ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RCB: ಚೊಚ್ಚಲ ಟ್ರೋಫಿಗಿನ್ನು ಎರಡು ಹೆಜ್ಜೆ; ಎಲಿಮಿನೇಟರ್‌ನಲ್ಲಿ ಎದುರಾಳಿ ಯಾರು?

Published 13 ಮಾರ್ಚ್ 2024, 6:35 IST
Last Updated 13 ಮಾರ್ಚ್ 2024, 6:35 IST
ಅಕ್ಷರ ಗಾತ್ರ

ಬೆಂಗಳೂರು: 2008ರಲ್ಲಿ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇದುವರೆಗೆ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ.

ಮತ್ತೊಂದೆಡೆ ಎರಡನೇ ಆವೃತ್ತಿಗೆ ಕಾಲಿಟ್ಟಿರುವ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (ಡಬ್ಲ್ಯುಪಿಎಲ್) ಆರ್‌ಸಿಬಿ ತಂಡವು ಟ್ರೋಫಿ ಗೆಲ್ಲಲು ಇನ್ನೂ ಎರಡು ಹೆಜ್ಜೆ ಮಾತ್ರ ಇಡಬೇಕಿದೆ.

ಮಂಗಳವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಸ್ಮೃತಿ ಮಂದಾನ ಬಳಗ ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿದೆ.

ಎಲಿಸ್ ಪೆರಿ ವಿಕೆಟ್ ಪಡೆದ ಸಂಭ್ರಮ

ಎಲಿಸ್ ಪೆರಿ ವಿಕೆಟ್ ಪಡೆದ ಸಂಭ್ರಮ

(ಪಿಟಿಐ ಚಿತ್ರ)

ಎಲಿಮಿನೇಟರ್‌ನಲ್ಲಿ ಎದುರಾಳಿ ಯಾರು?

ಐದು ತಂಡಗಳ ಪೈಕಿ ಮೂರನೇ ಸ್ಥಾನ ಖಚಿತಪಡಿಸಿರುವ ಆರ್‌ಸಿಬಿ ಫೈನಲ್‌ಗೆ ಪ್ರವೇಶಿಸಲು ಮಗದೊಂದು ಸವಾಲನ್ನು ಮೆಟ್ಟಿ ನಿಲ್ಲಬೇಕಿದೆ. ಸೆಮಿಫೈನಲ್‌ಗೆ ಸಮಾನವಾದ ಎಲಿಮಿನೇಟರ್‌ ಪಂದ್ಯದಲ್ಲಿ ಯಾವ ತಂಡದ ಸವಾಲು ಎದುರಾಗಲಿದೆ ಎಂಬುದು ಕುತೂಹಲವೆನಿಸಿದೆ. ಆರ್‌ಸಿಬಿ ಆಡಿರುವ ಎಂಟು ಪಂದ್ಯಗಳಲ್ಲಿ ತಲಾ ನಾಲ್ಕು ಗೆಲುವು ಹಾಗೂ ಸೋಲಿನೊಂದಿಗೆ ಒಟ್ಟು ಎಂಟು ಅಂಕ ಗಳಿಸಿದೆ.

ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಈಗಾಗಲೇ ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿದೆ. ಈ ಪೈಕಿ ಡೆಲ್ಲಿ ಇಂದು ನಡೆಯಲಿರುವ ಕೊನೆಯ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ಸವಾಲನ್ನು ಎದುರಿಸಲಿದೆ.

ಇಲ್ಲಿ ಗೆದ್ದರೆ ಡೆಲ್ಲಿ ನೇರವಾಗಿ ಫೈನಲ್‌ಗೆ ಪ್ರವೇಶಿಸಲಿದೆ. ಒಂದು ವೇಳೆ ಸೋತರೂ ಮುಂಬೈಗಿಂತಲೂ ಉತ್ತಮ ರನ್‌ರೇಟ್ ಕಾಯ್ದುಕೊಳ್ಳಬೇಕಿದೆ. ಸದ್ಯ ಡೆಲ್ಲಿ +0.918 ಹಾಗೂ ಮುಂಬೈ +0.024ರ ರನ್‌ರೇಟ್ ಹೊಂದಿದೆ.

ಸದ್ಯ ಡೆಲ್ಲಿ ಹಾಗೂ ಮುಂಬೈ ತಲಾ 10 ಅಂಕಗಳನ್ನು ಹೊಂದಿದೆ. ಮತ್ತೊಂದೆಡೆ ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಕ್ಯಾಪಿಟಲ್ಸ್ ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿವೆ.

ಒಟ್ಟಿನಲ್ಲಿ ಕಳೆದ ವರ್ಷ ಮಹಿಳಾ ಪ್ರೀಮಿಯರ್ ಲೀಗ್ ಚೊಚ್ಚಲ ಆವೃತ್ತಿಯಲ್ಲಿ ಪ್ಲೇ-ಆಫ್ ತಲುಪಲು ವಿಫಲವಾಗಿದ್ದ ಆರ್‌ಸಿಬಿ ಈ ಬಾರಿ ಪ್ರಶಸ್ತಿ ಗೆಲ್ಲಬಹುದೇ ಎಂಬುದನ್ನು ಕಾದುನೋಡಬೇಕಿದೆ.

WPL 2024 ಅಂಕಪಟ್ಟಿ (19ನೇ ಪಂದ್ಯದ ಅಂತ್ಯಕ್ಕೆ)

WPL 2024 ಅಂಕಪಟ್ಟಿ

WPL 2024 ಅಂಕಪಟ್ಟಿ

(ಚಿತ್ರ ಕೃಪೆ: wplt20.com)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT