ಸೋಮವಾರ, ಜನವರಿ 20, 2020
21 °C

ಮೊಹಮ್ಮದ್‌ ಅಸ್ರಾರ್‌ ಹ್ಯಾಟ್ರಿಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೊಹಮ್ಮದ್‌ ಅಸ್ರಾರ್‌ ರೆಹಬರ್‌ ಸಾಧಿಸಿದ ಹ್ಯಾಟ್ರಿಕ್‌ ನೆರವಿನಿಂದ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡವು ಬೆಂಗಳೂರು ಇಂಡಿಪೆಂಡೆಂಟ್ಸ್ ಎದುರು 4–0 ಗೋಲುಗಳಿಂದ ಗೆದ್ದಿತು.

ಇಲ್ಲಿನ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಹಣಾಹಣಿಯಲ್ಲಿ ಶನಿವಾರ, ವಿಜೇತ ತಂಡದ ಅಸ್ರಾರ್‌ 23, 68 ಹಾಗೂ 71ನೇ ನಿಮಿಷ ಗೋಲು ಗಳಿಸಿದರು. ಮತ್ತೊಂದು ಗೋಲು ಚೆಲ್ಸ್‌ಟನ್‌ ಬ್ರೆಂಡನ್‌ ಪಿಂಟೊ (54ನೇ ನಿಮಿಷ) ದಾಖಲಿಸಿದರು.

ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿಯು 1–0ಯಿಂದ ಎಜಿಒಆರ್‌ಸಿ ಎಫ್‌ಸಿ ವಿರುದ್ಧ ಜಯ ಸಾಧಿಸಿತು.

ಭಾನುವಾರ ನಡೆಯುವ ಪಂದ್ಯಗಳಲ್ಲಿ ಇನ್‌ಕಮ್‌ ಟ್ಯಾಕ್ಸ್ ಎಫ್‌ಸಿ–ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ಹಾಗೂ ಕಿಕ್‌ಸ್ಟಾರ್ಟ್‌ ಎಫ್‌ಸಿ ಕರ್ನಾಟಕ–ಓಜೋನ್‌ ಎಫ್‌ಸಿ ಬೆಂಗಳೂರು ಆಡಲಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು