ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WPL–2023: ಡೆಲ್ಲಿ ಕ್ಯಾಪಿಟಲ್ಸ್ ಎದುರು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ಜೈಂಟ್ಸ್

Last Updated 11 ಮಾರ್ಚ್ 2023, 13:55 IST
ಅಕ್ಷರ ಗಾತ್ರ

ಮುಂಬೈ: ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಇಂದಿನ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ (ಜಿಜಿ) ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ (ಡಿಸಿ) ಸೆಣಸಾಟ ನಡೆಸುತ್ತಿವೆ. ಜೈಂಟ್ಸ್ ನಾಯಕಿ ಸ್ನೇಹಾ ರಾಣಾ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದಾರೆ.

ಇಲ್ಲಿನ ಡಿ.ವೈ.ಪಾಟೀಲ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.

ಆಸ್ಟ್ರೇಲಿಯಾದ ಮೆಗ್‌ ಲ್ಯಾನಿಂಗ್‌ ನೇತೃತ್ವದ ಡಿಸಿ, ಆಡಿರುವ ಮೂರು ಪಂದ್ಯಗಳಲ್ಲಿ 2 ಗೆಲುವು ಹಾಗೂ 1 ಸೋಲು ಕಂಡಿದ್ದು, ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇಷ್ಟೇ ಪಂದ್ಯಗಳನ್ನು ಆಡಿ 2 ಸೋಲು ಹಾಗೂ ಒಂದು ಜಯ ಸಾಧಿಸಿರುವ ಜೈಂಟ್ಸ್, ನಾಲ್ಕನೇ ಸ್ಥಾನದಲ್ಲಿದೆ.

ಪಾಯಿಂಟ್‌ ಪಟ್ಟಿಯಲ್ಲಿ ಮೇಲೇರಲು ಎರಡೂ ತಂಡಗಳಿಗೆ ಇಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ.

ಆಡುವ ಹನ್ನೊಂದರ ಬಳಗ
ಡೆಲ್ಲಿ ಕ್ಯಾಪಿಟಲ್ಸ್‌: ಮೆಗ್‌ ಲ್ಯಾನಿಂಗ್‌ (ನಾಯಕಿ), ಶೆಫಾಲಿ ವರ್ಮಾ, ಲೌರಾ ಹ್ಯಾರಿಸ್‌, ಜೆಮಿಮಾ ರಾಡ್ರಿಗಸ್‌, ಮರಿಜನ್ನೆ ಕೆಪ್‌, ಜೆಸ್‌ ಜಾನ್‌ಸನ್‌, ತಾನಿಯಾ ಭಾಟಿಯಾ, ಮಿನ್ನು ಮಣಿ, ರಾಧಾ ಯಾದವ್‌, ಶಿಖಾ ಪಾಂಡೆ, ತಾರಾ ನೊರಿಸ್‌

ಗುಜರಾತ್ ಜೈಂಟ್ಸ್: ಸ್ನೇಹಾ ರಾಣಾ (ನಾಯಕಿ), ಸಬ್ಭಿನೇನಿ ಮೇಘನಾ, ಲೌರಾ ವೊಲ್ವಾರ್ಡ್ಟ್‌, ಹರ್ಲೀನ್‌ ಡಿಯೋಲ್‌, ಅಲಿಸಾ ಗಾರ್ಡನರ್‌, ಜಾರ್ಜಿಯಾ ವರೇಹ್ಮ್‌, ಸುಷ್ಮಾ ವರ್ಮಾ, ದಯಾಳನ್‌ ಹೇಮಲತಾ, ಕಿಮ್‌ ಗರ್ಥ್‌, ಮಾನ್ಸಿ ಜೋಶಿ, ತನುಜಾ ಕನ್ವಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT