ಮಂಗಳವಾರ, ಆಗಸ್ಟ್ 16, 2022
29 °C

ಟೆಸ್ಟ್‌ ಕ್ರಿಕೆಟ್: ಬೆನ್ ಸ್ಟೋಕ್ಸ್‌ ಸಿಡಿಲಬ್ಬರದ ಶತಕ

ಪಿಟಿಐ/ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಬಾರ್ಬಡೀಸ್: ಅರ್ಧ ಡಜನ್ ಸಿಕ್ಸರ್ ಸಿಡಿಸಿದ ಬೆನ್ ಸ್ಟೋಕ್ಸ್ ಇಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಸಿಡಿಲಬ್ಬರದ ಶತಕ ದಾಖಲಿಸಿದರು. 

ಕೆನ್ಸಿಂಗ್ಟನ್ ಓವೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನದಾಟದಲ್ಲಿ ಸ್ಟೋಕ್ಸ್‌  128 ಎಸೆತಗಳಲ್ಲಿ 120 ರನ್ ಗಳಿಸಿದರು. ಅದರಲ್ಲಿ 11 ಬೌಂಡರಿಗಳೂ ಇದ್ದವು. ಇಂಗ್ಲೆಂಡ್ ತಂಡವು 150.5 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 507 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಅದಕ್ಕುತ್ತರವಾಗಿ ವಿಂಡೀಸ್  ದಿನದಾಟದ ಅಂತ್ಯಕ್ಕೆ 31 ಓವರ್‌ಗಳಲ್ಲಿ 1 ವಿಕೆಟ್‌ಗೆ 77 ರನ್ ಗಳಿಸಿತು. 

ಪಂದ್ಯದ ಮೊದಲ ದಿನದಾಟದಲ್ಲಿ ನಾಯಕ ಜೋ ರೂಟ್ ಶತಕ ಬಾರಿಸಿ ಕ್ರೀಸ್‌ನಲ್ಲಿ ಉಳಿದಿದ್ದರು. ಆಟ ಮುಂದುವರಿಸಿದ ಅವರು ಸ್ಟೋಕ್ಸ್‌ ಅವರೊಂದಿಗೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ  129 ರನ್‌ ಸೇರಿಸಿದರು. ಇದರಿಂದಾಗಿ ತಂಡವು ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು.

ಇದೇ ಸಂದರ್ಭದಲ್ಲಿ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು ಐದು ಸಾವಿರ ರನ್‌ ಗಳಿಸಿದ  ಆಟಗಾರರ ಸಾಲಿಗೆ ಸೇರಿದರು. 

ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್
ಇಂಗ್ಲೆಂಡ್:
150.5 ಓವರ್‌ಗಳಲ್ಲಿ 9ಕ್ಕೆ 507 (ಜೋ ರೂಟ್ 153, ಬೆನ್ ಸ್ಟೋಕ್ಸ್ 120, ಜಾನಿ ಬೆಸ್ಟೊ 20, ಬೆನ್ ಫೋಕ್ಸ್ 33, ಕ್ರಿಸ್ ವೋಕ್ಸ್ 41, ವೀರಸ್ವಾಮಿ ಪೆರುಮಾಳ್ 126ಕ್ಕೆ3, ಕೆಮರ್ ರೋಚ್ 68ಕ್ಕೆ2)
ವೆಸ್ಟ್ ಇಂಡೀಸ್: 27 ಓವರ್‌ಗಳಲ್ಲಿ 1 ವಿಕೆಟ್‌ಗೆ 71 (ಕ್ರೇಗ್ ಬ್ರಾಥ್‌ವೇಟ್ ಬ್ಯಾಟಿಂಗ್ 28, ಶಾಮ್ರಾ ಬ್ರೂಕ್ಸ್ ಬ್ಯಾಟಿಂಗ್ 31, ಮ್ಯಾಥ್ಯೂ ಫಿಷರ್ 18ಕ್ಕೆ1)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು