ಸೋಮವಾರ, ನವೆಂಬರ್ 30, 2020
24 °C
ಅಫ್ಗಾನಿಸ್ತಾನ ತಂಡಕ್ಕೆ 3–0 ಗೆಲುವು

ಫುಟ್‌ಬಾಲ್‌: ಭಾರತ ಕಿರಿಯರಿಗೆ ಮತ್ತೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲ್‌ ಖೋಬರ್‌ (ಸೌದಿ ಅರೇಬಿಯಾ): ಭಾರತ ತಂಡ, ಎಎಫ್‌ಸಿ 19 ವರ್ಷದೊಳಗಿನವರ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲೂ ನಿರಾಸೆ ಅನುಭವಿಸಿತು. ಅಫ್ಗಾನಿಸ್ತಾನ, ಭಾನುವಾರ ನಡೆದ ಪಂದ್ಯದಲ್ಲಿ ಭಾರತ ತಂಡವನ್ನು 3–0 ಗೋಲಿನಿಂದ ಸೋಲಿಸಿತು.

ಆಡಿದ ಮೂರೂ ಪಂದ್ಯಗಳಲ್ಲಿ ಭಾರತ ಸೋತಂತಾಗಿದೆ. ಪ್ರಿನ್ಸ್‌ ಅಲ್‌ ಜಲಾವಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಅಫ್ಗನ್ನರು ಮೊದಲ ಅರ್ಧದಲ್ಲೇ ಮೂರೂ ಗೋಲುಗಳನ್ನು ಹೊಡೆದರು. ನಾಯಕ ಅಹಮದ್‌ ರಮಕಿ (2ನೇ ನಿಮಿಷ), ಮಿಡ್‌ಫೀಲ್ಡರ್‌ ಅಹಮದ್‌ ನೌಶಾದ್ (4ನೇ) ಮತ್ತು ಖಾತಂ ದೆಲ್‌ (29ನೇ ನಿಮಿಷ) ಗೋಲುಗಳನ್ನು ಗಳಿಸಿದವರು.

ಎರಡನೇ ಅರ್ಧದಲ್ಲಿ ಪ್ರತಿಹೋರಾಟ ತೋರಿದ ಭಾರತ ಕೆಲವು ಅವಕಾಶಗಳನ್ನು ಪಡೆಯಿತು. ಎರಡು ಬಾರಿ ಚೆಂಡು ಕ್ರಾಸ್‌ಬಾರ್‌ಗೆ ತಾಗಿ ಹೊರಹೋಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು