ಭಾರತದ ಕ್ರಿಕೆಟಿಗರ ಪೈಕಿ ಜಾವೆಲಿನ್ನಲ್ಲಿ ಪ್ರಾಬಲ್ಯ ಸಾಧಿಸಬಲ್ಲ ಆಟಗಾರ ಯಾರು ಎಂಬ ಪ್ರಶ್ನೆ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೆ ಎದುರಾಗಿದೆ.

ಮಾಜಿ ಕ್ರಿಕೆಟಿಗ, ರಾಜಕಾರಣಿ ಹಾಗೂ ವೀಕ್ಷಕ ವಿವರಣೆಗಾರರೂ ಆಗಿರುವ ನವಜೋತ್ ಸಿಂಗ್ ಸಿಧು 'ಸ್ಟಾರ್ ಸ್ಪೋರ್ಟ್ಸ್' ಕಾರ್ಯಕ್ರಮದಲ್ಲಿ ಈ ಪ್ರಶ್ನೆಯನ್ನು ನೀರಜ್ಗೆ ಕೇಳಿದ್ದಾರೆ.

ಸಿಧು ಹಾಗೂ ಚೋಪ್ರಾ ಸಂಭಾಷಣೆಯ ವಿಡಿಯೊ ತುಣುಕನ್ನು ವಾಹಿನಿಯು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್ನಲ್ಲಿ ಹಂಚಿಕೊಂಡಿದೆ.

ಸಿಧು ಪ್ರಶ್ನೆಗೆ ಸ್ವಲ್ಪ ಯೋಚಿಸಿ ಪ್ರತಿಕ್ರಿಯಿಸಿದ ಚೋಪ್ರಾ, ಖಂಡಿತಾ ವೇಗದ ಬೌಲರ್ ಆ ಸಾಧನೆ ಮಾಡಬಲ್ಲರು. ಜಸ್ಪ್ರೀತ್ ಬೂಮ್ರಾ ಟ್ರ್ಯಾಕ್ ಹಾಗೂ ಕ್ರಿಕೆಟ್ ಮೈದಾನ ಎರಡೂ ಕಡೆ ಅತ್ಯುತ್ತಮ ಸಾಮರ್ಥ್ಯ ತೋರಬಲ್ಲರು ಎಂದು ಹೇಳಿದ್ದಾರೆ.
.ENG vs IND: SENA ದೇಶಗಳಲ್ಲಿ 150 ವಿಕೆಟ್; ಪಾಕ್ ದಿಗ್ಗಜನ ದಾಖಲೆ ಮುರಿದ ಬೂಮ್ರಾ.ICC New Rules: ಟಿ20 ಕ್ರಿಕೆಟ್ಗೆ ಹೊಸ ನಿಯಮಗಳನ್ನು ಪರಿಚಯಿಸಿದ ಐಸಿಸಿ.
ಇತ್ತೀಚೆಗೆ ಲೀಡ್ಸ್ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಐದು ವಿಕೆಟ್ ಪಡೆದಿದ್ದ ಬೂಮ್ರಾ, SENA (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ) ದೇಶಗಳಲ್ಲಿ 150 ವಿಕೆಟ್ಗಳನ್ನು ಪಡೆದ ಏಷ್ಯಾದ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ, ವಿದೇಶಗಳಲ್ಲಿ ಅತಿಹೆಚ್ಚು (12) ಸಲ ಐದು ವಿಕೆಟ್ ಗೊಂಚಲು ಸಾಧನೆ ಮಾಡಿದ ಭಾರತೀಯ ಎಂಬ ದಾಖಲೆಯನ್ನು ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರೊಂದಿಗೆ ಹಂಚಿಕೊಂಡಿದ್ದಾರೆ.

ವಾರದಲ್ಲಿ ಎರಡು ಚಿನ್ನ
ಜೂನ್ 20ರಂದು ಪ್ಯಾರಿಸ್ ಡೈಮಂಡ್ ಲೀಗ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್, ಜೂನ್ 24ರಂದು ನಡೆದ ಗೋಲ್ಡನ್ ಸ್ಟೇಕ್ ಅಥ್ಲೆಟಿಕ್ ಕೂಟದಲ್ಲಿಯೂ ಬಂಗಾರ ಗೆದ್ದಿದ್ದರು.

ಚೋಪ್ರಾ ಅವರು ಜುಲೈ 5ರಂದು ಬೆಂಗಳೂರಿನಲ್ಲಿ ನಡೆಯುವ ಎನ್ಸಿ ಕ್ಲಾಸಿಕ್ ಕೂಟದಲ್ಲಿ ಭಾಗವಹಿಸಲಿದ್ದಾರೆ. ಅವರಿಗೆ, ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್ ಮತ್ತು ಜರ್ಮನಿಯ ಥಾಮಸ್ ರೋಹ್ಲರ್ ಸವಾಲು ಎದುರಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.