ಸಾಮಾಜಿಕ ಮಾಧ್ಯಮಗಳಲ್ಲಿ ಪಾಕ್‌ ತಂಡದ ನಾಯಕನ ‘ಆಕಳಿಕೆ’ ವೈರಲ್‌!

ಬುಧವಾರ, ಜೂಲೈ 17, 2019
29 °C
ವಿಶ್ವಕಪ್‌ ಕ್ರಿಕೆಟ್‌

ಸಾಮಾಜಿಕ ಮಾಧ್ಯಮಗಳಲ್ಲಿ ಪಾಕ್‌ ತಂಡದ ನಾಯಕನ ‘ಆಕಳಿಕೆ’ ವೈರಲ್‌!

Published:
Updated:

ಬೆಂಗಳೂರು: ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್‌ ಅಹಮದ್‌ ಆಕಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಭಾನುವಾರ ವಿಶ್ವಕಪ್‌ ಟೂರ್ನಿಯ ಭಾರತ–ಪಾಕಿಸ್ತಾನ ಕ್ರಿಕೆಟ್‌ ಪಂದ್ಯದಲ್ಲಿ ಸರ್ಫರಾಜ್‌ ಆಕಳಿಸಿರುವ ವಿಡಿಯೊ ಬಳಸಿ ಟ್ರೋಲ್‌ ಮಾಡಲಾಗಿದೆ. 

ಪಾಕಿಸ್ತಾನ ತಂಡದ ಎದುರು ಮೊದಲು ಬ್ಯಾಟಿಂಗ್‌ ಮಾಡಿರುವ ಟೀಂ ಇಂಡಿಯಾ 336ರನ್‌ ಗಳಿಸಿದೆ. ಮೊದಲ ಇನಿಂಗ್ಸ್‌ ಮುಗಿಯುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಿಗೆ ಲಗ್ಗೆ ಇಟ್ಟಿರುವ ಕ್ರಿಕೆಟ್‌ ‍ಪ್ರಿಯರು ಸರ್ಫರಾಜ್‌ ಆಕಳಿಸುತ್ತಿರುವ ವಿಡಿಯೊ ಅನ್ನು ಪ್ರಕಟಿಸಿ ವ್ಯಂಗ್ಯದ ಸಂದೇಶಗಳನ್ನು ಬರೆದುಕೊಂಡಿದ್ದಾರೆ. 

ಇದನ್ನೂ ಓದಿ: ರೋಹಿತ್‌ ಭರ್ಜರಿ ಶತಕ, 11,000 ರನ್‌ ಪೂರೈಸಿದ ವಿರಾಟ್‌; ಭಾರತ 336 ರನ್‌

ಕ್ಷಣಕ್ಷಣದ ಸ್ಕೋರ್‌: https://bit.ly/2X9OQP1 

'ಮ್ಯಾಂಚೆಸ್ಟರ್‌ನಲ್ಲಿ ವಾತಾವರಣ ಹಿತಕರವಾಗಿದೆ, ನನಗೆ ವಿಶ್ರಾಂತಿ ಬೇಕಿದೆ...ಎರಡು ಪ್ಲೇಟ್‌ ಬಿರಿಯಾನಿ ತಿಂದ ನಂತರ ನನ್ನ ಪ್ರತಿಕ್ರಿಯೆ...,’ ಹೀಗೆ ಸಾಕಷ್ಟು ರೀತಿ ಅಣಕಿಸಿರುವ ಸಂದೇಶಗಳು ಟ್ವಿಟರ್‌ನಲ್ಲಿ ವೈರಲ್‌ ಆಗಿವೆ. 

 

ಬರಹ ಇಷ್ಟವಾಯಿತೆ?

 • 10

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !