದೃಢವಾಗಿ ನಿಂತುಮತ್ತು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಮೂಲಕಕೋವಿಡ್‌–19 ವೈರಸ್‌ ವಿರುದ್ಧ ಹೋರಾಡಬೇಕಿದೆ. ಸುರಕ್ಷಿತವಾಗಿ, ಜಾಗರೂಕರಾಗಿರೋಣ.ಮುನ್ನೆಚ್ಚರಿಕೆ ವಹಿಸುವುದು ರೋಗದಿಂದ ಗುಣಮುಖರಾಗುವುದಕ್ಕಿಂತಲೂ ಉತ್ತಮವಾದುದ್ದು.ದಯವಿಟ್ಟು ಪ್ರತಿಯೊಬ್ಬರ ಬಗ್ಗೆಯೂಕಾಳಜಿ ವಹಿಸಿ’ ಎಂದು ಕರೆ ನೀಡಿದ್ದಾರೆ.

ಇದೇ ತಿಂಗಳು 29ರಿಂದ ಆರಂಭವಾಗಬೇಕಿದ್ದ ಐಪಿಎಲ್‌ ಟೂರ್ನಿಯನ್ನು ಏಪ್ರಿಲ್‌ 15ರ ವರೆಗೆ ಮುಂದೂಡಲಾಗಿದೆ.

ದೇಶದಾದ್ಯಂತ ಸುಮಾರು 80ಕ್ಕೂ ಹೆಚ್ಚು ಜನರಲ್ಲಿ ಕಾಣಿಸಿಕೊಂಡಿರುವ ಹಾಗೂ ಇಬ್ಬರನ್ನು ಬಲಿ ಪಡೆದಿರುವ ಕೋವಿಡ್‌–19 ವೈರಸ್‌ ಭೀತಿಯಿಂದಾಗಿ ಭಾರತ–ದಕ್ಷಿಣ ಆಫ್ರಿಕಾ ಏಕದಿನ ಸರಣಿ, ಶ್ರೀಲಂಕಾ–ಇಂಗ್ಲೆಂಡ್‌ ಟೆಸ್ಟ್ ಸರಣಿ ಸೇರಿದಂತೆಹಲವು ಕ್ರೀಡಾಕೂಟಗಳೂ ರದ್ದಾಗಿವೆ.

ಪ್ರಪಂಚದಾದ್ಯಂತ ಸುಮಾರು 1.3 ಲಕ್ಷ ಜನರಲ್ಲಿ ವೈರಸ್‌ ಸೋಂಕು ದೃಢಪಟ್ಟಿದ್ದು, 5 ಸಾವಿರ ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT