ಶನಿವಾರ, ಜನವರಿ 18, 2020
20 °C

ಮಹಿಳಾ ಕ್ರಿಕೆಟ್: ವೇದಾ, ಹರ್ಮನ್‌ಪ್ರೀತ್‌, ಸ್ಮೃತಿ ‘ಚಾಲೆಂಜ್’

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಹರ್ಮನ್‌ಪ್ರೀತ್ ಕೌರ್‌, ಸ್ಮೃತಿ ಮಂದಾನ ಮತ್ತು ಕರ್ನಾಟಕದ ವೇದಾ ಕೃಷ್ಣಮೂರ್ತಿ ಮಹಿಳೆಯರ ಟ್ವೆಂಟಿ–20 ಚಾಲೆಂಜರ್‌ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ತಂಡಗಳನ್ನು ಮುನ್ನಡೆಸುವರು.

ಇಂಡಿಯಾ ’ಎ’ಗೆ ಹರ್ಮನ್‌ಪ್ರೀತ್ ಕೌರ್‌, ಇಂಡಿಯಾ ‘ಬಿ’ಗೆ ಸ್ಮೃತಿ ಮಂದಾನ ಮತ್ತು ಇಂಡಿಯಾ ‘ಸಿ’ಗೆ ವೇದಾ ಕೃಷ್ಣಮೂರ್ತಿ ಅವರನ್ನು ನಾಯಕಿಯರನ್ನಾಗಿ ಆಯ್ಕೆ ಮಾಡಲಾಗಿದೆ. ಪಂದ್ಯಗಳು ಜನವರಿ 4ರಿಂದ 11ರ ವರೆಗೆ ಕಟಕ್‌ನಲ್ಲಿ ನಡೆಯಲಿವೆ. 

ಸೋಮವಾರ ನಡೆದ ಅಖಿಲ ಭಾರತ ಮಹಿಳಾ ಕ್ರಿಕೆಟ್‌ನ ಆಯ್ಕೆ ಸಮಿತಿಯ ಸಭೆಯಲ್ಲಿ ತಂಡಗಳನ್ನು ಆಯ್ಕೆ ಮಾಡಲಾಯಿತು ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ತಂಡಗಳು
ಇಂಡಿಯಾ ‘ಎ‘:
ಹರ್ಮ್‌ನ್‌ಪ್ರೀತ್ ಕೌರ್‌ (ನಾಯಕಿ), ತಾನಿಯಾ ಭಾಟಿಯಾ, ಶಿವಾಲಿ ಶಿಂಧೆ (ವಿಕೆಟ್‌ ಕೀಪರ್‌ಗಳು), ಜಸಿಯಾ ಅಕ್ತರ್‌, ಪ್ರಿಯಾ ಪೂನಿಯಾ, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ಸ್ನೇಹಾ ರಾಣಾ, ಮಾನಸಿ ಜೋಶಿ, ಮೇಘನಾ ಸಿಂಗ್‌, ಕೋಮಲ್‌ ಜಂಜಡ್, ಮೀನು ರಾಣಿ, ರಾಧಾ ಯಾದವ್‌, ಭಾರತಿ ಫೂಲ್‌ಮಲಿ.

ಭಾರತ ‘ಬಿ‘: ಸ್ಮೃತಿ ಮಂದಾನ (ನಾಯಕಿ), ಸುಶ್ಮಾ ವರ್ಮಾ, ಆರ್‌.ಕಲ್ಪನಾ (ವಿಕೆಟ್‌ ಕೀಪರ್‌ಗಳು), ವನಿತಾ ವಿ.ಆರ್‌, ಜೆಮಿಮಾ ರಾಡ್ರಿಗಸ್‌, ಅನುಜಾ ಪಾಟೀಲ್‌, ಪೂನಂ ಯಾದವ್‌, ಪೂಜಾ ವಸ್ತ್ರಕಾರ್‌, ಶಿಖಾ ಪಾಂಡೆ, ರೇಣುಕಾ ಸಿಂಗ್‌, ಅಂಜಲಿ ಸರ್ವಾಣಿ, ಸುಶ್ರೀ ದಿವ್ಯದರ್ಶಿನಿ, ಟಿ.ಪಿ.ಕನ್ವರ್‌, ರಿಚಾ ಘೋಷ್‌.

ಇಂಡಿಯಾ ‘ಸಿ’: ವೇದಾ ಕೃಷ್ಣಮೂರ್ತಿ (ನಾಯಕಿ), ನುಶತ್ ಪರ್ವೀನ್‌, ಶಫಾಲಿ ವರ್ಮಾ (ವಿಕೆಟ್‌ ಕೀಪರ್‌ಗಳು), ಯಸ್ತಿಕಾ ಭಾಟಿಯಾ, ಡಿ.ಹೇಮಲತಾ, ಹರ್ಲೀನ್‌ ಡಿಯೋಲ್‌, ಮನಾಲಿ ದಕ್ಷಿಣಿ, ಜಿನ್ಸಿ ಜಾರ್ಜ್‌, ಅರುಂಧತಿ ರೆಡ್ಡಿ, ಮೋನಿಕಾ ಪಟೇಲ್‌, ವೃಷಾಲಿ ಭಗತ್‌, ರಾಜೇಶ್ವರಿ ಗಾಯಕವಾಡ್‌, ತನುಶ್ರೀ ಸರ್ಕಾರ್‌, ಮಾಧುರಿ ಮೆಹ್ತಾ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು