ಸೋಮವಾರ, ಮಾರ್ಚ್ 30, 2020
19 °C

ಮಹಿಳಾ ಟಿ20 ವಿಶ್ವಕಪ್‌: ನ್ಯೂಜಿಲೆಂಡ್‌ ವಿರುದ್ಧ ಭಾರತದ ಸ್ಪರ್ಧಾತ್ಮಕ ಮೊತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬೋರ್ನ್‌: ಜಂಕ್ಷನ್‌ ಓವಲ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್‌ ನಡುವಣ ಮಹಿಳಾ ಟಿ20 ವಿಶ್ವಕಪ್‌ ಗ್ರೂಪ್‌ ಹಂತದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿರುವ ಭಾರತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 133 ರನ್‌ಗಳನ್ನು ಕಲೆ ಹಾಕಿದೆ. 

ಆರಂಭಿಕ ಆಟಗಾರ್ತಿ ಶಫಾಲಿ 34 ಬಾಲ್‌ಗಳಿಂದ 46 ರನ್‌ ಸಿಡಿಸಿದರೆ, ತಾನಿಯಾ ಬಾಟ್ಯಾ 25 ಬಾಲ್‌ಗಳಿಂದ 23 ಗಳಿಸಿದರು. ರಾಧಾ ಯಾದವ್‌ ಅವರು 9 ಬಾಲ್‌ಗಳಿಂದ 14 ರನ್‌ ಸಿಡಿಸಿ ತಂಡದ ಮೊತ್ತಕ್ಕೆ ಅಲ್ಪ ಕಾಣಿಕೆ ನೀಡಿದರು. 

ಇನ್ನು ಬೌಲಿಂಗ್‌ನಲ್ಲಿ ನ್ಯೂಜಿಲೆಂಡ್‌ ಪರ ರೋಸ್‌ಮೇರಿ ಮೇರ್‌ 27 ರನ್‌ ನೀಡಿ 2 ವಿಕೆಟ್‌ ಪಡೆದರೆ, ಅಮೇಲಿಯಾ ಕೇರ್‌ 21 ರನ್‌ ನೀಡಿ 2 ವಿಕಟ್‌ ಪಡೆದರು. 

ಭಾರತ ನೀಡಿದ 133 ರನ್‌ಗಳ ಸಾಧಾರಣ ಮೊತ್ತ ಬೆನ್ನು ಹತ್ತಿರುವ ನ್ಯೂಜಿಲೆಂಡ್‌ 6 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 31 ರನ್‌ ಗಳಿಸಿ ಆಡುತ್ತಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು