ಫೋರ್ಡೆ (ನಾರ್ವೆ): ಅನುಭವಿ ಮೀರಾಬಾಯಿ ಚಾನು ಅವರು ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನ ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು. ಇದು ಭಾರತದ ತಾರಾ ವೇಟ್ಲಿಫ್ಟರ್ಗೆ ಇದು ಮೂರನೇ ಪದಕ.

ಈ ಹಿಂದೆ 2017 ಮತ್ತು 2022ರಲ್ಲೂ ಅವರು ರಜತ ಪದಕ ಜಯಿಸಿದ್ದರು. ಅವರು ಒಟ್ಟು 199 ಕೆ.ಜಿ. ಭಾರ ಎತ್ತಿದರು. 31 ವರ್ಷ ವಯಸ್ಸಿನ ಚಾನು ಸ್ನಾಚ್ನಲ್ಲಿ 84 ಕೆ.ಜಿ ಮತ್ತು ಕ್ಲೀನ್ ಮತ್ತು ಜರ್ಕ್ನಲ್ಲಿ115 ಕೆ.ಜಿ ಎತ್ತಿದರು.

ಸ್ನಾಚ್ ಸ್ಪರ್ಧೆಯ ವೇಳೆ ಅವರು ಪರದಾಡಿದರು. 87 ಕೆ.ಜಿ. ಎತ್ತಲು ಹೋಗಿ ಎರಡು ಸಲ ವಿಫಲರಾದರು. ಆದರೆ ಕ್ಲೀನ್ ಮತ್ತು ಜರ್ಕ್ನಲ್ಲಿ ಅವರು ಮೂರೂ ಯತ್ನಗಳಲ್ಲಿ (109, 112 ಮತ್ತು 115 ಕೆ.ಜಿ) ಸರಾಗವಾಗಿ ಭಾರ ಎತ್ತಿದರು. ಅವರು 115 ಕೆ.ಜಿ. ಭಾರವನ್ನು ಇದಕ್ಕಿಂತ ಮೊದಲು ಟೋಕಿಯೊ ಒಲಿಂಪಿಕ್ಸ್ನಲ್ಲಿ (2021) ಎತ್ತಿದ್ದರು.

ಉತ್ತರ ಕೊರಿಯಾದ ರಿ ಸಾಂಗ್ ಗುಮ್ 213 ಕೆ.ಜಿ. ಭಾರ (91 ಕೆ.ಜಿ+ 122 ಕೆ.ಜಿ) ಎತ್ತಿ ಚಿನ್ನ ಗೆದ್ದರಲ್ಲದೇ, ಆ ಹಾದಿಯಲ್ಲಿ ಕ್ಲೀನ್ ಆ್ಯಂಡ್ ಜರ್ಕ್ ಮತ್ತು ಒಟ್ಟು ತೂಕ ವಿಭಾಗದಲ್ಲಿ ನೂತನ ವಿಶ್ವ ದಾಖಲೆಯನ್ನು ಸ್ಥಾಪಿಸಿದರು.

ಥಾಯ್ಲೆಂಡ್ನ ಥಾನ್ಯಥಾನ್ ಸುಕ್ಚೆರೋನ್ ಒಟ್ಟು 198 ಕೆ.ಜಿ. ಭಾರ (88+110 ಕೆ.ಜಿ) ಎತ್ತಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.