ಅಭ್ಯಾಸ ಪಂದ್ಯ: ಕೊಹ್ಲಿ ಬಳಗಕ್ಕೆ ಜಯ

ಬೆಂಗಳೂರು: ವಿರಾಟ್ ಕೊಹ್ಲಿ ನಾಯಕತ್ವದ ಸಿ.ಕೆ.ನಾಯ್ಡು ಇಲೆವನ್ ತಂಡ ಕೆ.ಎಲ್.ರಾಹುಲ್ ನೇತೃತ್ವದ ರಂಜಿತ್ ಸಿಂಗ್‌ಜಿ ಇಲೆವನ್ ತಂಡವನ್ನು ಅಭ್ಯಾಸ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಮಣಿಸಿತು. ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದ ಅಂಗವಾಗಿ ಸಿಡ್ನಿಯಲ್ಲಿ ಭಾನುವಾರ ನಡೆದ ಪಂದ್ಯದ ಮಾಹಿತಿಯನ್ನು ತಂಡ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಕಟಿಸಿದೆ.
40 ಓವರ್‌ಗಳ ಪಂದ್ಯಕ್ಕೆ ಆರಂಭದಲ್ಲಿ ಮಳೆ ಅಡ್ಡಿಪಡಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ರಾಹುಲ್ ಬಳಗ 235 ರನ್ ಕಲೆ ಹಾಕಿತು. ಶಿಖರ್ ಧವನ್ ಮತ್ತು ಮಯಂಕ್ ಅಗರವಾಲ್ ಇನಿಂಗ್ಸ್ ಆರಂಭಿಸಿದ್ದರು. ರಾಹುಲ್ 66 ಎಸೆತಗಳಲ್ಲಿ 83 ರನ್ ಗಳಿಸಿದರು.
ಗುರಿ ಬೆನ್ನತ್ತಿದ ಕೊಹ್ಲಿ ಬಳಗ 26 ಎಸೆತ ಬಾಕಿ ಇರುವಾಗಲೇ ಜಯದ ದಡ ಸೇರಿತು. ಪೃಥ್ವಿ ಶಾ ಮತ್ತು ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸಿದರು. ವಿರಾಟ್ ಕೊಹ್ಲಿ 58 ಎಸೆತಗಳಲ್ಲಿ 91 ರನ್ ಗಳಿಸಿ ಸುಲಭ ಜಯ ತಂದುಕೊಟ್ಟರು. ರವಿಚಂದ್ರನ್ ಅಶ್ವಿನ್ ಔಟಾಗದೇ ಉಳಿದರು ಎಂದು ತಿಳಿಸಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.