ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಪ್ರಬಲರ ನಡುವೆ ಕುತೂಹಲದ ಕದನ

ಬಿಎಫ್‌ಸಿಗೆ ನಾರ್ತ್ ಈಸ್ಟ್‌ ತಂಡದ ಸವಾಲು
Last Updated 4 ಡಿಸೆಂಬರ್ 2018, 16:29 IST
ಅಕ್ಷರ ಗಾತ್ರ

ಗುವಾಹಟಿ: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಾಯಿಂಟ್‌ ಪಟ್ಟಿಯ ಅಗ್ರ ಸ್ಥಾನದಲ್ಲಿರುವ ಎರಡು ತಂಡಗಳ ನಡುವಿನ ಹಣಾಹಣಿಗೆ ಕಣ ಸಜ್ಜಾಗಿದೆ. ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಆತಿಥೇಯ ನಾರ್ತ್ ಈಸ್ಟ್‌ ಯುನೈಟೆಡ್ ಎಫ್‌ಸಿಯನ್ನು ಎದುರಿಸಲಿದೆ.

ಬಿಎಫ್‌ಸಿ, ಲೀಗ್‌ನ ಐದನೇ ಆವೃತ್ತಿಯಲ್ಲಿ ಈ ವರೆಗೆ ಸೋತಿಲ್ಲ. ಆಡಿದ ಎಂಟು ಪಂದ್ಯಗಳ ಪೈಕಿ ಏಳನ್ನು ಗೆದ್ದಿದೆ. ಕಳೆದ ಆರು ಪಂದ್ಯಗಳಲ್ಲಿ ಸತತವಾಗಿ ವಿಜಯದುಂದುಭಿ ಮೊಳಗಿಸಿದೆ. ಒಂಬತ್ತು ಪಂದ್ಯಗಳ ಪೈಕಿ ಐದರಲ್ಲಿ ಗೆದ್ದಿರುವ ನಾರ್ತ್ ಈಸ್ಟ್‌ ಮೂರನ್ನು ಡ್ರಾ ಮಾಡಿಕೊಂಡಿದ್ದು ಒಂದರಲ್ಲಿ ಸೋತಿದೆ.

ಕಳೆದ ಪಂದ್ಯದಲ್ಲಿ ಜೆಮ್‌ಶೆಡ್‌ಪುರ ಎಫ್‌ಸಿ ಎದುರು ಗೋಲುರಹಿತ ಡ್ರಾ ಸಾಧಿಸಿರುವ ತಂಡ ಜಯದ ಲಯಕ್ಕೆ ಮರಳಲು ಪ್ರಯತ್ನಿಸಲಿದೆ. ಬಿಎಫ್‌ಸಿ ಜಯದ ಓಟ ಮುಂದುವರಿಸುವ ಇರಾದೆಯೊಂದಿಗೆ ಕಣಕ್ಕೆ ಇಳಿಯಲಿದೆ. ಆದ್ದರಿಂದ ಪಂದ್ಯ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ ಎಂಬುದು ಫುಟ್‌ಬಾಲ್ ಪ್ರಿಯರ ನಿರೀಕ್ಷೆ.

ಪಾಯಿಂಟ್‌ ಪಟ್ಟಿಯ ಎರಡನೇ ಸ್ಥಾನದಲ್ಲಿದ್ದರೂ ನಾರ್ತ್ ಈಸ್ಟ್‌ ತಂಡ ಆಡಿದ ಪಂದ್ಯಗಳ ಮೇಲೆ ಕಣ್ಣಾಡಿಸಿದರೆ ತೃಪ್ತಿಕರ ಫಲಿತಾಂಶ ಕಂಡುಬರುವುದಿಲ್ಲ. ತಂಡ ಒಂಬತ್ತು ಪಂದ್ಯಗಳಲ್ಲಿ 14 ಗೋಲುಗಳನ್ನು ಮಾತ್ರ ಗಳಿಸಿದ್ದು ಎಂಟು ಗೋಲುಗಳನ್ನು ಬಿಟ್ಟುಕೊಟ್ಟಿದೆ.

ತವರಿನ ಪಂದ್ಯಗಳಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಲು ಸಾಧ್ಯವಾಗದೇ ಇರುವುದರ ಬೇಸರ ತಂಡವನ್ನು ಕಾಡುತ್ತಿದೆ. ಇಲ್ಲಿ ನಡೆದ ನಾಲ್ಕು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆಲ್ಲುವಲ್ಲಿ ನಾರ್ತ್ ಈಸ್ಟ್ ಯಶಸ್ವಿಯಾಗಿದೆ. ಹೀಗಾಗಿ ಬುಧವಾರದ ಪಂದ್ಯ ತಂಡಕ್ಕೆ ಮಹತ್ವದ್ದಾಗಿದೆ.

ತವರಿನ ಹೊರಗೂ ಶಕ್ತ ತಂಡ: ತವರಿನಲ್ಲಿ ಉತ್ತಮ ಆಟ ಆಡಿರುವ ಬಿಎಫ್‌ಸಿ ತವರಿನಿಂದ ಆಚೆಗೂ ತನ್ನ ಸಾಮರ್ಥ್ಯವನ್ನು ಮೆರೆದಿದೆ. ಈ ವರೆಗೆ ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದಿದೆ. ಮಿಕು ಅನುಪಸ್ಥಿತಿಯಲ್ಲೂ ಫಾರ್ವರ್ಡ್ ವಿಭಾಗ ತನ್ನ ಶಕ್ತಿಯನ್ನು ಮೆರೆದಿದೆ. ಮಿಡ್‌ಫೀಲ್ಡ್‌ ವಿಭಾಗದಲ್ಲಿ ಉದಾಂತ ಸಿಂಗ್‌, ದಿಮಾಸ್ ಡೆಲ್ಗಾಡೊ ಮತ್ತು ಎರಿಕ್‌ ಪಾರ್ಟಲು ಬಲಿಷ್ಠರಾಗಿದ್ದಾರೆ. ಅವರನ್ನು ವಂಚಿಸಿ ಮುನ್ನುಗ್ಗುವ ಸವಾಲು ಜೋಸ್ ಲೀಡೊ ಮತ್ತು ರಾವ್ಲಿಂಗ್ ಬೋರ್ಜೆಸ್‌ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT