ಜ್ಯೂರಿಚ್ : ಕೊರೊನಾ ಕಾಲದಲ್ಲಿ ನಡೆಯುವ ಕ್ರೀಡೆಗಳಲ್ಲಿ ಹತ್ತಾರು ಹೊಸ ನಿಯಮಗಳು ಗಮನ ಸೆಳೆಯುತ್ತಿವೆ.

ಅಂತಹದೇ ಒಂದು ವಿಶೇಷವಾದ ನಿಯಮ ಈಗ ಫುಟ್ಬಾಲ್ನಲ್ಲಿ ಜಾರಿಯಾಗಿದೆ. ಪಂದ್ಯದಲ್ಲಿ ಆಡುವಾಗ ಯಾವುದೇ ಆಟಗಾರ ಕೆಮ್ಮಿದರೆ, ಆತನಿಗೆ ರೆಡ್ಕಾರ್ಡ್ ದರ್ಶನ ಖಚಿತ.

ಆಟಗಾರರು ಅವಾಚ್ಯ ಪದಬಳಕೆ, ನಿಂದನೆ ಮತ್ತು ಇನ್ನೊಬ್ಬರ ಅವಹೇಳನ ಮಾಡಿದಾಗ ಶಿಕ್ಷಿಸಲಾಗುತ್ತಿದ್ದ ನಿಯಮದಡಿಯಲ್ಲಿ, ಕೆಮ್ಮಿದವರಿಗೆ ಶಿಕ್ಷಿಸಲಾಗುವುದು ಎಂದು ಹೇಳಲಾಗಿದೆ.

’ರೆಫರಿಗಳು ಆಟಗಾರರ ಮೇಲೆ ನಿಗಾ ಇಟ್ಟಿರುತ್ತಾರೆ. ಕೆಮ್ಮುವವರ ಮೇಲೂ ಅವರೇ ಕ್ರಮ ಕೈಗೊಳ್ಳುವರು‘ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಎದು್ರಾಳಿ ಆಟಗಾರರ ಚಿತ್ತ ಕಲಕಲು ಮತ್ತು ಅವರು ಚೆಂಡಿನಿಂದ ದೂರ ಉಳಿಯುವಂತೆ ಮಾಡಲು ಕೆಲವರು ಕೆಮ್ಮುವಂತೆ ನಟಿಸಿದ ಪ್ರಕರಣಗಳು ಬೆಳಕಿಗೆ ಬಂದಿವೆ. ಆಟಗಾರನೊಬ್ಬ ಕೆಮ್ಮಿದಾಗ ಆತನ ಎಂಜಲು ಕಣಗಳು ಸಿಡಿಯಬಹುದೆಂಬ ಆತಂಕದಿಂದ ಎದುರಿಗಿನವರು ದೂರವೇ ಉಳಿಯುತ್ತಾರೆ. ಇದನ್ನು ತಪ್ಪಿಸಲು ನಿಯಮ ರೂಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.