ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್‌ ಭರ್ಜರಿ ಶತಕ, 11,000 ರನ್‌ ಪೂರೈಸಿದ ವಿರಾಟ್‌; ಭಾರತ 336 ರನ್‌

ವಿಶ್ವಕಪ್ ಕ್ರಿಕೆಟ್‌
Last Updated 16 ಜೂನ್ 2019, 17:53 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್‌:ಭಾರತ–ಪಾಕಿಸ್ತಾನ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್‌ಗೆ ಮುಂದಾಗ ರೋಹಿತ್‌ ಶರ್ಮಾ ಭರ್ಜರಿ ಶತಕ ಸಿಡಿಸಿದರು. ಅರ್ಧ ಶತಕ ಮಾಡಿದ ತಂಡದ ನಾಯಕ ವಿರಾಟ್‌ ಕೊಹ್ಲಿ ಏಕದಿನ ಪಂದ್ಯಗಳಲ್ಲಿ 11,000 ರನ್‌ ಗಡಿ ದಾಟಿದರು. ಹಣಾಹಣಿ ನಿರೀಕ್ಷಿಸಿರುವ ಪಂದ್ಯಕ್ಕೆ ಕೆಲ ಸಮಯಮಳೆಯಿಂದಾಗಿ ಅಡ್ಡಿ ಉಂಟಾಗಿತ್ತು.

ಮಳೆ ಬರುವುದಕ್ಕೂ ಮುನ್ನ ಭಾರತ ತಂಡ 46.4 ಓವರ್‌ಗಳಲ್ಲಿನಾಲ್ಕು ವಿಕೆಟ್‌ನಷ್ಟಕ್ಕೆ 305ರನ್‌ ಗಳಿಸಿತ್ತು. ಬಳಿಕ ಆಟ ಮುಂದುವರಿಸಿದ ವಿರಾಟ್‌ ಕೊಹ್ಲಿ(77) ಮೊಹಮ್ಮದ್‌ ಅಮೀರ್‌ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ವಿಜಯ್‌ ಶಂಕರ್‌(15) ಮತ್ತು ಕೇದಾರ್‌ ಜಾದವ್‌(9) ಕೊನೆಯ ಎರಡು ಓವರ್‌ಗಳಲ್ಲಿ ಜತೆಯಾಗಿ 22 ರನ್‌ ಗಳಿಸಿದರು. ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 336ರನ್‌ ಗಳಿಸಿತು.

ಕ್ಷಣಕ್ಷಣದ ಸ್ಕೋರ್‌:https://bit.ly/2X9OQP1

ಗಾಯದಿಂದ ಹೊರಗುಳಿದಿರುವ ಶಿಖರ್‌ ಧವನ್‌ ಬದಲು ಆರಂಭಿಕರಾಗಿ ಕಣಕ್ಕಿಳಿದಕೆ.ಎಲ್‌.ರಾಹುಲ್‌ ಅರ್ಧ ಶತಕ ಪೂರೈಸಿ ವಿಕೆಟ್‌ ಒಪ್ಪಿಸಿದರು.ಭಾರತದ ಬ್ಯಾಟಿಂಗ್‌ ಬಲವನ್ನು ನಿಯಂತ್ರಿಸಲು ಪಾಕ್‌ ಬೌಲರ್‌ಗಳು ಹಲವು ತಂತ್ರಗಳನ್ನು ಬಳಸಿದರು.ಆದರೆ, ರೋಹಿತ್‌ ಶರ್ಮಾ ಆಗಾಗ್ಗೆ ಚೆಂಡನ್ನು ಬೌಂಡರಿಗೆ ಸೇರಿಸುವ ಮೂಲಕ ದಿಟ್ಟ ಉತ್ತರ ನೀಡಿದರು. 34 ಎಸೆತಗಳಲ್ಲಿ 50 ರನ್‌ ಪೂರೈಸಿತಂಡಕ್ಕೆ ಉತ್ತಮ ಆರಂಭ ನೀಡಿದರು. 85 ಎಸೆತಗಳಲ್ಲಿ 100 ರನ್‌ ಗಳಿಸಿದರು.ರೋಹಿತ್‌ 140 ರನ್‌ ಗಳಿಸಿದ್ದಾಗ ಹಸನ್‌ ಅಲಿ ಬೌಲಿಂಗ್‌ನಲ್ಲಿ ಕ್ಯಾಚ್‌ ನೀಡಿ ಆಟ ಮುಗಿಸಿದರು. ಅವರುಒಟ್ಟು3ಸಿಕ್ಸರ್‌ ಹಾಗೂ 14ಬೌಂಡರಿ ಸಿಡಿಸಿದರು.

ಓಲ್ಡ್‌ ಟ್ರಾಫರ್ಡ್‌ನಲ್ಲಿ ಪಾಕಿಸ್ತಾನ ತಂಡ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು.ಆರಂಭದಲ್ಲಿ ತಾಳ್ಮೆಯುತ ಆಟಕ್ಕೆ ಮುಂದಾದ ವಿರಾಟ್‌ ಬಳಗ ನಂತರದಲ್ಲಿಭರ್ಜರಿ ಬ್ಯಾಟಿಂಗ್‌ ನಡೆಸಿತುರಾಹುಲ್‌–ರೋಹಿತ್‌ ಶತಕದ ಜತೆಯಾಟ ಭಾರತ ತಂಡಕ್ಕೆ ಉತ್ತಮ ಬುನಾದಿಯಾಯಿತು.

ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಪರರೋಹಿತ್‌ ಶರ್ಮಾ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿರುವ ಸಾಧನೆ ಮಾಡಿದ್ದಾರೆ. ಮಹೇಂದ್ರ ಸಿಂಗ್‌ ಧೋನಿ ಹೆಸರಿನಲ್ಲಿ ಈ ದಾಖಲೆ ಇತ್ತು.

ಮತ್ತೊಂದೆಡೆ ರಾಹುಲ್‌(57; 2 ಸಿಕ್ಸರ್‌, 3 ಬೌಂಡರಿ) ತಾಳ್ಮೆಯುತ ಆಟದ ಮೂಲಕ ಅರ್ಧ ಶತಕ ದಾಖಲಿಸಿದರು. ವಹೀಬ್‌ ರಿಯಾಜ್‌ ಎಸೆತದಲ್ಲಿ ರಾಹುಲ್‌ ಕ್ಯಾಚ್‌ ನೀಡಿ ಹೊರನಡೆದರು. ಹಾರ್ದಿಕ್‌ ಪಾಂಡ್ಯ 19 ಎಸೆತಗಳಲ್ಲಿ 26 ರನ್‌ ಗಳಿಸಿದರು. ಮಹೇಂದ್ರ ಸಿಂಗ್‌ ಧೋನಿ ಕೇವಲ 1 ರನ್‌ಗಳಿಗೆ ಹೊರ ನಡೆದರು.

ಕ್ಷಣಕ್ಷಣದ ಸ್ಕೋರ್‌:https://bit.ly/2X9OQP1

ಪಾಕಿಸ್ತಾನ ಪರ ಮೊಹಮ್ಮದ್‌ ಅಮೀರ್ ಭಾರತದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದರು. ಅವರು 10ಓವರ್‌ಗಳಲ್ಲಿ 47ರನ್‌ ನೀಡಿ 3ವಿಕೆಟ್ ಕಬಳಿಸಿದರು. ಹಸನ್‌ ಅಲಿ ಮತ್ತು ವಹಾಬ್‌ ರಿಯಾಜ್‌ ತಲಾ ಒಂದು ವಿಕೆಟ್‌ ಪಡೆದರು.

ಈ ಟೂರ್ನಿಯ ಮೊದಲ ಎರಡೂ ಪಂದ್ಯಗಳಲ್ಲಿ ಭಾರತ ತಂಡ ಜಯಗಳಿಸಿದೆ. ಆದರೆ ಸರ್ಫರಾಜ್ ಬಳಗವು ಸ್ಥಿರವಾದ ಆಟವಾಡುವಲ್ಲಿ ಯಶಸ್ವಿಯಾಗಿಲ್ಲ. ಮೊದಲ ಪಂದ್ಯದಲ್ಲಿ ಕೇವಲ 105 ರನ್‌ ಗಳಿಸಿತ್ತು. ಆದರೆ ನಂತರದ ಪಂದ್ಯದಲ್ಲಿ ಬಲಾಢ್ಯ ಇಂಗ್ಲೆಂಡ್ ಎದುರು 348 ರನ್‌ಗಳ ಮೊತ್ತ ದಾಖಲಿಸಿತ್ತು ಮತ್ತು ಗೆಲುವು ದಾಖಲಿಸಿತ್ತು. ಆದರೆ, ಮತ್ತೆ ಆಸ್ಟ್ರೇಲಿಯಾ ಎದುರು ಸೋತಿತ್ತು.

ಕ್ಷಣಕ್ಷಣದ ಸ್ಕೋರ್‌:https://bit.ly/2X9OQP1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT