ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ನಾಕೌಟ್‌ಗೆ ಕೋರಮಂಗಲ ಎಫ್‌ಸಿ

Last Updated 9 ಮೇ 2019, 20:10 IST
ಅಕ್ಷರ ಗಾತ್ರ

ಬೆಂಗಳೂರು: ಕೋರಮಂಗಲ ಎಫ್‌ಸಿ ತಂಡದವರು ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ‘ಸಿ’ ಡಿವಿಷನ್‌ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ನಾಕೌಟ್‌ ಪ್ರವೇಶಿಸಿದ್ದಾರೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ‘ಜಿ’ ಗುಂಪಿನ ಪಂದ್ಯದಲ್ಲಿ ಕೋರಮಂಗಲ ತಂಡ 2–1 ಗೋಲುಗಳಿಂದ ರೋವರ್ಸ್‌ ಎಫ್‌ಸಿ ತಂಡವನ್ನು ಮಣಿಸಿತು.

ಇದರೊಂದಿಗೆ ಒಟ್ಟು 13 ಪಾಯಿಂಟ್ಸ್‌ ಕಲೆಹಾಕಿ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತು.

ರೋವರ್ಸ್‌ ತಂಡದ ಲರ್ಹೇಶ್‌ 19ನೇ ನಿಮಿಷದಲ್ಲಿ ಗೋಲು ಗಳಿಸಿದರು. ನಂತರ ಕೋರಮಂಗಲ ಎಫ್‌ಸಿ ಆಟಗಾರರು ಕಾಲ್ಚಳಕ ತೋರಿದರು. 40ನೇ ನಿಮಿಷದಲ್ಲಿ ಸಗಾಯ್‌ ನೇಥನ್‌ ಗೋಲು ಹೊಡೆದರು. ಹೀಗಾಗಿ ಉಭಯ ತಂಡಗಳು 1–1 ಸಮಬಲದೊಂದಿಗೆ ವಿರಾಮಕ್ಕೆ ಹೋದವು.

ದ್ವಿತೀಯಾರ್ಧದಲ್ಲಿ ಕೋರಮಂಗಲ ತಂಡ ಇನ್ನಷ್ಟು ಚುರುಕಾಗಿ ಆಡಿತು. 53ನೇ ನಿಮಿಷದಲ್ಲಿ ಅಂಥೋಣಿ ವಿನ್ಸೆಂಟ್‌ ಚೆಂಡನ್ನು ಗುರಿ ಮುಟ್ಟಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.

ಇನ್ನೊಂದು ಪಂದ್ಯದಲ್ಲಿ ಗೂರ್ಖಾ ಬಾಯ್ಸ್‌ ಎಫ್‌ಸಿ 1–0 ಗೋಲಿನಿಂದ ವೆಟರನ್ಸ್‌ ಎಫ್‌ಸಿ ಎದುರು ಗೆದ್ದಿತು.

47ನೇ ನಿಮಿಷದಲ್ಲಿ ಗೋಲು ಹೊಡೆದ ಬಿಬೆಕ್‌, ಗೂರ್ಖಾ ತಂಡದ ಗೆಲುವಿನ ರೂವಾರಿಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT