ಶುಕ್ರವಾರ, ಫೆಬ್ರವರಿ 28, 2020
19 °C

150 ಪಂದ್ಯ, 12 ಸಾವಿರ ರನ್: ರಣಜಿ ಕ್ರಿಕೆಟ್‌ನಲ್ಲಿ ವಾಸೀಂ ಜಾಫರ್ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದರ್ಭ: ವಿದರ್ಭ ತಂಡದ ಆಟಗಾರ ವಾಸೀಂ ಜಾಫರ್‌ ರಣಜಿ ಕ್ರಿಕೆಟ್‌ನಲ್ಲಿ 12 ಸಾವಿರ ರನ್‌ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಶ್ರೇಯಕ್ಕೆ ಭಾಜನರಾದರು.

ನಾಗ್ಪುರದಲ್ಲಿ ಕೇರಳ ತಂಡದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು. ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ‍ಪಡೆದ ವಿದರ್ಭ, ತಂಡದ ಮೊತ್ತ ಕೇವಲ 23 ರನ್‌ಗಳಾಗುವಷ್ಟರಲ್ಲಿ ಆರಂಭಿಕರಿಬ್ಬರನ್ನೂ ಕಳೆದುಕೊಂಡಿತು. ಬಳಿಕ ಬಂದ ಜಾಫರ್, ಕನ್ನಡಿಗ ಗಣೇಶ್‌ ಸತೀಶ್‌ ಜೊತೆಗೂಡಿ ತಾಳ್ಮೆಯ ಆಟವಾಡಿದರು.

ಈ ಜೋಡಿ ಮೂರನೇ ವಿಕೆಟ್‌ಗೆ 104 ರನ್‌ ಸೇರಿಸಿತು. ಜಾಫರ್‌ 149 ಎಸೆತಗಳಲ್ಲಿ 57 ರನ್ ಗಳಿಸಿದರು. ಸತೀಶ್‌ 58ರನ್‌ ಕಲೆಹಾಕಿದರು. ಸದ್ಯ ಮೊದಲ ದಿನದಾಟ ಮುಕ್ತಾಯವಾಗಿದ್ದು, ವಿದರ್ಭ ತಂಡ 84 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 239 ರನ್ ಕಲೆಹಾಕಿದೆ.

2019–20ರ ರಣಜಿ ಟೂರ್ನಿ ಆರಂಭಕ್ಕೂ ಮುನ್ನ ಜಾಫರ್ ಖಾತೆಯಲ್ಲಿ 11,775 ರನ್‌ಗಳಿದ್ದವು. ರಣಜಿ ಕ್ರಿಕೆಟ್‌ನಲ್ಲಿ 150ಕ್ಕಿಂತ ಹೆಚ್ಚು ಪಂದ್ಯ ಆಡಿದ ಮೊದಲಿಗ ಎನಿಸಿರುವ ಜಾಫರ್‌ಗೆ ಇದು 156ನೇ ಪಂದ್ಯ. ಅವರ ಖಾತೆಯಲ್ಲಿ ಸದ್ಯ 12,038‬ ರನ್‌ಗಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು