ಫಾಫ್‌ ಡು ಪ್ಲೆಸಿಸ್‌ ಶತಕ; ಕಾಂಗರೂ ಪಡೆಗೆ 326 ರನ್‌ ಗುರಿ

ಶುಕ್ರವಾರ, ಜೂಲೈ 19, 2019
28 °C
ವಿಶ್ವಕಪ್‌ ಕ್ರಿಕೆಟ್‌

ಫಾಫ್‌ ಡು ಪ್ಲೆಸಿಸ್‌ ಶತಕ; ಕಾಂಗರೂ ಪಡೆಗೆ 326 ರನ್‌ ಗುರಿ

Published:
Updated:

ಮ್ಯಾಂಚೆಸ್ಟರ್: ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ರೌಂಡ್‌ರಾಬಿನ್‌  ಹಂತದ ಕೊನೆಯ ಪಂದ್ಯ ಆಸ್ಟ್ರೇಲಿಯಾ–ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿದ್ದು, ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಹರಿಣಗಳ ‍ಪಡೆ ಉತ್ತಮ ಆರಂಭ ಮಾಡಿತು. ರಸ್ಸಿ ವ್ಯಾನ್ ಡರ್ ಡಸೆನ್ ಮತ್ತು ಡು ಪ್ಲೆಸಿಸ್ ಜತೆಯಾಟದಿಂದ ತಂಡ ಉತ್ತಮ ರನ್‌ ಗಳಿಕೆಯತ್ತ ಮುನ್ನಡೆಯಿತು. 

ದಕ್ಷಿಣ ಆಫ್ರಿಕಾ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 325 ರನ್‌ ಗಳಿಸಿತು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಫಾಫ್‌ ಡು ಪ್ಲೆಸಿಸ್ ಭರ್ಜರಿ ಶತಕ ಗಳಿಸಿ ಆಟದ ಓಘವನ್ನು ಮುಂದುವರಿಸಿದರು. 93 ಎಸೆತಗಳಲ್ಲಿ 2 ಸಿಕ್ಸರ್, ಏಳು ಬೌಂಡರಿ ಸಹಿತ 100 ರನ್‌ ದಾಖಲಿಸಿದರು. ಜೇಸನ್‌ ಬೆಹ್ರೆನ್‌ಡಾರ್ಫ್‌ ಎಸೆತದಲ್ಲಿ ಡು ಪ್ಲೆಸಿಸ್‌ ಕ್ಯಾಚ್‌ ನೀಡಿ ಆಟ ಮುಗಿಸಿದರು.

ಕ್ಷಣಕ್ಷಣದ ಸ್ಕೋರ್‌: https://bit.ly/328z2vj

ಡು ಪ್ಲೆಸಿಸ್‌ಗೆ ಜತೆಯಾದ ರಸ್ಸಿ ವ್ಯಾನ್ ಡರ್ ಡಸೆನ್ ಅರ್ಧ ಶತಕ ಗಳಿಸಿದರು. ಇಬ್ಬರ ಜತೆಯಾಟದಿಂದಾಗಿ ತಂಡದ ಮೊತ್ತ ಬಹುಬೇಗ 250ರ ಗಡಿ ದಾಟಿತು. 4 ಬೌಂಡರಿ, 4 ಸಿಕ್ಸರ್ ಒಳಗೊಂಡ 95 ರನ್‌ ಕಲೆಹಾಕಿದ ಅವರು ಪ್ಯಾಟ್‌ ಕಮ್ಮಿನ್ಸ್‌ ಎಸೆತದಲ್ಲಿ ಕ್ಯಾಚ್‌ ನೀಡಿದರು. 

ಇದನ್ನೂ ಓದಿ: ರೋಹಿತ್‌ ಶತಕ ದಾಖಲೆ, ರಾಹುಲ್‌ ಉತ್ತಮ ಆಟ; ಭಾರತದ ಮೊದಲ ವಿಕೆಟ್‌ ಪತನ 

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕ್ವಿಂಟನ್‌ ಡಿಕಾಕ್ ಮತ್ತು ಏಡೆನ್‌ ಮಾರ್ಕರಮ್ ಉತ್ತಮ ಜತೆಯಾಟದಿಂದ ತಂಡದ ರನ್‌ ಗಳಿಕೆಗೆ ಬುನಾದಿ ಹಾಕಿದರು. ನಥಾನ್‌ ಲಿಯಾನ್‌ ಇಬ್ಬರ ಆಟಕ್ಕೂ ಕಡಿವಾಣ ಹಾಕಿದರು. 11ನೇ ಓವರ್‌ನಲ್ಲಿ ಮಾರ್ಕರಮ್‌(34) ಮತ್ತು 17ನೇ ಓವರ್‌ನಲ್ಲಿ ಕ್ವಿಂಟನ್‌ ಡಿ ಕಾಕ್‌(52) ಹೊರನಡೆದರು. 

ಇದನ್ನೂ ಓದಿ: ಮ್ಯಾಥ್ಯೂಸ್‌ ಶತಕ, ತಿರಿಮನ್ನೆ ಉತ್ತಮ ಆಟ; ಭಾರತಕ್ಕೆ 265 ರನ್‌ ಗುರಿ

ಆಸ್ಟ್ರೇಲಿಯಾ ಪರ ಮಿಷೆಲ್‌ ಸ್ಟಾರ್ಕ್‌ ಮತ್ತು ಲಥಾನ್‌ ಲಿಯಾನ್‌ ತಲಾ 2 ವಿಕೆಟ್‌ ಹಾಗೂ ಜೇಸನ್‌ ಬೆಹ್ರೆನ್‌ಡಾರ್ಫ್‌, ಪ್ಯಾಟ್‌ ಕಮ್ಮಿನ್ಸ್‌ ತಲಾ 1 ವಿಕೆಟ್‌ ಗಳಿಸಿದರು. 

ದಕ್ಷಿಣ ಆಫ್ರಿಕಾ ಈಗಾಗಲೇ ನಾಕ್ಔಟ್‌ ಹಂತದಿಂದ ಹೊರಬಿದ್ದಿದ್ದು, ಮತ್ತೊಂದು ಗೆಲುವಿಗಾಗಿ ಹೋರಾಟ ನಡೆಸಿದೆ. ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಈ ಪಂದ್ಯದಲ್ಲಿ ಸೋತರೆ, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ಎದುರು ಸೆಣಸಲಿದೆ. ಗೆಲುವು ಸಾಧಿಸಿದರೆ ನ್ಯೂಜಿಲೆಂಡ್‌ ಎದುರಾಳಿಯಾಗಲಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !