ಸೋಮವಾರ, ಏಪ್ರಿಲ್ 19, 2021
31 °C

ಭಜ್ಜಿ ಹರ್‌ಭಜನ್‌ ಜನ್ಮದಿನಕ್ಕೆ ಚಟ್ನಿ ಶುಭಾಶಯ ಕೋರಿದ ಸೆಹ್ವಾಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೈಚಳಕದ ಸ್ಪಿನ್ನಿಂಗ್‌ನಿಂದ ಭಾರತದ ಕ್ರಿಕೆಟ್‌ ತಂಡವನ್ನು ಹಲವಾರು ಪಂದ್ಯಗಳಲ್ಲಿ ಗೆಲುವಿನ ದಡ ಸೇರಿಸಿದ್ದ ಹರ್‌ಭಜನ್‌ ಸಿಂಗ್‌ ಇಂದು(ಮಂಗಳವಾರ) ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಸಹ ಮತ್ತು ಮಾಜಿ ಆಟಗಾರರು ಅವರ ಮೇಲೆ ಶುಭಾಶಯಗಳ ಮಳೆಯನ್ನೆ ಸುರಿಸುತ್ತಿದ್ದಾರೆ. 

ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ಕ್ರೀಡಾಭ್ಯಾಸದ ವೇಳೆಯ ಚಿತ್ರವನ್ನು ಲಗತ್ತಿಸಿ, ಹರ್‌ಭಜನ್‌ರ ಭಜ್ಜಿಯೆಂಬ ಅನ್ವರ್ಥನಾಮ ಬಳಸಿಕೊಂಡು ‘ದ ಚಟ್ನಿ ಟು ಅವರ್‌ ಭಜ್ಜಿ’ ಎಂದು ಚಟಾಕಿ ಹಾರಿಸಿ, ದೇವರ ದಯೆ ಅವರ ಮೇಲಿರಲಿ ಎಂದು ಹಾರೈಸಿದ್ದಾರೆ. 

ಹರ್‌ಭಜನ್‌ ಕಳೆದ ಐಪಿಎಲ್‌ನಲ್ಲಿ ತಮಿಳುನಾಡಿನ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಆಡಿದ್ದರು. ಹಾಗಾಗಿ ಕ್ರಿಕೆಟ್‌ ಆಗಸದ ಮಾಜಿ ತಾರೆ ಸಚಿನ್‌ ತೆಂಡೂಲ್ಕರ್‌ ಹುಟ್ಟುಹಬ್ಬದ ಶುಭಾಶಯವನ್ನು ತಮಿಳಿನಲ್ಲಿ ಹಂಚಿಕೊಂಡಿದ್ದಾರೆ.

‘ನನ್ನ ದೊಡ್ಡಣನಂತಿರುವ ಪಾಜಿಗೆ ಯಶಸ್ಸು ಮತ್ತು ಸಂತಸ ಸಿಗಲಿ’ ಎಂದು ಆಲ್‌ ರೌಂಡರ್‌ ಸುರೇಶ್‌ ರೈನಾ ಹರಸಿದ್ದಾರೆ. 

ಹರ್‌ಭಜನ್‌ ಭಾರತ ತಂಡದ ಜರ್ಸಿ ತೊಟ್ಟು 2016ರಲ್ಲಿ ಢಾಕಾದಲ್ಲಿ ಯುಎಇ ವಿರುದ್ಧ ತಮ್ಮ ಅಂತಿಮ  ಟಿ20 ಪಂದ್ಯ ಆಡಿದ್ದರು.

2011ರಲ್ಲಿ ಭಾರತ ವಿಶ್ವಕಪ್‌ ಗೆದ್ದ ತಂಡದ ಸದಸ್ಯರಾಗಿದ್ದ ಭಜ್ಜಿ 103 ಟೆಸ್ಟ್‌, 236 ಏಕದಿನ ಪಂದ್ಯ ಮತ್ತು 28 ಟಿ20 ಪಂದ್ಯಗಳಲ್ಲಿ ಬೌಲಿಂಗ್‌ ಮಾಡಿದ್ದಾರೆ.   

ಹರ್‌ಭಜನ್‌ರನ್ನು ಹರಸಿ ಬಂದ ಶುಭಾಶಯದ ಟ್ವಿಟ್‌ಗಳು 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು