ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ WTC Final: ಸೋಲಿನ ಸುಳಿಯಲ್ಲಿ ಭಾರತ

ಅಕ್ಷರ ಗಾತ್ರ

ಸೌತಾಂಪ್ಟನ್‌:ಸೌತಾಂಪ್ಟನ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಭಾರತ ಸೋಲಿನ ಸುಳಿಗೆ ಸಿಲುಕಿದೆ. 2ನೇ ಇನಿಂಗ್ಸ್‌ನಲ್ಲಿ ಭಾರತ ನೀಡಿರುವ 139 ರನ್ ಗುರಿ ಬೆನ್ನತ್ತಿರುವ ನ್ಯೂಜಿಲೆಂಡ್ ಗೆಲುವಿನತ್ತ ದಾಪುಗಾಲಿಟ್ಟಿದೆ. ಇತ್ತೀಚಿನ ವರದಿ ಬಂದಾಗ 14.2 ಓವರ್‌ಗೆ 1 ವಿಕೆಟ್‌ ಕಳೆದುಕೊಂಡುನ್ಯೂಜಿಲೆಂಡ್ 34 ರನ್ ಗಳಿಸಿತ್ತು. ಇದಕ್ಕೂ ಮುನ್ನ, 2ನೇ ಇನ್ನಿಂಗ್ಸ್‌ನಲ್ಲಿ ಭಾರತ 170 ರನ್‌‌ಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ ಸುಲಭ ಗುರಿ ನೀಡಿತು.

ವರುಣನ ಅವಕೃಪೆಯಲ್ಲೇ ಆರಂಭಗೊಂಡ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಭಾರತದ ಪಾಲಿಗೆ ಟಿಮ್‌ ಸೌಥಿ ಮಿಂಜಿನಂತೆ ಎರಗಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್‌ ಶರ್ಮಾ ಮತ್ತು ಸುಭಮನ್‌ ಗಿಲ್‌ ಇಬ್ಬರನ್ನು ಎಲ್‌‌ಬಿಡಬ್ಳ್ಯುಗೆ ಬೀಳಿಸುವ ಮೂಲಕ ರನ್‌ ವೇಗಕ್ಕೆ ಕಡಿವಾಣ ಹಾಕಿದ್ದಾರೆ.

ಸೌತಂಪ್ಟನ್‌ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್‌ ಮತ್ತು ಭಾರತದ ನಡುವಣ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ತೋರಿದ ಕಳಪೆ ಪ್ರದರ್ಶನದಿಂದ ಸೋಲುವ ಭೀತಿ ಎದುರಿಸುತ್ತಿದೆ. ಭಾರತದ ಪರ ರಿಷಬ್‌ ಪಂತ್‌ ಮತ್ತು ರೋಹಿತ್‌ ಶರ್ಮಾ ಇಬ್ಬರಷ್ಟೇ 20ಕ್ಕಿಂತ ಹೆಚ್ಚು ವೈಯಕ್ತಿಕ ರನ್‌ ಗಳಿಸಲು ಶಕ್ತರಾದರು.

ನ್ಯೂಜಿಲೆಂಡ್‌ನ ವೇಗಿಗಳಾದ ಟಿಮ್‌ ಸೌಥಿ ಮತ್ತು ಟ್ರೆಂಟ್‌ ಬೌಲ್ಟ್‌ ಕರಾರುವಾಕ್‌ ದಾಳಿಗೆ ನಲುಗಿದ ಭಾರತ 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 170 ರನ್‌ಗಳಿಗೆ ಆಲೌಟ್‌ ಆಯಿತು. 139 ರನ್‌ಗಳ ಅಲ್ಪ ಮೊತ್ತದ ಮುನ್ನಡೆಯನ್ನಷ್ಟೇ ಕಾಯ್ದುಕೊಂಡಿತು.

ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸುವ ಮೂಲಕ ಭರವಸೆ ಮೂಡಿಸಿದ್ದರು. ಆದರೆ ಟಿಮ್‌ ಸೌಥಿಯ ಅದ್ಭುತ ಎಸೆತ ರೋಹಿತ್‌ ಶರ್ಮಾರನ್ನು ಎಲ್‌ಬಿಡಬ್ಳ್ಯುಗೆ ಬಲೆಗೆ ಬೀಳಿಸಿತು. ನಾಯಕ ವಿರಾಟ್‌ ಕೊಹ್ಲಿ ಕೇವಲ 13 ರನ್‌ ಗಳಿಸಿ ನಿರಾಸೆ ಮೂಡಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ರಿಷಬ್‌ ಪಂತ್‌ ಭಾರತ ತಂಡದ ಬೆನ್ನೆಲುಬಾಗುವ ಪ್ರಯತ್ನ ನಡೆಸಿದ್ದರಾದರೂ 41 ರನ್‌ ಗಳಿಸಿ ಟ್ರೆಂಟ್‌ ಬೌಲ್ಟ್‌ ಬೌಲಿಂಗ್‌ನಲ್ಲಿ ಹೆನ್ರಿ ನಿಕೋಲಸ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

ರೋಹಿತ್‌ ಶರ್ಮಾ ಜೊತೆ ಕ್ರೀಸ್‌ಗೆ ಇಳಿದ ಶುಭಮನ್‌ ಗಿಲ್‌ ಎರಡಂಕಿಯ ಸ್ಕೋರ್‌ ದಾಖಲಿಸಲು ವಿಫಲರಾದರು. ಟಿಮ್‌ ಸೌಥಿಯ ಬೌಲಿಂಗ್‌ನಲ್ಲಿ ರೋಹಿತ್‌ ಶರ್ಮಾರಂತೆ ಎಲ್‌ಬಿಡಬ್ಳ್ಯುಗೆ ಬಲಿಯಾದರು. ನ್ಯೂಜಿಲೆಂಡ್‌ ಪರ ಟಿಮ್‌ ಸೌಥಿ 4, ಟ್ರೆಂಟ್‌ ಬೌಲ್ಟ್‌ 3, ಕೈಲ್‌ ಜೆಮಿಸನ್‌ 2 ಹಾಗೂ ನೈಲ್‌ ವ್ಯಾಗ್ನರ್‌ 1 ವಿಕೆಟ್‌ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್‌
ಭಾರತ ಮೊದಲ ಇನ್ನಿಂಗ್ಸ್‌: 217
ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್‌: 249

ಭಾರತ 2ನೇ ಇನ್ನಿಂಗ್ಸ್‌: 170

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT