ಸೌತಾಂಪ್ಟನ್, ಇಂಗ್ಲೆಂಡ್: ‘ಮಣಿಕಟ್ಟಿನ ಮೋಡಿಗಾರ’ ಯಜುವೇಂದ್ರ ಚಾಹಲ್ ಮತ್ತು ‘ಯಾರ್ಕರ್’ ಪರಿಣತ ಜಸ್‌ಪ್ರೀತ್ ಬೂಮ್ರಾ ಅವರು ಹಾಕಿದ ಅಡಿಪಾಯದ ಮೇಲೆ ರೋಹಿತ್ ಶರ್ಮಾ ಗೆಲುವಿನ ಸೌಧ ಕಟ್ಟಿದರು.

ರೋಸ್ ಬೌಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತ ತಂಡವು ಶುಭಾರಂಭ ಮಾಡಿತು. ದಕ್ಷಿಣ ಆಫ್ರಿಕಾ ಎದುರು 6 ವಿಕೆಟ್‌ಗಳಿಂದ ಜಯಿಸಿತು. ಫಾಫ್ ಡುಪ್ಲೆಸಿ ಬಳಗವು ಸತತ ಮೂರನೇ ಸೋಲು ಅನುಭವಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ಬಳಗದ ಉದ್ದೇಶಕ್ಕೆ ಭಾರತದ ಬೌಲರ್‌ಗಳು ಅಡ್ಡಗಾಲು ಹಾಕಿದರು. ಜಸ್‌ಪ್ರೀತ್ ಬೂಮ್ರಾ (35ಕ್ಕೆ2) ಮತ್ತು ಯಜುವೇಂದ್ರ ಚಾಹಲ್ (51ಕ್ಕೆ4) ಅವರ ಶಿಸ್ತಿನ ದಾಳಿಯಿಂದಾಗಿ ದಕ್ಷಿಣ ಆಫ್ರಿಕಾ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 227 ರನ್ ಗಳಿಸಿತು. ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ರೋಹಿತ್ ಶರ್ಮಾ (ಅಜೇಯ 122; 144ಎಸೆತ, 13ಬೌಂಡರಿ, 2 ಸಿಕ್ಸರ್)ಗೆಲುವಿನ ಕಾಣಿಕೆ ನೀಡಿದರು.

ಬೌಲರ್‌ಗಳಿಗೇ ಹೆಚ್ಚು ನೆರವು ನೀಡುತ್ತಿದ್ದ ಪಿಚ್‌ನಲ್ಲಿ ರೋಹಿತ್ ಎಚ್ಚರಿಕೆಯಿಂದ ಆಡಿದರು. ಶಿಖರ್ ಧವನ್ (8ರನ್)ಮತ್ತು ವಿರಾಟ್ ಕೊಹ್ಲಿ (18ರನ್) ಬೇಗನೆ ಔಟಾಗಿದ್ದರಿಂದ ಭಾರತ ತಂಡದಲ್ಲಿ ಆತಂಕ ಎದುರಾಗಿತ್ತು. ಆದರೆ ‘ಮುಂಬೈಕರ್’ ರೋಹಿತ್ ಜೊತೆಗೂಡಿದ ಕೆ.ಎಲ್. ರಾಹುಲ್ (26; 42ಎಸೆತ, 2ಬೌಂಡರಿ) ತಾಳ್ಮೆಯ ಆಟವಾಡಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 85 ರನ್ ಸೇರಿಸಿದರು. ಅದಕ್ಕಾಗಿ ಇಬ್ಬರೂ 96 ಎಸೆತಗಳನ್ನು ಆಡಿದರು. ಆದರೆ ವಿಕೆಟ್ ಪತನ ತಡೆದರು.

ರೋಹಿತ್ 70 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು. 32ನೇ ಓವರ್‌ನಲ್ಲಿ ರಾಹುಲ್ ಔಟಾದರು. ರಬಾಡ ವಿಕೆಟ್ ಗಳಿಸಿದರು.

ರೋಹಿತ್ ಜೊತೆಗೂಡಿದ ಮಹೇಂದ್ರಸಿಂಗ್ ಧೋನಿ ಕೂಡ ತಾಳ್ಮೆಯ ಆಟಕ್ಕೆ ಮೊರೆ ಹೋದರು. ಒಳ್ಳೆಯ ಲೈನ್ ಮತ್ತು ಲೆಂಗ್ತ್ ಎಸೆತಗಳನ್ನು ಎಚ್ಚರಿಕೆಯಿಂದ ಎದುರಿಸಿದರು. 4ನೇ ವಿಕೆಟ್ ಜೊತೆಯಾಟದಲ್ಲಿ 74 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ತಂಡವು ಗೆಲುವಿನ ಸನಿಹ ಸಾಗಿತು.

ರೋಹಿತ್ ತಾವಾಡಿದ 128ನೇ ಎಸೆತದಲ್ಲಿ ಶತಕದ ಗಡಿ ಮುಟ್ಟಿದರು. ಏಕದಿನ ಕ್ರಿಕೆಟ್‌ನಲ್ಲಿ ಇದು ಅವರ 23ನೇ ಶತಕ. ಸೌರವ್ ಗಂಗೂಲಿ ದಾಖಲೆಯನ್ನು ಅವರು ಮೀರಿನಿಂತರು. ಈ ವಿಶ್ವಕಪ್ ಟೂರ್ನಿಯಲ್ಲಿ ಶತಕ ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಅಲ್ಲದೇ ಏಷ್ಯಾ ತಂಡಗಳ ಪೈಕಿ ಮೊದಲಿಗರಾಗಿದ್ದಾರೆ.

ಬೂಮ್ರಾ ಮಿಂಚು: ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಜಸ್ ಪ್ರೀತ್ ಬೂಮ್ರಾ ತಮ್ಮ ಮೇಲಿನ ನಿರೀಕ್ಷೆ ಯನ್ನು ಉಳಿಸಿಕೊಂಡರು. ‘ಡೆತ್ ಓವರ್’ ಪರಿಣತರಾಗಿರುವ ಅವರು ಇಲ್ಲಿ ತಮ್ಮ ಮೊದಲ ಸ್ಪೆಲ್‌ನಲ್ಲಿಯೇ ಮಿಂಚಿದರು.

ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಹಾಶೀಂ ಆಮ್ಲಾ ಮತ್ತು ಆರನೇ ಓವರ್‌ನಲ್ಲಿ ಕ್ವಿಂಟನ್ ಡಿ ಕಾಕ್ ಅವರ ವಿಕೆಟ್‌ಗಳನ್ನು ಬೂಮ್ರಾ ಪಡೆದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ತಂಡವು 5.5 ಓವರ್‌ಗಳಲ್ಲಿ 24 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತು.

ಚಾಹಲ್ ಮೋಡಿ: ನಾಯಕ ಫಾಫ್ ಡುಪ್ಲೆಸಿ (38 ರನ್) ಮತ್ತು ರಸ್ಸೆನ್ ವ್ಯಾನ್ ಡೆರ್ ಡಸೆನ್ (22 ರನ್) ಸ್ವಲ್ಪ ಹೋರಾಟ ತೋರಿದರು. ಆದರೆ ಈ ಜೋಡಿಯನ್ನು ಚಾಹಲ್ ಬೇರ್ಪಡಿಸಿದರು. 20ನೇ ಓವರ್‌ನಲ್ಲಿ ಚಾಹಲ್ ಇಬ್ಬರೂ ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್ ದಾರಿ ತೋರಿಸಿದರು. ತಮ್ಮ ಚೊಚ್ಚಲ ವಿಶ್ವಕಪ್ ಟೂರ್ನಿ ಆಡುತ್ತಿರುವ ಲೆಗ್‌ಸ್ಪಿನ್ನರ್ ಚಾಹಲ್ ಎಸೆತಗಳಿಗೆ ಫಾಫ್ ಮತ್ತು ಡಸೆನ್ ಇಬ್ಬರೂ ಕ್ಲೀನ್ ಬೌಲ್ಡ್ ಆದರು.

ಮೊದಲ ಬಾರಿ ವಿಶ್ವಕಪ್ ಕಣದಲ್ಲಿರುವ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಕೂಡ ಮಿಂಚಿದರು. ಜೆ.ಪಿ ಡುಮಿನಿ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಯುಡಿಆರ್‌ಎಸ್ ಪಡೆದ ಡುಮಿನಿ ಬಚಾವ್ ಆಗಲಿಲ್ಲ.

ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ (31ರನ್) ಮತ್ತು ಆ್ಯಂಡಿಲೆ ಪಿಶುವಾಯೊ ಅವರಿಬ್ಬರೂ 46 ರನ್‌ಗಳನ್ನು ಸೇರಿಸಿದರು. ಈ ಜೊತೆಯಾಟವನ್ನೂ ಚಾಹಲ್ ಮುರಿದರು. ಆ್ಯಂಡಿಲೆ ಅವರನ್ನು ಬೀಟ್ ಮಾಡುವಲ್ಲಿ ಚಾಹಲ್ ಸಫಲರಾದರೆ, ಮಹೇಂದ್ರಸಿಂಗ್ ಧೋನಿಯ ಚುರುಕಾದ ಸ್ಪಂಪಿಂಗ್‌ಗೆ ಫಲ ದೊರೆಯಿತು.

ಆದರೆ, ನಂತರ ಕ್ರೀಸ್‌ಗೆ ಬಂದ ಕ್ರಿಸ್ ಮಾರಿಸ್ (42; 34ಎಸೆತ, 1ಬೌಂಡರಿ, 2ಸಿಕ್ಸರ್) ಮತ್ತು ಕಗಿಸೊ ರಬಾಡ (ಔಟಾಗದೆ 31; 35ಎಸೆತ, 2ಬೌಂಡರಿ)ಬೌಲರ್‌ಗಳನ್ನು ಕಾಡಿದರು. ಜೊತೆಗೆ ತಂಡದ ಮೊತ್ತವನ್ನೂ ಹೆಚ್ಚಿಸಿದರು. ಈ ಜೊತೆಯಾಟವನ್ನು ಭುವನೇಶ್ವರ್ ಮುರಿದರು.

ಸ್ಕೋರ್ ಕಾರ್ಡ್...

ದಕ್ಷಿಣ ಆಫ್ರಿಕ: 50 ಓವರುಗಳಲ್ಲಿ 9 ವಿಕೆಟ್‌ಗೆ 227

ಹಾಶಿಂ ಆಮ್ಲ ಸಿ ರೋಹಿತ್ ಶರ್ಮ ಬಿ ಜಸ್‌ಪ್ರೀತ್ ಬೂಮ್ರಾ 6

ಕ್ವಿಂಟನ್ ಡಿಕಾಕ್ ಸಿ ಕೊಹ್ಲಿ ಬಿ ಜಸ್‌ಪ್ರೀತ್ ಬೂಮ್ರಾ 10

ಫಾಫ್ ಡುಪ್ಲೆಸಿ ಬಿ ಯಜುವೇಂದ್ರ ಚಾಹಲ್ 38

ವ್ಯಾನ್‌ಡರ್ ಡಸೆನ್ ಬಿ ಯಜುವೇಂದ್ರ ಚಾಹಲ್ 22

ಡೇವಿಡ್ ಮಿಲ್ಲರ್ ಸಿ ಮತ್ತು ಬಿ ಚಾಹಲ್ 31

ಜೆ.ಪಿ.ಡುಮಿನಿ ಎಲ್‌ಬಿಡಬ್ಲ್ಯು ಬಿ ಕುಲದೀಪ್ ಯಾದವ್ 3

ಪಿಶುವಾಯೊ ಸ್ಟಂ ಧೋನಿ ಬಿ ಯಜುವೇಂದ್ರ ಚಾಹಲ್ 34

ಕ್ರಿಸ್ ಮಾರಿಸ್ ಸಿ ಕೊಹ್ಲಿ ಬಿ ಭುವನೇಶ್ವರ್ ಕುಮಾರ್ 42

ಕಗಿಸೊ ರಬಾಡ ಔಟಾಗದೇ 31

ಇಮ್ರಾನ್ ತಾಹಿರ್ ಸಿ ಜಾಧವ್ ಬಿ ಭುವನೇಶ್ವರ್ ಕುಮಾರ್ 0

ಇತರೆ (ಬೈ 1, ಲೆಗ್‌ಬೈ 3, ವೈಡ್ 6) 10

ವಿಕೆಟ್ ಪತನ:1–11 (ಆಮ್ಲ 3.2), 2–24 (ಡಿಕಾಕ್, 5.5), 3–78 (ಡಸೆನ್, 19.1), 4–80 (ಡುಮಿನಿ, 19.60), 5– 89 (ಡುಪ್ಲೆಸಿ, 23), 6–135 (ಮಿಲ್ಲರ್, 35.3), 7–158 (ಪೆಹ್ಲುಕ್ವಾಯೊ, 39.3), 8–224 (ಮಾರಿಸ್, 49.2), 9–227 (ಇಮ್ರಾನ್ ತಾಹಿರ್, 49.6)

ಬೌಲಿಂಗ್:ಭುವನೇಶ್ವರ್ ಕುಮಾರ್ 10–0–44–2 (ವೈಡ್ 2); ಬೂಮ್ರಾ 10–1–35–2 ಹಾರ್ದಿಕ್ ಪಾಂಡ್ಯ 6–0–31–0; ಕುಲದೀಪ್ ಯಾದವ್ 10–0–46–1 (ವೈಡ್ 1); ಚಾಹಲ್ 10–0–51–4 (ವೈಡ್ 3) ಕೇದಾರ್ ಜಾಧವ್ 4–0–16–0.

ಭಾರತ 4ಕ್ಕೆ 230 (47.3 ಓವರ್‌ಗಳಲ್ಲಿ)

ಶಿಖರ್ ಧವನ್ ಸಿ ಕ್ವಿಂಟನ್ ಡಿಕಾಕ್ ಬಿ ಕಗಿಸೊ ರಬಾಡ 08

ರೋಹಿತ್ ಶರ್ಮಾ ಔಟಾಗದೆ 122

ವಿರಾಟ್ ಕೊಹ್ಲಿ ಸಿ ಕ್ವಿಂಟನ್ ಡಿಕಾಕ್ ಬಿ ಆ್ಯಂಡಿಲೆ ಪಿಶುವಾಯೊ 18

ಕೆ.ಎಲ್.ರಾಹುಲ್ ಸಿ ಫಾಫ್ ಡು ಪ್ಲೆಸಿ ಬಿ ಕಗಿಸೊ ರಬಾಡ 26

ಮಹೇಂದ್ರ ಸಿಂಗ್ ಧೋನಿ ಸಿ ಮತ್ತು ಬಿ ಕ್ರಿಸ್ ಮಾರಿಸ್ 34

ಹಾರ್ದಿಕ್ ಪಾಂಡ್ಯ ಔಟಾಗದೆ 15

ಇತರೆ (ಲೆಗ್ ಬೈ 3, ವೈಡ್ 4) 07

ವಿಕೆಟ್ ಪತನ:1-13 (ಶಿಖರ್ ಧವನ್, 5.1), 2-54 (ವಿರಾಟ್ ಕೊಹ್ಲಿ, 15.3), 3-139 (ಕೆ.ಎಲ್.ರಾಹುಲ್, 31.3), 4-213 (ಮಹೇಂದ್ರ ಸಿಂಗ್ ಧೋನಿ, 46.1)

ಬೌಲಿಂಗ್:ಇಮ್ರಾನ್ ತಾಹಿರ್ 10–0–58–0, ಕಗಿಸೊ ರಬಾಡ 10–1–39–2 (ವೈಡ್ 1), ಕ್ರಿಸ್ ಮಾರಿಸ್ 10–3–36–1 (ವೈಡ್ 1), ಆ್ಯಂಡಿಲೆ ಪಿಶುವಾಯೊ 8.3–0–40–1 (ವೈಡ್ 1), ತಬ್ರೇಜ್ ಶಂಸಿ 9–0–54–0 (ವೈಡ್ 1)

ಫಲಿತಾಂಶ: ಭಾರತಕ್ಕೆ 6 ವಿಕೆಟ್‌ಗಳ ಜಯ,ಪಂದ್ಯಶ್ರೇಷ್ಠ: ರೋಹಿತ್ ಶರ್ಮಾ

ಇದನ್ನೂ ಓದಿ:ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ: ‘ಮೊದಲ’ ಪಂದ್ಯದ ಏಳು–ಬೀಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.