ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟ್ರೆಲ್‌ ಕಂಟಕದ ಸುಳಿಯಲ್ಲೂ ಶತಕ ಸಿಡಿಸಿದ ವಿಲಿಯಮ್ಸನ್‌; ಕಿವೀಸ್‌ 291 ರನ್

ವಿಶ್ವಕಪ್‌ ಕ್ರಿಕೆಟ್‌
Last Updated 22 ಜೂನ್ 2019, 16:44 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್:ಶನಿವಾರ ಇಲ್ಲಿನ ಓಲ್ಡ್ ಟ್ರಾಫರ್ಡ್‌ನಲ್ಲಿ ಟಾಸ್‌ ಗೆದ್ದ ವೆಸ್ಟ್ ಇಂಡೀಸ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡು ನ್ಯೂಜಿಲೆಂಡ್‌ಗೆ ಆರಂಭಿಕ ಆಘಾತ ನೀಡಿತು. ವಿಲಿಯಮ್ಸನ್‌ ಶತಕ ಮತ್ತು ಟೇಲರ್‌ ಅರ್ಧ ಶತಕದ ನೆರವಿನಿಂದತಂಡ ಸವಾಲಿನ ಮೊತ್ತ ಪೇರಿಸಿತು.

ನ್ಯೂಜಿಲೆಂಡ್‌ ನಿಗದಿತ 50ಓವರ್‌ಗಳಲ್ಲಿ 8ವಿಕೆಟ್‌ ನಷ್ಟಕ್ಕೆ 291ರನ್‌ ಗಳಿಸಿತು. ಶೆಲ್ಡನ್‌ ಕಾಟ್ರೆಲ್‌ 4 ವಿಕೆಟ್‌ ಕಬಳಿಸುವ ಮೂಲಕ ಕಿವೀಸ್‌ ಪಾಳಯಕ್ಕೆ ಕಂಟಕವಾಗಿ ಕಾಡಿದರು.

ಕ್ಷಣಕ್ಷಣದ ಸ್ಕೋರ್‌:https://bit.ly/2N3PnOp

ಮೊದಲ ಓವರ್‌ ಪೂರ್ಣಗೊಳ್ಳುವ ಮುನ್ನವೇ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕಿವೀಸ್‌ ಪಡೆಗೆ ನಾಯಕ ಕೇನ್‌ ವಿಲಿಯಮ್ಸನ್‌ ಮತ್ತು ರಾಸ್ ಟೇಲರ್‌ ತಾಳ್ಮೆಯ ಆಟ ನೆರವಾಯಿತು.ಶತಕ ಪೂರೈಸಿದವಿಲಿಯಮ್ಸನ್(148; 14 ಬೌಂಡರಿ, 1 ಸಿಕ್ಸರ್‌) ಕಾಟ್ರೆಲ್‌ ಎಸೆತದಲ್ಲಿಯೇ ವಿಕೆಟ್‌ ನೀಡಿದರು.ಟೇಲರ್‌(69) ಕ್ರಿಸ್‌ ಗೇಲ್‌ ಬೌಲಿಂಗ್‌ನಲ್ಲಿ ಕ್ಯಾಚ್‌ ನೀಡಿದರು.

ಕೆರೀಬಿಯನ್‌ ಪರ ಬೌಲಿಂಗ್‌ ಆರಂಭಿಸಿದ ಶೆಲ್ಡನ್‌ ಕಾಟ್ರೆಲ್‌ ಮೊದಲ ಎಸೆತದಲ್ಲಿಯೇ ಮಾರ್ಟಿನ್‌ ಗಪ್ಟಿಲ್‌ ವಿಕೆಟ್‌ ಗಳಿಸಿ ಕಿವೀಸ್‌ ಪಡೆಗೆ ದೊಡ್ಡ ಹೊಡೆತ ನೀಡಿದರು. ಅದೇ ಓವರ್‌ನ 5ನೇ ಎಸೆತ ಮತ್ತೆ ನ್ಯೂಜಿಲೆಂಡ್‌ ಪಾಲಿಗೆ ಕಂಟಕವಾಯಿತು. ಕಾಲಿನ್‌ ಮನ್ರೊ ಸಹ ರನ್‌ ಖಾತೆ ತೆರೆಯದೆಯೇ ಹೊರ ನಡೆದರು.

ವಿಲಿಯಮ್ಸನ್‌ ಮತ್ತು ಟೇಲರ್‌ ವಿಕೆಟ್‌ ಕಳೆದುಕೊಂಡ ಬಳಿಕ ಜಿಮ್ಮಿ ನೀಶಂ(28) ಮತ್ತು ಗ್ರ್ಯಾಂಡ್‌ (16) ಬಿರುಸಿನ ಹೊಡೆತಗಳ ಮೂಲಕ ತಂಡದ ರನ್‌ ಹೆಚ್ಚಳಕೆ ಕಾರಣರಾದರು. ಕೆರೀಬಿಯನ್ನರ ಪರ ಬ್ರಾಥ್‌ವೇಟ್‌2 ವಿಕೆಟ್‌, ಗೇಲ್‌ ಒಂದು ವಿಕೆಟ್‌ ಹಾಗೂ ಕಾಟ್ರೆಲ್‌ 4 ವಿಕೆಟ್‌ ಪಡೆದರು.

ಐದು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿರುವ ನ್ಯೂಜಿಲೆಂಡ್ ಒಂಬತ್ತು ಪಾಯಿಂಟ್ ಗಳಿಸಿದೆ. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ತಂಡ ಈ ವರೆಗೆ ಸೋಲು ಕಂಡಿಲ್ಲ. ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಮಣಿಸಿ ವಿಶ್ವಕಪ್ ಅಭಿಯಾನ ಆರಂಭಿಸಿದ್ದ ವೆಸ್ಟ್ ಇಂಡೀಸ್ ನಂತರ ನಿರಾಸೆ ಕಂಡಿದೆ. ಮೂರು ಪಂದ್ಯಗಳಲ್ಲಿ ಸೋತಿರುವ ತಂಡದ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಐದು ಪಂದ್ಯಗಳಲ್ಲಿ ಕೇವಲ ಮೂರು ಪಾಯಿಂಟ್ ಕಲೆ ಹಾಕಿರುವ ತಂಡ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಹೀಗಾಗಿ ಸೆಮಿಫೈನಲ್ ಪ್ರವೇಶಿಸುವ ಕನಸು ಕಾಣಬೇಕಾದರೆ ಉಳಿದ ಎಲ್ಲ ಪಂದ್ಯಗಳನ್ನು ಗೆಲ್ಲಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT