ಬುಧವಾರ, ಜೂನ್ 29, 2022
23 °C

ಮಹಿಳೆಯರ ಟಿ20 ಚಾಲೆಂಜ್: ಸೂಪರ್ ನೋವಾಸ್–ವೆಲೋಸಿಟಿ ಫೈನಲ್‌

ಪಿಟಿಐ Updated:

ಅಕ್ಷರ ಗಾತ್ರ : | |

ಪುಣೆ: ಸೂಪರ್‌ನೋವಾಸ್ ಮತ್ತು ವೆಲೋಸಿಟಿ ತಂಡಗಳು ಐಪಿಎಲ್‌ ಅಂಗವಾಗಿ ನಡೆಯುತ್ತಿರುವ ಮಹಿಳಾ ಚಾಲೆಂಜ್ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಪಂದ್ಯ ಶನಿವಾರ ನಡೆಯಲಿದೆ.

ಗುರುವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ವೆಲೋಸಿಟಿ ತಂಡವನ್ನು ಟ್ರೇಲ್‌ಬ್ಲೇಜರ್ಸ್‌ 16 ರನ್‌ಗಳಿಂದ ಮಣಿಸಿತು. ಆದರೆ ಉತ್ತಮ ರನ್‌ರೇಟ್ ಆಧಾರದಲ್ಲಿ ವೆಲೋಸಿಟಿ ಫೈನಲ್ ಪ್ರವೇಶಿಸಿತು.

191 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ವೆಲೋಸಿಟಿ 9 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಕಿರಣ್ ಪ್ರಭು ನವಗಿರೆ 34 ಎಸೆತಗಳಲ್ಲಿ 69 ರನ್ ಗಳಿಸಿ ಮಿಂಚಿದರು. ತಲಾ 5 ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಅವರು ಸಿಡಿಸಿದರು.

ಟಾಸ್ ಗೆದ್ದ ವೆಲೊಸಿಟಿ ತಂಡದ ನಾಯಕಿ ದೀಪ್ತಿ ಶರ್ಮಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಬ್ಯಾಟರ್ ಎಸ್. ಮೇಘನಾ ಮತ್ತು ಜೆಮಿಮಾ ರಾಡ್ರಿಗಸ್ ಅವರ ಭರ್ಜರಿ ಅರ್ಧಶತಕಗಳ ಬಲದಿಂದ ಟ್ರೇಲ್‌ಬ್ಲೇಜರ್ಸ್ ದೊಡ್ಡ ಮೊತ್ತ ದಾಖಲಿಸಿತು.

ಮೂರನೇ ಓವರ್‌ನಲ್ಲಿಯೇ ಟ್ರೇಲ್‌ಬ್ಲೇಜರ್ಸ್ ನಾಯಕಿ ಸ್ಮೃತಿ ಮಂದಾನ ಔಟಾದರು. ಆದರೆ ಮೇಘನಾ (73; 47ಎ, 4X7, 6X4) ಮತ್ತು ಜೆಮಿಮಾ (66; 44ಎ, 4X7, 6X1) ಎರಡನೇ ವಿಕೆಟ್ ಜೊತೆಯಾಟದಲ್ಲಿ 113 ರನ್‌ ಸೇರಿಸಿದರು.  

ಸಂಕ್ಷಿಪ್ತ ಸ್ಕೋರು
ಟ್ರೇಲ್‌ಬ್ಲೇಜರ್ಸ್: 20 ಓವರ್‌ಗಳಲ್ಲಿ 5ಕ್ಕೆ190 (ಸಬ್ಬಿನೇನಿ ಮೇಘನಾ 73, ಜೆಮಿಮಾ ರಾಡ್ರಿಗಸ್ 66, ಹೆಯಲಿ ಮ್ಯಾಥ್ಯೂಸ್ 27; ಸಿಮ್ರನ್ ಬಹಾದೂರ್ 31ಕ್ಕೆ2, ಸ್ನೇಹ ರಾಣಾ 37ಕ್ಕೆ1, ಅಯಬೋಂಗಾ ಕಾಕಾ 27ಕ್ಕೆ1)

ವೆಲೋಸಿಟಿ: 20 ಓವರ್‌ಗಳಲ್ಲಿ 9ಕ್ಕೆ 174 (ಶಫಾಲಿ ವರ್ಮಾ 29, ಕಿರಣ್ ಪ್ರಭು 69; ರೇಣುಕಾ ಸಿಂಗ್ 32ಕ್ಕೆ1, ಹಯೆಲಿ ಮ್ಯಾಥ್ಯೂಸ್ 20ಕ್ಕೆ1, ಸಲ್ಮಾ ಖಾತೂನ್ 22ಕ್ಕೆ1, ರಾಜೇಶ್ವರಿ ಗಾಯಕವಾಡ್ 44ಕ್ಕೆ2, ಪೂನಂ ಯಾದವ್ 33ಕ್ಕೆ2, ಸೋಫಿಯಾ ಡಂಕ್ಲಿ 8ಕ್ಕೆ1).

ಫಲಿತಾಂಶ: ಟ್ರೇಲ್‌ಬ್ಲೇಜರ್ಸ್‌ಗೆ 16 ರನ್‌ಗಳ ಜಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು