ಇಂಗ್ಲೆಂಡ್‌ಗೆ ಮಣಿದ ಬಾಂಗ್ಲಾದೇಶ
ಶಾರ್ಜಾ (ಪಿಟಿಐ): ಡ್ಯಾನಿ ವ್ಯಾಟ್ ಹಾಜ್ (41;40ಎ) ಅವರ ಬ್ಯಾಟಿಂಗ್ ಬಲದಿಂದ ಇಂಗ್ಲೆಂಡ್ ತಂಡವು ಶನಿವಾರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 21 ರನ್‌ಗಳಿಂದ ಮಣಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಆಂಗ್ಲ ಪಡೆ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 118 ರನ್ ಗಳಿಸಿತು. ಡ್ಯಾನಿ ಮತ್ತು ಮೈಯಾ ಬೌಷಿಯರ್ (23) ಮೊದಲ ವಿಕೆಟ್‌ಗೆ 48 ರನ್ ಸೇರಿಸಿದ್ದರು. ಆದರೆ, ನಂತರ ಬಂದವರು ನಿರಾಸೆ ಮೂಡಿಸಿದರು.
ಸಾಧಾರಣ ಮೊತ್ತದ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶವು ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ಗೆ 97 ರನ್ ಗಳಿಸಿ ಹೋರಾಟವನ್ನು ಮುಗಿಸಿತು. ಶೋಭನಾ ಮೊಸ್ತರಿ (44;48ಎ) ಏಕಾಂಗಿ ಹೋರಾಟ ನಡೆಸಿದರೂ ಗೆಲುವಿಗೆ ಸಾಕಾಗಲಿಲ್ಲ. ಟೂರ್ನಿಯಲ್ಲಿ ಇಂಗ್ಲೆಂಡ್‌ಗೆ ಮೊದಲ ಗೆಲುವಾದರೆ, ಬಾಂಗ್ಲಾ ತಂಡಕ್ಕೆ ಸತತ ಎರಡನೇ ಸೋಲಾಗಿದೆ.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್: 20 ಓವರ್‌ಗಳಲ್ಲಿ 7ಕ್ಕೆ 118 (ಮೈಯಾ ಬೌಷಿಯರ್ 23, ಡ್ಯಾನಿ ವ್ಯಾಟ್ ಹಾಜ್ 41; ನಹೀದಾ ಅಕ್ತರ್ 32ಕ್ಕೆ 2, ಫಾಹಿಮಾ ಖಾತುನ್ 18ಕ್ಕೆ 2, ರಿತು ಮೋನಿ 24ಕ್ಕೆ 2). ಬಾಂಗ್ಲಾದೇಶ: 20 ಓವರ್‌ಗಳಲ್ಲಿ 7ಕ್ಕೆ 97 (ಶೋಭನಾ ಮೊಸ್ತರಿ 44; ಲಿನ್ಸೆ ಸ್ಮಿತ್ 11ಕ್ಕೆ 2, ಚಾರ್ಲಿ ಡೀನ್ 22ಕ್ಕೆ 2). ಫಲಿತಾಂಶ: ಇಂಗ್ಲೆಂಡ್‌ಗೆ 21 ರನ್‌ಗಳ ಜಯ.