ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಡೀಸ್ ಕ್ರಿಕೆಟಿಗ, ಸ್ಪಿನ್ ದಂತಕಥೆ ಸೊನಿ ರಾಮದಿನ್ ನಿಧನ

Last Updated 28 ಫೆಬ್ರುವರಿ 2022, 16:02 IST
ಅಕ್ಷರ ಗಾತ್ರ

ಪೋರ್ಟ್‌ ಆಫ್‌ ಸ್ಪೇನ್ (ಪಿಟಿಐ): ವೆಸ್ಟ್ ಇಂಡೀಸ್ ಕ್ರಿಕೆಟ್ ತಂದ ದಿಗ್ಗಜ ಸ್ಪಿನ್ ಬೌಲರ್ ಸೊನಿ ರಾಮದಿನ್ (92) ಭಾನುವಾರ ರಾತ್ರಿ ನಿಧನರಾದರು.

1950ರಲ್ಲಿ ಇಂಗ್ಲೆಂಡ್‌ನಲ್ಲಿ ಮೊದಲ ಬಾರಿ ಟೆಸ್ಟ್ ಸರಣಿ ಜಯಿಸಿದ್ದ ವೆಸ್ಟ್ ಇಂಡೀಸ್ ತಂಡದಲ್ಲಿ ರಾಮದಿನ್ ಆಡಿದ್ದರು. ವರು ಓಲ್ಡ್ ಟ್ರಾಫರ್ಡ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಒಟ್ಟು 43 ಟೆಸ್ಟ್‌ಗಳಲ್ಲಿ ಆಡಿದ ಅವರು 158 ವಿಕೆಟ್‌ಗಳನ್ನು ಗಳಿಸಿದ್ದರು.

‘ವೆಸ್ಟ್ ಇಂಡೀಸ್ ಕ್ರಿಕೆಟ್‌ನ ದಿಗ್ಗಜರಲ್ಲಿ ಒಬ್ಬರಾಗಿರುವ ರಾಮದಿನ್ ನಿಧನರಾಗಿದ್ದಾರೆ. ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಬೆಂಬಲ ವ್ಯಕ್ತಪಡಿಸುತ್ತೇವೆ’ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ತಿಳಿಸಿದೆ.

72 ವರ್ಷಗಳ ಹಿಂದೆ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಬಾರಿ ಟೆಸ್ಟ್ ಗೆದ್ದಾಗ ರಾಮದಿನ್ ಅವರು 152 ರನ್‌ಗಳಿಗೆ 11 ವಿಕೆಟ್ ಗಳಿಸಿದ್ದರು.

‘ರಾಮದಿನ್ ಅವರು ಬಹಳ ಪ್ರತಿಭಾವಂತ ಮತ್ತು ಪರಿಣಾಮಕಾರಿ ಸ್ಪಿನ್ನರ್ ಆಗಿದ್ದರು. ಅವರ ಕುರಿತು ಹಲವು ದಂತಕಥೆಗಳಿವೆ. ಆ ಕಾಲದಲ್ಲಿ ಆಲ್ಫ್ ವ್ಯಾಲೆಂಟಿನ್ ಮತ್ತು ರಾಮದಿನ್ ಅವರ ಜೋಡಿಯು ಸ್ಪಿನ್‌ ಬೌಲಿಂಗ್‌ನಲ್ಲಿ ವಿಂಡೀಸ್ ತಂಡದ ಜಯಕ್ಕೆ ಮಹತ್ವದ ಕಾಣಿಕೆ ನೀಡಿತ್ತು. 1950ರ ಸರಣಿ ಗೆಲುವು ವಿಂಡೀಸ್ ಕ್ರಿಕೆಟ್‌ನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಟ್ಟ ಸಾಧನೆಯಾಗಿದೆ‘ ಎಂದು ವಿಂಡೀಸ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರಿಕಿ ಸ್ಕೆರಿಟ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT