ಸೋಮವಾರ, ಜೂನ್ 1, 2020
27 °C
ಹಿರಿಯ ಆಲ್‌ರೌಂಡರ್ ಯುವರಾಜ್ ಸಿಂಗ್ ಪ್ರಶ್ನೆ

ಭಾರತ ತಂಡದ ಬ್ಯಾಟಿಂಗ್ ಕೋಚ್ ಸಮರ್ಥನೇ?: ಯುವಿ ಪ್ರಶ್ನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಅವರಿಗೆ  ಟ್ವೆಂಟಿ–20 ಮಾದರಿಯ ಆಟಗಾರರಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯವಿದೆಯೇ ಎಂದು ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ ಪ್ರಶ್ನಿಸಿದ್ದಾರೆ.

‘ಅವರು (ರಾಥೋಡ್) ನನ್ನ ಗೆಳೆಯ ಹೌದು. ಆದರೆ ಈ ಪ್ರಶ್ನೆಗಳನ್ನು ಕೇಳಲು ನನಗೆ ಹಿಂಜರಿಕೆ ಇಲ್ಲ. ಅವರಿಗೆ ಈಗಿನ ಚುಟುಕು ಕ್ರಿಕೆಟ್‌ ಪೀಳಿಗೆಗೆ ತರಬೇತಿ ನೀಡುವ ಸಾಮರ್ಥ್ಯ ಇದೆಯೇ?  ಅವರು ಯಾವ ದರ್ಜೆಯ ಕ್ರಿಕೆಟ್‌ ಆಡಿದ್ದಾರೆ’ ಎಂದು ಇನ್ಸ್ಟಾಗ್ರಾಮ್ ಸಂವಾದದಲ್ಲಿ ಯುವಿ ಪ್ರಶ್ನಿಸಿದ್ದಾರೆ.

ವಿಕ್ರಂ ರಾಥೋಡ್ ಹೋದ ವರ್ಷ ಸಂಜಯ್ ಬಂಗಾರ್ ಬದಲು ಭಾರತ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ಅವರು 1996 ಮತ್ತು 97 ರಲ್ಲಿ ಭಾರತ ತಂಡವನ್ನು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು