ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ ತಂಡಕ್ಕೆ ವೊಲ್ವಾರ್ಡ್‌ ನಾಯಕಿ

Published 31 ಮೇ 2024, 18:28 IST
Last Updated 31 ಮೇ 2024, 18:28 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್: ಅಗ್ರ ಕ್ರಮಾಂಕದ ಬ್ಯಾಟರ್ ಲಾರಾ ವೊಲ್ವಾರ್ಡ್‌ ಅವರು ಜೂನ್‌ 16ರಿಂದ ನಡೆಯುವ ಭಾರತ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾದ ಟೆಸ್ಟ್‌ ಮತ್ತು ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.

ಬೆಂಗಳೂರಿನಲ್ಲಿ ಮೂರು ಏಕದಿನ ಪಂದ್ಯಗಳು ಮತ್ತು ಚೆನ್ನೈನಲ್ಲಿ ಒಂದು ಟೆಸ್ಟ್‌ ಮತ್ತು ಮೂರು ಟಿ20 ಪಂದ್ಯಗಳು ನಡೆಯಲಿವೆ. ಏಕದಿನ ಮತ್ತು ಟೆಸ್ಟ್‌ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಟಿ20 ತಂಡವನ್ನು ತಡವಾಗಿ ಪ್ರಕಟಿಸಲಿದೆ.

ಅನುಭವಿ ಆಟಗಾರ್ತಿಯರಾದ ಲಾರಾ ಗುಡಾಲ್ (ಮಂಡಿರಜ್ಜು ಗಾಯ), ಕ್ಲೋಯ್ ಟ್ರಯಾನ್ (ಬೆನ್ನುನೋವು) ಮತ್ತು ಅಯಂಡಾ ಹ್ಲುಬಿ (ತೊಡೆಸಂದು ನೋವು) ಚೇತರಿಸಿಕೊಳ್ಳುತ್ತಿದ್ದು, ಏಕದಿನ ಮತ್ತು ಟೆಸ್ಟ್‌ ತಂಡಕ್ಕ ಅವರು ಅಲಭ್ಯರಾಗಿದ್ದಾರೆ. ಆದರೆ, ಟಿ20 ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಟೆಸ್ಟ್‌ ಮತ್ತು ಏಕದಿನ ತಂಡ ಹೀಗಿದೆ: ಲಾರಾ ವೊಲ್ವಾರ್ಡ್‌ (ನಾಯಕಿ), ಅನೆಕೆ ಬೋಶ್‌, ತಸ್ಮಿನ್ ಬ್ರಿಟ್ಜ್‌, ನಡಿನ್ ಡಿ. ಕ್ಲರ್ಕ್, ಆನ್ನೆರಿ ಡೆರ್ಕ್ಸೆನ್, ಮೈಕೆ ಡಿ. ರಿಡ್ಡರ್, ಸಿನಾಲೊ ಜಾಫ್ತ, ಮರಿಜಾನೆ ಕಪ್‌, ಅಯಮೊಂಗಾ ಖಾಕ, ಮಸಾಬಟಾ ಕ್ಲಾಸ್, ಸುನೆ ಲೂಸ್, ಎಲಿಜ್ ಮಾರಿ ಮಾರ್ಕ್ಸ್, ನೊಂಕುಲುಲೆಕೊ ಮಾಬಾ, ತುಮಿ ಸೆಖುಖುನೆ, ನೊಂದುಮಿಸೊ ಶಂಗಾಸೆ, ಡೆಲ್ಮಿ ಟಕರ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT