ಮಂಗಳವಾರ, ಜನವರಿ 21, 2020
27 °C

ನಾಲ್ಕು ದಿನಗಳ ಟೆಸ್ಟ್‌: ಸೆಹ್ವಾಗ್‌ ವಿರೋಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ : ಭಾರತದ ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ನಾಲ್ಕು ದಿನಗಳ ಟೆಸ್ಟ್‌ ಪ್ರಸ್ತಾವವನ್ನು ವಿರೋಧಿಸಿದ್ದಾರೆ.

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ರಾತ್ರಿ ಆಯೋಜಿಸಿದ್ದ ಪಟೌಡಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಟೆಸ್ಟ್‌ ಮಾದರಿಯು ಕ್ರಿಕೆಟ್‌ನ ಆತ್ಮ ಇದ್ದಂತೆ. ಅದನ್ನು ಹಾಗೆಯೇ ಇರಲು ಬಿಡಬೇಕು’ ಎಂದಿದ್ದಾರೆ.

‘ಮೀನು ನೀರಿನಲ್ಲಿ ಇದ್ದರೆ ಚೆಂದ. ಅದನ್ನು ಹೊರಗೆ ತೆಗೆದರೆ ಸತ್ತು ಹೋಗುತ್ತದೆ. ಜೆರ್ಸಿಗಳ ಮೇಲೆ ನಂಬರ್‌ ಹಾಕುವುದು, ಹೊನಲು ಬೆಳಕಿನಲ್ಲಿ ಪಂದ್ಯಗಳನ್ನು ಆಡಿಸುವುದು ಹೀಗೆ ಹೊಸ ಆವಿಷ್ಕಾರಗಳನ್ನು ಐಸಿಸಿ ಮಾಡಿದೆ. ಇವುಗಳಿಗೆ ನನ್ನ ಸಹಮತವಿದೆ. ಗಲೀಜಾದಾಗ ಮಾತ್ರ ಡಯಾಪರ್‌ ಬದಲಿಸಬೇಕು.  ಐದು ದಿನಗಳ ಟೆಸ್ಟ್‌ ಮಾದರಿ ಕೂಡ ಹಾಗೆಯೇ’ ಎಂದು ವ್ಯಂಗ್ಯವಾಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು