ಗೋಲ್ಡ್ ಕೋರ್ಸ್ (ಆಸ್ಟ್ರೇಲಿಯಾ): ಭಾರತ ‘ಎ’ ತಂಡ ಏಕೈಕ ಮಹಿಳಾ ‘ಅನಧಿಕೃತ’ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ‘ಎ’ ವಿರುದ್ಧ ಸೋಲಿನ ಭೀತಿಯಲ್ಲಿದೆ. ಗೆಲುವಿಗೆ 289 ರನ್‌ಗಳ ಸವಾಲು ಎದುರಿಸಿರುವ ಭಾರತ, ಮೂರನೇ ದಿನವಾದ ಶನಿವಾರ ಆಟ ಮುಗಿದಾಗ 6 ವಿಕೆಟ್‌ಗೆ 149 ರನ್ ಗಳಿಸಿ ಪರದಾಡುತ್ತಿದೆ.

ಭಾರತಕ್ಕೆ ಇನ್ನೂ 140 ರನ್‌ಗಳ ಅಗತ್ಯವಿದ್ದು, ನಾಲ್ಕು ವಿಕೆಟ್‌ಗಳು ಉಳಿದಿವೆ.

ಮ್ಯಾಡಿ ಡಾರ್ಕ್ ಅವರ ಅಜೇಯ 105 ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ (ಶುಕ್ರವಾರ: 7 ವಿಕೆಟ್‌ಗೆ 164) 92 ಓವರುಗಳಲ್ಲಿ 260 ರನ್‌ಗಳ ಉತ್ತಮ ಮೊತ್ತ ಪೇರಿಸಿತು. ಭಾರತದ ಕಡೆ ನಾಯಕಿಯೂ ಆಗಿರುವ ಸ್ಪಿನ್ನರ್ ಮಿನ್ನು ಮಣಿ 92 ರನ್ನಿಗೆ 6 ವಿಕೆಟ್ ಉರುಳಿಸಿದರು.

ಆರಂಭ ಆಟಗಾರ್ತಿ ಪ್ರಿಯಾ ಪುನಿಯಾ (36, 108ಎ, 4x7) ಮತ್ತು ಮೂರನೇ ಕ್ರಮಾಂಕದ ಬ್ಯಾಟರ್ ಶುಭಾ ಸತೀಶ್ (45, 98ಎ, 4x3) ಅವರ ಉಪಯುಕ್ತ ಆಟದಿಂದ ಭಾರತ ಒಂದು ಹಂತದಲ್ಲಿ 1 ವಿಕೆಟ್‌ಗೆ 89 ರನ್ ಗಳಿಸಿ ಉತ್ತಮ ಆರಂಭ ಮಾಡಿತ್ತು. ಆದರೆ ಸ್ಪಿನ್ನರ್‌ಗಳಾದ ಚಾರ್ಲಿ ನಾಟ್ (27ಕ್ಕೆ2) ಮತ್ತು ಗ್ರೇಸ್ ಪಾರ್ಸನ್ಸ್ (27ಕ್ಕೆ2) ಪೆಟ್ಟುನೀಡಿದರು. 21 ಓವರುಗಳಲ್ಲಿ 42 ರನ್‌ಗಳ ಅಂತರದಲ್ಲಿ 5 ವಿಕೆಟ್‌ಗಳು ಉರುಳಿ ಪ್ರವಾಸಿ ತಂಡ ಒತ್ತಡಕ್ಕೆ ಒಳಗಾಯಿತು.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ ಎ: 212, ಭಾರತ ‘ಎ’: 184;

ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ ಎ: 92 ಓವರುಗಳಲ್ಲಿ 260 (ಎಮ್ಮಾ ಡಿ ಬ್ರುಗೆ 58, ಮ್ಯಾಡಿ ಡಾರ್ಕ್ ಔಟಾಗದೇ 105, ಗ್ರೇಸ್ ಪಾರ್ಸನ್ಸ್ 35; ಮಿನ್ನುಮಣಿ 92ಕ್ಕೆ6, ಸಯಾಲಿ ಸಾತ್ಗರೆ 41ಕ್ಕೆ2, ಪ್ರಿಯಾ ಮಿಶ್ರ 59ಕ್ಕೆ2)

ಭಾರತ ‘ಎ’: 68 ಓವರುಗಳಲ್ಲಿ 6 ವಿಕೆಟ್‌ಗೆ 149 (ಪ್ರಿಯಾ ಪುನಿಯಾ 36, ಶುಭಾ ಸತೀಶ್ 45; ಚಾರ್ಲಿ ನಾಟ್ 27ಕ್ಕೆ2, ಗ್ರೇಸ್ ಪಾರ್ಸನ್ಸ್ 27ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.