ಸೋಮವಾರ, ಡಿಸೆಂಬರ್ 6, 2021
23 °C

ಭಾರತ ವಿರುದ್ಧದ ಟೆಸ್ಟ್‌ನಲ್ಲಿ ಕಣಕ್ಕಿಳಿದ ಕಿವೀಸ್‌ ಆಟಗಾರ ರಚಿನ್‌ ಯಾರು?

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ಕ್ರಿಕೆಟ್‌ ರಂಗದ ದಂಥಕತೆಗಳಾದ ಸಚಿನ್‌ ತೆಂಡೂಲ್ಕರ್‌ ಮತ್ತು ರಾಹುಲ್‌ ದ್ರಾವಿಡ್‌ ಅವರ ಹೆಸರನ್ನು ಪ್ರತಿನಿಧಿಸುವಂಥ ವಿಶೇಷವಾದ ಹೆಸರನ್ನು ಹೊಂದಿರುವ ರಚಿನ್‌ ರವೀಂದ್ರ ಅವರು ಗುರುವಾರ ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ಭಾರತದ ವಿರುದ್ಧದ ಟೆಸ್ಟ್‌ನಲ್ಲಿ ಅಂತರರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ನ್ಯೂಜಿಲೆಂಡ್‌ ಪರ ಪದಾರ್ಪಣೆ ಮಾಡಿದ್ದಾರೆ.

ರಚಿನ್‌ ಎಂಬ ಹೆಸರಿನಲ್ಲಿ ‘ರ’ ರಾಹುಲ್‌ ದ್ರಾವಿಡ್‌ ಅವರ ಹೆಸರನ್ನು ಪ್ರತಿನಿಧಿಸಿದರೆ, ‘ಚಿನ್‌‘ ಸಚಿನ್‌ ಹೆಸರನ್ನು ಪ್ರತಿನಿಧಿಸುವಂತಿದೆ.

ಈ ವರ್ಷದ ಆರಂಭದಲ್ಲಿ ಸೌತಾಂಪ್ಟನ್‌ನಲ್ಲಿ ನಡೆದ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಸೋಲಿಸಿದ್ದ ನ್ಯೂಜಿಲೆಂಡ್‌ ತಂಡದ ಭಾಗವಾಗಿ ರಚಿನ್‌ ರವೀಂದ್ರ ಕೂಡ ಇದ್ದರು.

1990ರ ದಶಕದಲ್ಲಿ ನ್ಯೂಜಿಲೆಂಡ್‌ಗೆ ತೆರಳಿದ್ದ ಬೆಂಗಳೂರಿನ ಸಾಫ್ಟ್‌ವೇರ್ ಸಿಸ್ಟಮ್ ಆರ್ಕಿಟೆಕ್ಟ್ ರವಿ ಕೃಷ್ಣಮೂರ್ತಿ ಎಂಬುವವರು ಅಲ್ಲಿಯೇ ನೆಲೆಸಿದರು. ರವಿ ಕೃಷ್ಣಮೂರ್ತಿ ಅವರು ರವೀಂದ್ರ ಅವರ ತಂದೆ. ಅವರು ನ್ಯೂಜಿಲೆಂಡ್‌ನ ‘ಹಟ್ ಹಾಕ್ಸ್ ಕ್ಲಬ್‌’ನ ಸಂಸ್ಥಾಪಕರು. ಈ ಕ್ಲಬ್‌ ಪ್ರತಿ ಬೇಸಿಗೆಯಲ್ಲಿ ನ್ಯೂಜಿಲೆಂಡ್‌ನ ಆಟಗಾರರನ್ನು ಭಾರತಕ್ಕೆ ಕರೆತರುತ್ತದೆ. ಈ ಕುರಿತು ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. 

‘ಹಟ್ ಹಾಕ್ಸ್’ ತಂಡದೊಂದಿಗೆ 2011ರಿಂದಲೂ ಭಾರತಕ್ಕೆ ಬರುತ್ತಿರುವ ರಚಿನ್‌ ರವೀಂದ್ರ ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನಲ್ಲಿ ಕ್ರಿಕೆಟ್‌ ಆಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು