ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತಾಶೆಯಿಂದ ಕುರ್ಚಿ ಮುರಿದ ಆಟಗಾರರು

Last Updated 7 ಡಿಸೆಂಬರ್ 2019, 18:46 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಎಫ್‌ಸಿ ಬೆಂಗಳೂರು ಯುನೈಟೆಡ್‌ ಮತ್ತು ಕಿಕ್‌ಸ್ಟಾರ್ಟ್‌ ಎಫ್‌ಸಿ ಕರ್ನಾಟಕ ತಂಡಗಳ ನಡುವಣ ಸೂಪರ್‌ ಡಿವಿಷನ್‌ ಲೀಗ್‌ ಪಂದ್ಯ ಆಟಗಾರರ ಜಟಾಪಟಿಗೆ ಸಾಕ್ಷಿಯಾಯಿತು.

ಯುನೈಟೆಡ್‌ ತಂಡ 2–1 ಗೋಲುಗಳಿಂದ ಮುನ್ನಡೆ ಹೊಂದಿದ್ದ ವೇಳೆ ಪಂದ್ಯದ ರೆಫರಿ ಹೆಚ್ಚುವರಿ ಅವಧಿ (ಇಂಜುರಿ ಟೈಮ್‌) ನೀಡಿದ್ದು ವಿವಾದಕ್ಕೆ ಕಾರಣವಾಯಿತು.

ಕಿಕ್‌ಸ್ಟಾರ್ಟ್‌ ತಂಡದ ಎಡ್ವಿನ್‌ ರೊಸಾರಿಯೊ 90+6ನೇ ನಿಮಿಷದಲ್ಲಿ ಗೋಲು ಹೊಡೆದು ಸಮಬಲಕ್ಕೆ ಕಾರಣವಾದರು. ಇದರಿಂದ ಕೆರಳಿದ ಯುನೈಟೆಡ್‌ ಆಟಗಾರರು ‘ಡಗ್‌ ಔಟ್‌’ನಲ್ಲಿ ಹಾಕಿದ್ದ ಕುರ್ಚಿಗಳನ್ನು ಮುರಿದು ಹಾಕಿದರು.

ತೀರ್ಪಿನ ವಿರುದ್ಧ ಕಿಡಿಕಾರಿದ ಯುನೈಟೆಡ್‌ ತಂಡದ ಕೋಚ್‌ ರಿಚರ್ಡ್‌ ಹುಡ್‌ ಅವರಿಗೆ ಪಂದ್ಯದ ರೆಫರಿ, ಹಳದಿ ಕಾರ್ಡ್‌ ತೋರಿಸಿ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT