ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್‌–ರಾಹುಲ್‌ ಶತಕ ದಾಖಲೆ; ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ

ವಿಶ್ವಕಪ್‌ ಕ್ರಿಕೆಟ್‌
Last Updated 6 ಜುಲೈ 2019, 18:03 IST
ಅಕ್ಷರ ಗಾತ್ರ

ಲೀಡ್ಸ್‌: ಶ್ರೀಲಂಕಾ ನೀಡಿದ ಸಾಧಾರಣ ಗುರಿಯನ್ನು ಬೆನ್ನೇರಿದ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ತೋರಿದೆ. ಆರಂಭಿಕರಾದ ರಾಹುಲ್‌ ಮತ್ತು ರೋಹಿತ್‌ ನಡೆಸಿದ ದಾಖಲೆಯ ಜತೆಯಾಟದಿಂದ ತಂಡ ಬಹುಬೇಗ ಗೆಲುವು ಸಾಧಿಸಿತು.

ಭಾರತ 43.3ಓವರ್‌ಗಳಲ್ಲಿ 3ವಿಕೆಟ್‌ ನಷ್ಟಕ್ಕೆ 265ರನ್‌ ಗಳಿಸುವ ಮೂಲಕ 7 ವಿಕೆಟ್‌ಗಳ ಗೆಲುವು ಪಡೆಯಿತು. ತಂಡದ ಮೊತ್ತ 189 ರನ್‌ ದಾಖಲಾಗಿದ್ದಾಗ ಕಸುನ್‌ ರಜಿತ ಎಸೆತದಲ್ಲಿ ರೋಹಿತ್‌(103) ಕ್ಯಾಚ್‌ ನೀಡಿ ಆಟ ಮುಗಿಸಿದರು. ರಾಹುಲ್‌ ವಿಶ್ವಕಪ್‌ ಟೂರ್ನಿಯಲ್ಲಿ ತನ್ನ ಮೊದಲ ಶತಕ ದಾಖಲಿಸಿದರು. ವಿರಾಟ್‌ ಕೊಹ್ಲಿ(34) ಮತ್ತು ಹಾರ್ದಿಕ್‌ ಪಾಂಡ್ಯ(7) ಗೆಲುವಿನ ದಡ ಸೇರಿಸಿದರು.

ಕ್ಷಣಕ್ಷಣದ ಸ್ಕೋರ್:https://bit.ly/2FYevjH

ಬಿರುಸಿನ ಆಟ ಆಡಿದ ರೋಹಿತ್‌ ಶರ್ಮಾ 92 ಎಸೆತಗಳಲ್ಲಿ 102 ರನ್‌ ಗಳಿಸುವ ಮೂಲಕ ವಿಶ್ವಕಪ್‌ ಟೂರ್ನಿಯಲ್ಲಿ ಐದನೇ ಶತಕ ದಾಖಲಿಸಿದರು. ಅವರ ಶತಕ 14 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಒಳಗೊಂಡಿದೆ. ಈ ಮೂಲಕ ಒಂದೇ ವಿಶ್ವಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಪೂರೈಸಿದ ದಾಖಲೆ ನಿರ್ಮಿಸಿದರು. ಈ ಟೂರ್ನಿಯಲ್ಲಿ ಅವರುಒಟ್ಟು 647 ರನ್‌ ಗಳಿಸಿದ್ದಾರೆ.

ರೌಂಡ್‌ ರಾಬಿನ್‌ ಹಂತದ ತನ್ನ ಎಂಟನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಮೊದಲ ವಿಕೆಟ್‌ ಜೊತೆಯಾಟದಲ್ಲಿ 180 ಗಳಿಸಿದ್ದ ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌ ರಾಹುಲ್‌ ತಮ್ಮದೇ ದಾಖಲೆಯನ್ನು ಮುರಿದರು.

ತಾಳ್ಮೆಯ ಆಟ ಪ್ರದರ್ಶಿಸಿದ ಕೆ.ಎಲ್‌.ರಾಹುಲ್‌ ಟೂರ್ನಿಯಲ್ಲಿ ವೈಯಕ್ತಿಕ ಗರಿಷ್ಠ ಹಾಗೂ ಮೊದಲ ಶತಕಗಳಿಸಿದರು. 11ಬೌಂಡರಿ ಮತ್ತು 1 ಸಿಕ್ಸರ್‌ ಒಳಗೊಂಡ 111ರನ್‌ ಕಲೆಹಾಕಿದರು. ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಇದು ಅವರ ಎರಡನೇ ಶತಕವಾಗಿದೆ. ಲಸಿತ್‌ ಮಲಿಂಗ ಎಸೆತದಲ್ಲಿ ಜೋರು ಹೊಡೆತಕ್ಕೆ ಮುಂದಾದ ರಾಹುಲ್‌ ಕ್ಯಾಚ್‌ ನೀಡಿದರು.

ರೌಂಡ್‌ ರಾಬಿನ್‌ ಹಂತದ ತನ್ನ ಎಂಟನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಮೊದಲ ವಿಕೆಟ್‌ ಜೊತೆಯಾಟದಲ್ಲಿ 180 ಗಳಿಸಿದ್ದ ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌.ರಾಹುಲ್‌ ತಮ್ಮದೇ ದಾಖಲೆಯನ್ನು ಮುರಿದರು. ಬೌಂಡರಿ ಬಾರಿಸಿ ನಿರೀಕ್ಷೆ ಮೂಡಿಸಿದರಿಷಬ್‌ ಪಂತ್‌(4) ಎಲ್‌ಬಿಡಬ್ಯು ಆಗಿಬಹುಬೇಗ ಮರಳಿದರು.

ಲಸಿತ್‌ ಮಾಲಿಂಗ, ಇಸುರು ಉಡಾನ ಹಾಗೂ ಕಸುವ ರಜಿತ ತಲಾ 1 ವಿಕೆಟ್‌ ಪಡೆದರು.

ಶ್ರೀಲಂಕಾ ನಿಗದಿತ 50ಓವರ್‌ಗಳಲ್ಲಿ 7ವಿಕೆಟ್‌ ನಷ್ಟಕ್ಕೆ 264ರನ್‌ ಗಳಿಸಿತು. ಸಂಕಷ್ಟದಲ್ಲಿದ್ದ ತಂಡಕ್ಕೆಲಾಹಿರು ತಿರಿಮನ್ನೆ(53) ಮತ್ತು ಏಂಜೆಲೊ ಮ್ಯಾಥ್ಯೂಸ್‌(113) ತಾಳ್ಮೆಯಜತೆಯಾಟ ನೆರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT