ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ಕ್ರಿಕೆಟ್‌: ಶ್ರೀಲಂಕಾ ವಿರುದ್ಧ ಸರಣಿ ಗೆದ್ದ ನ್ಯೂಜಿಲೆಂಡ್

Last Updated 31 ಮಾರ್ಚ್ 2023, 11:24 IST
ಅಕ್ಷರ ಗಾತ್ರ

ಹ್ಯಾಮಿಲ್ಟನ್‌: ವಿಲ್‌ ಯಂಗ್‌ (ಔಟಾಗದೆ 86) ಅವರ ಅಜೇಯ ಅರ್ಧಶತಕ ಹಾಗೂ ಬೌಲರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ನ್ಯೂಜಿಲೆಂಡ್‌ ತಂಡ, ಮೂರನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿತು.

ಈ ಮೂಲಕ ಟಾಮ್‌ ಲಥಾಮ್‌ ಬಳಗ ಮೂರು ಪಂದ್ಯಗಳ ಸರಣಿಯನ್ನು 2–0 ರಲ್ಲಿ ಜಯಿಸಿತು. ಮೊದಲ ಏಕದಿನ ಪಂದ್ಯವನ್ನು ನ್ಯೂಜಿಲೆಂಡ್‌ 198 ರನ್‌ಗಳಿಂದ ಗೆದ್ದಿದ್ದರೆ, ಎರಡನೇ ಪಂದ್ಯ ಮಳೆಯಿಂದ ರದ್ದಾಗಿತ್ತು.

ಸರಣಿ ಸೋಲು ಅನುಭವಿಸಿದ ಕಾರಣ ಶ್ರೀಲಂಕಾ ತಂಡ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಟೂರ್ನಿಗೆ ನೇರ ಪ್ರವೇಶ ಪಡೆಯುವ ಅವಕಾಶ ಕಳೆದುಕೊಂಡಿತು. ಜೂನ್‌ನಲ್ಲಿ ಜಿಂಬಾಬ್ವೆಯಲ್ಲಿ ನಡೆಯಲಿರುವ ಅರ್ಹತಾ ಟೂರ್ನಿಯಲ್ಲಿ ಆಡಬೇಕಾಗಿದೆ.

ಶುಕ್ರವಾರ ಮೊದಲು ಬ್ಯಾಟ್‌ ಮಾಡಿದ ಪ್ರವಾಸಿ ತಂಡ 41.3 ಓವರ್‌ಗಳಲ್ಲಿ 157 ರನ್‌ಗಳಿಗೆ ಆಲೌಟಾಯಿತು. ಪಥುಮ್‌ ನಿಸಾಂಕ (57) ಹೊರತುಪಡಿಸಿ ಇತರರು ವಿಫಲರಾದರು. ಆತಿಥೇಯ ತಂಡದ ಮ್ಯಾಟ್‌ ಹೆನ್ರಿ, ಡೆರಿಲ್ ಮಿಚೆಲ್‌ ಮತ್ತು ಹೆನ್ರಿ ಶಿಪ್ಲಿ ತಲಾ ಮೂರು ವಿಕೆಟ್‌ ಪಡೆದರು.

ಸಾಧಾರಣ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌ 59 ರನ್‌ಗಳಿಗೆ ಆರು ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಒಳಗಾಗಿತ್ತು. ಆದರೆ ವಿಲ್‌ ಯಂಗ್‌ ಮತ್ತು ಹೆನ್ರಿ ನಿಕೊಲ್ಸ್‌ (ಔಟಾಗದೆ 44) ಮುರಿಯದ ಐದನೇ ವಿಕೆಟ್‌ಗೆ 100 ರನ್‌ ಸೇರಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ 41.3 ಓವರ್‌ಗಳಲ್ಲಿ 157 (ಪಥುಮ್‌ ನಿಸಾಂಕ 57, ದಸುನ್‌ ಶನಕ 31, ಚಮಿಕ ಕರುಣರತ್ನೆ 24, ಮ್ಯಾಟ್‌ ಹೆನ್ರಿ 14ಕ್ಕೆ 3, ಹೆನ್ರಿ ಶಿಪ್ಲಿ 32ಕ್ಕೆ 3, ಡೆರಿಲ್ ಮಿಚೆಲ್‌ 32ಕ್ಕೆ 3) ನ್ಯೂಜಿಲೆಂಡ್ 32.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 159 (ವಿಲ್‌ ಯಂಗ್‌ ಔಟಾಗದೆ 86, ಹೆನ್ರಿ ನಿಕೊಲ್ಸ್‌ ಔಟಾಗದೆ 44, ಲಾಹಿರು ಕುಮಾರ 39ಕ್ಕೆ 2) ಫಲಿತಾಂಶ: ನ್ಯೂಜಿಲೆಂಡ್‌ಗೆ 6 ವಿಕೆಟ್‌ ಗೆಲುವು

ಇವನ್ನೂ ಓದಿ...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT