ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ–ವೆಸ್ಟ್‌ ಇಂಡೀಸ್‌ ಆಟಕ್ಕೆ ಮಳೆ ಅಡ್ಡಿ; ಪಂದ್ಯ ರದ್ದು

ವಿಶ್ವಕಪ್‌ ಕ್ರಿಕೆಟ್‌
Last Updated 10 ಜೂನ್ 2019, 15:52 IST
ಅಕ್ಷರ ಗಾತ್ರ

ಸೌತಾಂಪ್ಟನ್‌: ಸೋಮವಾರ ವೆಸ್ಟ್‌ ಇಂಡೀಸ್‌ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಇದರಿಂದಾಗಿಉಭಯ ತಂಡಗಳ ಖಾತೆಗೆ ಒಂದೊಂದು ಅಂಕ ಹಂಚಿಕೆಯಾಗಿದೆ.

ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಕೆರೀಬಿಯನ್ನರು ಹರಿಣಿಗಳ ಆಟಕ್ಕೆ ಆರಂಭದಿಂದಲೇತಡೆಯೊಡ್ಡಿದರು.ದಕ್ಷಿಣ ಆಫ್ರಿಕಾ ಆರಂಭಿಕ ಆಘಾತಕ್ಕೆ ಒಳಗಾಯಿತು.ಶೆಲ್ಡನ್‌ ಕಾಟ್ರೆಲ್‌, ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ(6) ಮತ್ತು ಏಡೆನ್‌ ಮರ್ಕರಮ್‌(5) ವಿಕೆಟ್‌ ಗಳಿಸಿ ದೊಡ್ಡ ಪೆಟ್ಟು ನೀಡಿದರು. ಕಾಟ್ರೆಲ್‌ ವಿಕೆಟ್‌ ಪಡೆದ ಬಳಿಕ ಎಂದಿನ ಶೈಲಿಯಲ್ಲಿ ಪರೇಡ್‌ ಮಾಡಿ ಸಲ್ಯೂಟ್‌ ಹೊಡೆದು ಸಂಭ್ರಮಿಸಿದರು.

(ಮಳೆ ನಿಲ್ಲುವಂತೆ ಪದ್ಯ ಪ್ರಕಟಿಸಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯಬ್‌ ಅಖ್ತರ್‌)

ಕ್ಷಣ ಕ್ಷಣದ ಸ್ಕೋರ್‌:https://bit.ly/2MyhW6f

ದಕ್ಷಿಣ ಆಫ್ರಿಕಾ 7.3 ಓವರ್‌ಗಳಲ್ಲಿ ಎರಡು ವಿಕೆಟ್‌ ನಷ್ಟಕ್ಕೆ 29 ರನ್‌ ಗಳಿಸಿದ್ದಾಗಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿತು. ಸುರಿಯುವ ಮಳೆ ಎರಡು ಗಂಟೆಗಳ ನಂತರ ಕೊಂಚಬಿಡುವು ನೀಡಿತು. ಅಂಪೈರ್‌ಗಳು ಪಿಚ್‌ ಪರಿಶೀಲನೆಗೆ ತೆರಳಿದ್ದಾಗ ಮತ್ತೆ ಮಳೆಯ ಸಿಂಚನ ವಾಯಿತು. ಪಂದ್ಯ ರದ್ದುಗೊಳಿಸಿದ ಕಾರಣ, ಎರಡೂ ತಂಡಗಳಿಗೆ ಪಾಯಿಂಟ್‌ ಹಂಚಿಕೆ ಮಾಡಲಾಗಿದೆ.

ಮಳೆಗೂ ಮುನ್ನಬಿರುಸಿನ ಆಟಗಾರಕ್ವಿಂಟನ್‌ ಡಿಕಾಕ್‌(17) ಮತ್ತು ತಂಡದ ನಾಯಕಫಾಫ್‌ ಡುಪ್ಲೆಸಿ(0) ಕಣದಲ್ಲಿದ್ದರು.ಕಾಟ್ರೆಲ್‌ 4 ಓವರ್‌ಗಳಲ್ಲಿ 18 ರನ್‌ ನೀಡಿ ಎರಡು ವಿಕೆಟ್‌ ಕಬಳಿಸಿದರು. ವೆಸ್ಟ್ ಇಂಡೀಸ್‌ನ ಆ್ಯಂಡ್ರೆ ರಸೆಲ್‌ ಮತ್ತುಎವಿನ್‌ ಲೂಯಿಸ್‌ ಗಾಯದ ಸಮಸ್ಯೆಯಿಂದಾಗಿ ಆಟದಿಂದ ಹೊರಗುಳಿದರೆ, ಅವರ ಸ್ಥಾನದಲ್ಲಿ ಕೆಮಾರ್‌ ರೋಚ್‌ ಮತ್ತುಡರೆನ್‌ ಬ್ರಾವೊ ಅಂಗಳಕ್ಕಿಳಿದರು.

ಮೊದಲ ಮೂರು ಪಂದ್ಯಗಳನ್ನು ಸೋತ ದಕ್ಷಿಣ ಆಫ್ರಿಕಾಕ್ಕೆ ಪ್ರಮುಖ ವೇಗದ ಬೌಲರ್‌ಗಳಾದ ಡೇಲ್‌ ಸ್ಟೇನ್‌ ಮತ್ತು ಲುಂಗಿ ಗಿಡಿ ಅಲಭ್ಯವಾಗಿದ್ದಾರೆ. ಸ್ಟೇನ್‌ ವಿಶ್ವಕಪ್‌ನಿಂದಲೇ ಹೊರಬಿದ್ದರೆ, ಗಿಡಿ ಸಂಪೂರ್ಣ ಚೇತರಿಸಿಕೊಂಡಿಲ್ಲ.

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ ಆಸೆ ಜೀವಂತವಾಗಿರಿಸಿ ಕೊಳ್ಳಬೇಕಾದರೆ ಇಂದಿನ ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯ ಸೇರಿ ಆರು ರೌಂಡ್‌ ರಾಬಿನ್‌ ಲೀಗ್‌ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.ಆಸ್ಟ್ರೇಲಿಯಾ ವಿರುದ್ಧ ಈ ಹಿಂದಿನ ಪಂದ್ಯದಲ್ಲಿ ಸೋತರೂ ವೆಸ್ಟ್ ಇಂಡೀಸ್‌ ತಂಡವೇ ಬಹುತೇಕ ಅವಧಿಯಲ್ಲಿ ಹಿಡಿತ ಸಾಧಿಸಿತ್ತು. ಕೊನೆಗಳಿಗೆಯಲ್ಲಿ ತಪ್ಪುಹೊಡೆತಗಳ ಆಯ್ಕೆ ದುಬಾರಿಯಾಯಿತು. ಈಗ ಆ ಹಿನ್ನಡೆಯಿಂದ ಹೊರಬರಲು ಜೇಸನ್‌ ಹೋಲ್ಡರ್‌ ತಂಡ ತವಕಿಸುತ್ತಿದೆ.

ಆದರೆ ಈ ಹಿಂದೆ ವಿಶ್ವಕಪ್‌ ಪಂದ್ಯಗಳಲ್ಲಿ ಕೆರೀಬಿಯನ್‌ ಪಡೆಯ ವಿರುದ್ಧ ದಕ್ಷಿಣ ಆಫ್ರಿಕ ತಂಡ ಉತ್ತಮ ಗೆಲುವಿನ ದಾಖಲೆ ಹೊಂದಿದೆ. ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಹರಿಣಗಳ ತಂಡ ವಿಜಯಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT