ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತೇಶ್ವರ್ ಪೂಜಾರ ಯಾರ್ಕ್‌ಶೈರ್‌ನಲ್ಲಿ ಸ್ಟೀವ್!

ಏಷ್ಯಾ ಮೂಲದ ವ್ಯಕ್ತಿಗಳನ್ನು ಅಲ್ಲಿಯವರು ಸಂಬೋಧಿಸುತ್ತಿದ್ದ ರೀತಿ; ಸಾಂಸ್ಥಿಕ ಜನಾಂಗೀಯ ನಿಂದನೆ ತನಿಖೆ ವೇಳೆ ಬಹಿರಂಗ
Last Updated 5 ಡಿಸೆಂಬರ್ 2020, 15:32 IST
ಅಕ್ಷರ ಗಾತ್ರ

ಲೀಡ್ಸ್ (ಪಿಟಿಐ): ಕೆಲವು ತಿಂಗಳುಗಳ ಹಿಂದೆ ಇಂಗ್ಲಿಷ್ ಕೌಂಟಿ ಕ್ರಿಕೆಟ್ ಆಡಲು ತೆರಳಿದ್ದ ಭಾರತದ ಚೇತೇಶ್ವರ್ ಪೂಜಾರ ಅವರನ್ನು ಯಾರ್ಕ್‌ಶೈರ್‌ ಕ್ಲಬ್‌ನ ಕೆಲವರು ಸ್ಟೀವ್ ಎಂದು ಕರೆಯುತ್ತಿದ್ದರಂತೆ.

ಏಷ್ಯಾ ಮೂಲದ ವ್ಯಕ್ತಿಗಳನ್ನು ಸ್ಟೀವ್ ಎಂದು ಕರೆಯುವುದನ್ನು ಅಲ್ಲಿಯವರು ರೂಢಿಸಿಕೊಂಡಿದ್ದಾರೆ. ಈಚೆಗೆ ಕ್ರಿಕೆಟಿಗ ಅಜೀಂ ರಫೀಕ್ ಅವರು ಯಾರ್ಕ್‌ಶೈರ್‌ನಲ್ಲಿ ಸಾಂಸ್ಥಿಕ ಜನಾಂಗೀಯ ನಿಂದನೆ ನಡೆಯುತ್ತಿದೆ ಎಂದು ಆರೋಪಿಸಿದ್ದರು.ಈ ಕುರಿತ ತನಿಖೆಯಲ್ಲಿ ಪೂಜಾರಾ ವಿಷಯವು ಬಹಿರಂಗವಾಗಿದೆ.

ಅವರ ಆರೋಪವನ್ನು ಅಲ್ಲಿಯ ಮಾಜಿ ಉದ್ಯೋಗಿಗಳಾಗಿರುವ ತಾಜ್ ಬಟ್ ಮತ್ತು ಟೋನಿ ಬೌರಿ ಅವರು ಸಮರ್ಥಿಸಿದ್ದಾರೆ. ವೆಸ್ಟ್‌ ಇಂಡೀಸ್‌ನ ಮಾಜಿ ಕ್ರಿಕೆಟಿಗ ಟಿನೊ ಬೆಸ್ಟ್ ಮತ್ತು ಪಾಕಿಸ್ತಾನದ ರಾಣಾ ನವೀದ್ ಉಲ್ ಹಸನ್ ಅವರೂ ತಮ್ಮ ಹೇಳಿಕೆಯಲ್ಲಿ ರಫೀಕ್ ದೂರನ್ನು ಸಮರ್ಥಿಸಿದ್ದಾರೆ.

’ಏಷ್ಯನ್ ಮೂಲದವರ ಮೈಬಣ್ಣದ ಎಲ್ಲರನ್ನೂ ಅವರು ಸ್ಟೀವ್ ಎಂದೇ ಕರೆಯುತ್ತಿದ್ದರು. ಭಾರತದ ಚೇತೇಶ್ವರ್ ಪೂಜಾರಾ ಅವರ ಹೆಸರನ್ನು ಉಚ್ಛರಿಸಲು ಸಾಧ್ಯವಾಗದ ಕಾರಣ, ಅವರನ್ನೂ ಸ್ಟೀವ್ ಎಂದು ಕರೆಯುತ್ತಿದ್ದರು‘ ಎಂದು ಯಾರ್ಕ್‌ಶೈರ್ ಕ್ರಿಕೆಟ್ ಫೆಡರೇಷನ್‌ನಲ್ಲಿ ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿದ್ದ ತಾಜ್ ಬಟ್ ಹೇಳಿದ್ದಾರೆ. ಅವರು ಅಲ್ಲಿ ಕೇವಲ ಆರು ತಿಂಗಳು ಮಾತ್ರ ಕಾರ್ಯನಿರ್ವಹಿಸಿ ರಾಜೀನಾಮೆ ನೀಡಿದ್ದರು.

’ಬಹಳಷ್ಟು ಯುವ ಆಟಗಾರರು ಕ್ರಿಕೆಟ್‌ನಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಅಪಾರ ಕಷ್ಟಪಡುತ್ತಾರೆ. ಈ ಹಂತಕ್ಕೆ ಬಂದಾಗ ಡ್ರೆಸ್ಸಿಂಗ್ ಕೋಣೆಯಲ್ಲಿ ನೇರವಾಗಿ ವರ್ಣಬೇಧ ನೀತಿಗೆ ಬಲಿಪಶುಗಳಾಗುತ್ತಾರೆ. ಅಸಹನೀಯ ವಾತಾವರಣವನ್ನು ಅನುಭವಿಸುತ್ತಾರೆ. ಇದು ಆ ಹುಡುಗರ ಸಾಮರ್ಥ್ಯ ಪ್ರದರ್ಶನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆಗ ಅವರಿಗೆ ಪೀಡಕರು ಎಂಬ ಹಣೆಪಟ್ಟಿ ಹಚ್ಚಿ ಶೋಷಿಸಲಾಗುತ್ತದೆ‘ ಎಂದು ಬೌರಿ ಹೇಳಿಕೆ ಕೊಟ್ಟಿದ್ದಾರೆ.

ಆಫ್‌ಸ್ಪಿನ್ನರ್ ರಫೀಕ್ 2018ರಲ್ಲಿ ಯಾರ್ಕ್‌ಶೈರ್ ತೊರೆದಿದ್ದರು. ತಮಗಾದ ಕೆಟ್ಟ ಅನುಭವದಿಂದಾಗಿ ಆತ್ಮಹತ್ಯೆಗೂ ಅವರು ಪ್ರಯತ್ನಿಸಿದ್ದರು ಎಂದು ಅವರೇ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದರು.

’ಯಾರ್ಕ್‌ಶೈರ್ ಕ್ಲಬ್ ಮತ್ತು ಇಂಗ್ಲೆಂಡ್–ವೇಲ್ಡ್‌ ಕ್ರಿಕೆಟ್ ಸಂಸ್ಥೆಯು ನನ್ನ ದೂರಿನ ಕುರಿತು ತನಿಖೆ ನಡೆಸುತ್ತಿರುವುದು ಸ್ವಾಗತಾರ್ಹ. ಆಗ ನಾನು ವರ್ಣದ್ವೇಷದ ವಿರುದ್ಧ ದನಿಯೆತ್ತಿದಾಗ ಯಾರೂ ಕ್ರಮ ಕೈಗೊಳ್ಳಲಿಲ್ಲ‘ ಎಂದು ರಫೀಕ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT