ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡು ಪ್ಲೆಸಿ ಶತಕದ ಸೊಬಗು: ಕೊನೆಯ ಪಂದ್ಯ ಗೆದ್ದು ಅಭಿಯಾನ ಮುಗಿಸಿದ ಆಫ್ರಿಕಾ

ಡುಸೆನ್‌, ಕ್ವಿಂಟನ್‌ ಡಿ ಕಾಕ್‌ ಜವಾಬ್ದಾರಿಯುತ ಬ್ಯಾಟಿಂಗ್‌: ಸ್ಟಾರ್ಕ್‌ಗೆ ಎರಡು ವಿಕೆಟ್‌
Last Updated 6 ಜುಲೈ 2019, 20:34 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್‌: ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಆಸೆ ಕೈಚೆಲ್ಲಿರುವ ದಕ್ಷಿಣ ಆಫ್ರಿಕಾ ತಂಡವು ಆಸ್ಟ್ರೇಲಿಯಾ ವಿರುದ್ಧದ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಛಲದ ಆಟ ಆಡಿ ಜಯಗಳಿಸುವ ಮೂಲಕಅಭಿಮಾನಿಗಳ ಮನ ಗೆದ್ದಿತು.

ನಾಯಕ ಫಾಫ್‌ ಡು ಪ್ಲೆಸಿ (100; 94ಎ, 7ಬೌಂ, 2ಸಿ) ಮತ್ತು ವ್ಯಾನ್‌ ಡರ್‌ ಡುಸೆನ್‌ (95; 97ಎ, 4ಬೌಂ, 4ಸಿ) ಶನಿವಾರ ಓಲ್ಡ್‌ ಟ್ರಾಫರ್ಡ್‌ ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿದರು.

ಇದರಿಂದಾಗಿ ತಂಡವು 50 ಓವರ್‌ಗಳಲ್ಲಿ 6 ವಿಕೆಟ್‌ಗೆ 325ರನ್‌ ಪೇರಿಸಿತು.

ಈ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು 49.5 ಓವರ್‌ಗಳಲ್ಲಿ 315 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಹರಿಣಗಳ ತಂಡಕ್ಕೆ ಏಡನ್‌ ಮಾರ್ಕರಮ್‌ (34; 37ಎ, 6ಬೌಂ, 1ಸಿ) ಮತ್ತು ವಿಕೆಟ್‌ ಕೀಪರ್‌ ಕ್ವಿಂಟನ್‌ ಡಿ ಕಾಕ್‌ (52; 51ಎ, 7ಬೌಂ) ಉತ್ತಮ ಆರಂಭ ನೀಡಿದರು.

ಆಸ್ಟ್ರೇಲಿಯಾದ ವೇಗದ ದಾಳಿಯನ್ನು ಸಮರ್ಥವಾಗಿ ಎದುರಿ ಸಿದ ಈ ಜೋಡಿ 69 ಎಸೆತಗಳಲ್ಲಿ ತಂಡದ ಖಾತೆಗೆ 79ರನ್‌ ಸೇರ್ಪಡೆ ಮಾಡಿತು.

12ನೇ ಓವರ್‌ ಬೌಲ್‌ ಮಾಡಿದ ಸ್ಪಿನ್ನರ್‌ ನೇಥನ್‌ ಲಯನ್‌ ಈ ಜೊತೆಯಾಟ ಮುರಿದರು. ಮೂರನೇ ಎಸೆತದಲ್ಲಿ ಮಾರ್ಕರಮ್‌ ಸ್ಟಂಪ್‌ಔಟ್‌ ಆದರು.

ನಂತರ ಡಿ ಕಾಕ್‌ಬಿರುಸಿನ ಆಟಕ್ಕೆ ಮುಂದಾದರು. ಹೀಗಾಗಿ 15ನೇ ಓವರ್‌ನಲ್ಲೇ ತಂಡದ ಮೊತ್ತ 100ರ ಗಡಿ ಮುಟ್ಟಿತು. ಈ ಸಲದ ಟೂರ್ನಿಯಲ್ಲಿ ಮೂರನೇ ಅರ್ಧಶತಕ ದಾಖಲಿಸಿದ ಡಿ ಕಾಕ್‌, 18ನೇ ಓವರ್‌ನಲ್ಲಿ ಔಟಾದರು.

ಪ್ಲೆಸಿ–ಡುಸೆನ್‌ ಜೊತೆಯಾಟದ ರಂಗು: ಆರಂಭಿಕ ಜೋಡಿ ಪೆವಿಲಿಯನ್‌ ಸೇರಿದ ನಂತರ ನಾಯಕ ಪ್ಲೆಸಿ ಮತ್ತು ಡುಸೆನ್‌ ಜೊತೆಯಾಟದ ಸೊಬಗು ಅನಾವರಣಗೊಂಡಿತು.

ನೇಥನ್ ಲಯನ್‌ ಅವರ ಎಸೆತಗಳನ್ನು ಎಚ್ಚರಿಕೆಯಿಂದ ಆಡಿದ ಇವರು ಪ್ಯಾಟ್‌ ಕಮಿನ್ಸ್‌, ಜೇಸನ್‌ ಬೆಹ್ರೆನ್‌ಡೊರ್ಫ್‌ ಅವರನ್ನು ದಂಡಿಸಿದರು. ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ 151ರನ್‌ ಸೇರಿಸಿದರು.

ನಾಯಕ ಪ್ಲೆಸಿ ಈ ಸಲದ ಟೂರ್ನಿಯಲ್ಲಿ ಚೊಚ್ಚಲ ಶತಕ ಸಿಡಿಸಿ ಔಟಾದರು. ಅಂತಿಮ ಓವರ್‌ಗಳಲ್ಲಿ ಫಿಂಚ್‌ ಪಡೆಯ ಬೌಲರ್‌ಗಳನ್ನು ಕಾಡಿದ ಡುಸೆನ್‌ ಐದು ರನ್‌ಗಳಿಂದ ಶತಕ ವಂಚಿತರಾದರು.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ; 50 ಓವರ್‌ಗಳಲ್ಲಿ 6 ವಿಕೆಟ್‌ಗೆ 325 (ಏಡನ್‌ ಮಾರ್ಕರಮ್‌ 34, ಕ್ವಿಂಟನ್‌ ಡಿ ಕಾಕ್‌ 52, ಫಾಫ್‌ ಡು ಪ್ಲೆಸಿ 100, ವ್ಯಾನ್‌ ಡರ್‌ ಡುಸೆನ್‌ 95, ಜೆ.ಪಿ.ಡುಮಿನಿ 14; ಮಿಷೆಲ್‌ ಸ್ಟಾರ್ಕ್‌ 59ಕ್ಕೆ2, ಜೇಸನ್‌ ಬೆಹ್ರೆನ್‌ಡೊರ್ಫ್‌ 55ಕ್ಕೆ1, ನೇಥನ್‌ ಲಯನ್‌ 53ಕ್ಕೆ2, ಪ್ಯಾಟ್‌ ಕಮಿನ್ಸ್‌ 66ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT