ಭಾನುವಾರ, ಏಪ್ರಿಲ್ 11, 2021
21 °C

ಬಿಎಫ್‌ಸಿ ತಂಡದ ಮೂವರಿಗೆ ಕೋವಿಡ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಣಜಿ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಟೂರ್ನಿಯಲ್ಲಿ ಆಡುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡದ ಮೂವರಿಗೆ ಕೋವಿಡ್‌ –19 ಇರುವುದು ಬುಧವಾರ ದೃಢಪಟ್ಟಿದೆ. ತಂಡವು ಟ್ವಿಟರ್‌ನಲ್ಲಿ ಈ ವಿಷಯವನ್ನು ತಿಳಿಸಿದೆ.

ಎಎಫ್‌ಸಿ ಅರ್ಹತಾ ಪಂದ್ಯಕ್ಕಾಗಿ (ಪ್ರಿಮಿಮನರಿ ಎರಡನೇ ಹಂತ) ತಂಡದ ತರಬೇತಿ ಶಿಬಿರ ಇಲ್ಲಿ ನಡೆಯುತ್ತಿದ್ದು, ಸೋಂಕಿತರಲ್ಲಿ ಆಟಗಾರರು ಹಾಗೂ ಸಿಬ್ಬಂದಿ ಸೇರಿದ್ದಾರೆ.

ಏಪ್ರಿಲ್ 14ರಂದು ತಂಡವು ಈ ಪಂದ್ಯವನ್ನು ಆಡಬೇಕಿದೆ. ಬ್ಯಾಂಬೊಲಿಮ್‌ನ ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯುವ ಹಣಾಹಣಿಯಲ್ಲಿ ಬಿಎಫ್‌ಸಿ ತಂಡವು, ನೇಪಾಳ ಆರ್ಮಿ ಕ್ಲಬ್‌ ಅಥವಾ ಶ್ರೀಲಂಕಾ ಪೊಲೀಸ್ ತಂಡವನ್ನು ಎದುರಿಸಲಿದೆ.

‘ಆಟಗಾರರು ಹಾಗೂ ಸಿಬ್ಬಂದಿಯ ಆರೋಗ್ಯ ಸುರಕ್ಷತೆಗಾಗಿ ತಂಡವು ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ‘ ಎಂದು ಬಿಎಫ್‌ಸಿ ಟ್ವಿಟರ್‌ನಲ್ಲಿ ತಿಳಿಸಿದೆ.

ಈ ಮೊದಲು ಬಿಎಫ್‌ಸಿ ನಾಯಕ ಸುನಿಲ್ ಚೆಟ್ರಿ ಅವರಲ್ಲಿ ಕೋವಿಡ್ ದೃಢಪಟ್ಟಿತ್ತು. ಬಳಿಕ ಅವರು ಚೇತರಿಸಿಕೊಂಡಿದ್ದರು.

ಕಳೆದ ಐಎಸ್‌ಎಲ್‌ ಟೂರ್ನಿಯ ಲೀಗ್ ಹಂತದಲ್ಲಿ ಬಿಎಫ್‌ಸಿ ಏಳನೇ ಸ್ಥಾನ ಪಡೆದಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು