ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಟ್ವೆಂಟಿ–20 ವಿಶ್ವಕಪ್: ಮಂದಾನ ಅರ್ಧಶತಕ, ಭಾರತಕ್ಕೆ ಶರಣಾದ ಆಸ್ಟ್ರೇಲಿಯಾ

Last Updated 18 ನವೆಂಬರ್ 2018, 2:04 IST
ಅಕ್ಷರ ಗಾತ್ರ

ಪ್ರಾವಿಡೆನ್ಸ್‌, ಗಯಾನ: ಮೂರು ಪಂದ್ಯಗಳಲ್ಲಿ ಸತತವಾಗಿ ಗೆದ್ದಿದ್ದ ಭಾರತ ತಂಡ ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು 48 ರನ್‌ಗಳಿಂದ ಮಣಿಸಿತು.

ಶನಿವಾರ ನಡೆದ ‘ಬಿ’ ಗುಂಪಿನ ಅಂತಿಮ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಸ್ಮೃತಿ ಮಂದಾನ (83; 55 ಎಸೆತ, 3 ಸಿಕ್ಸರ್‌, 9 ಬೌಂಡರಿ) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 167ರನ್‌ ಕಲೆಹಾಕಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 19.4 ಓವರ್‌ಗಳಲ್ಲಿ 119ರನ್‌ಗಳಿಗೆ ಆಲೌಟ್‌ ಆಯಿತು.

ಮಂದಾನ ಸಾವಿರ ರನ್‌: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು. ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ಎದೆಗುಂದದೆ ಬ್ಯಾಟಿಂಗ್ ಮಾಡಿದ ಸ್ಮೃತಿ ಮಂದಾನ ಜೀವನಶ್ರೇಷ್ಠ ಮೊತ್ತ ದಾಖಲಿಸಿದರು. 49 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದಾಗ ಜೊತೆಗೂಡಿದ ಮಂದಾನ ಮತ್ತು ನಾಯಕಿ ಹರ್ಮನ್‌ ಪ್ರೀತ್ ಕೌರ್‌ (43; 27 ಎಸೆತ, 3 ಸಿಕ್ಸರ್‌, 3 ಬೌಂಡರಿ) 68 ರನ್‌ ಸೇರಿಸಿದರು.

ಸ್ಮೃತಿ ಮಂದಾನ ಸಾವಿರ ರನ್‌ಗಳ ಮೈಲುಗಲ್ಲು ದಾಟಿದರು. ವೇಗವಾಗಿ ಸಾವಿರ ರನ್ ಗಳಿಸಿದ ಭಾರತದ ಆಟಗಾರ್ತಿ ಎಂಬ ಖ್ಯಾತಿಯನ್ನೂ ತಮ್ಮದಾಗಿಸಿಕೊಂಡರು. ಸ್ಮೃತಿ ಮತ್ತು ಕೌರ್‌ ಔಟಾದ ನಂತರ ಭಾರತ ನಿರಂತರ ವಿಕೆಟ್ ಕಳೆದುಕೊಂಡಿತು. ಕೊನೆಯ ಐವರು ಬ್ಯಾಟ್ಸ್‌ವುಮನ್‌ಗಳು ಎರಡಂಕಿ ಮೊತ್ತ ದಾಟಲಾಗದೆ ವಾಪಸಾದರು.

ಸಂಕ್ಷಿಪ್ತ ಸ್ಕೋರು

ಭಾರತ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 167

ಸ್ಮೃತಿ ಮಂದಾನ 83, ಹರ್ಮನ್‌ಪ್ರೀತ್‌ ಕೌರ್‌ 43
ಆ್ಯಷ್ಲೆಗ್‌ ಗಾರ್ಡನರ್‌ 25ಕ್ಕೆ2, ಮೇಗನ್‌ ಶುಟ್‌ 30ಕ್ಕೆ1, ಡೆಲಿಸಾ ಕಿಮಿನ್ಸ್‌ 42ಕ್ಕೆ2, ಎಲಿಸೆ ಪೆರಿ 16ಕ್ಕೆ3

ಆಸ್ಟ್ರೇಲಿಯಾ: 19.4 ಓವರ್‌ಗಳಲ್ಲಿ 119

ಬೆಥ್‌ ಮೂನಿ 19, ಆ್ಯಷ್ಲೆಗ್‌ ಗಾರ್ಡನರ್‌ 20, ಎಲಿಸೆ ಪೆರಿ 39
ಅನುಜಾ ಪಾಟೀಲ 15ಕ್ಕೆ3, ದೀಪ್ತಿ ಶರ್ಮಾ 24ಕ್ಕೆ2, ರಾಧಾ ಯಾದವ್‌ 13ಕ್ಕೆ2, ಪೂನಂ ಯಾದವ್‌ 28ಕ್ಕೆ2

ಫಲಿತಾಂಶ: ಭಾರತಕ್ಕೆ 48ರನ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT