ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿ ಜಯದ ಕನಸಿಗೆ ಆ್ಯಂಗುಲೊ ಅಡ್ಡಗಾಲು

ಇಂಡಿಯನ್ ಸೂಪರ್ ಲೀಗ್: ಡ್ರಾ ಪಂದ್ಯದಲ್ಲಿ ಎಫ್‌ಸಿ ಗೋವಾ
Last Updated 22 ನವೆಂಬರ್ 2020, 16:54 IST
ಅಕ್ಷರ ಗಾತ್ರ

ಮಡಗಾಂವ್: ಜಯದ ಖುಷಿಯೊಂದಿಗೆ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಅಭಿಯಾನ ಆರಂಭಿಸುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ ಆಸೆಗೆ ಐಗೋರ್ ಆ್ಯಂಗುಲೊ ಅಡ್ಡಗಾಲು ಹಾಕಿದರು.

ಫತೋರ್ಡಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯವು 2–2ರಲ್ಲಿ ಡ್ರಾ ಆಯಿತು.

ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿ ಬಳಗವು ಆರಂಭದಿಂದಲೇ ಅಮೋಘ ಸಾಮರ್ಥ್ಯ ಮೆರೆಯಿತು. ತಂಡದ ಕ್ಲೇಟನ್ ಸಿಲ್ವಾ (27ನೇ ನಿಮಿಷ) ಮತ್ತು ಯುವಾನನ್ (57 ನಿ) ತಂಡಕ್ಕೆ 2–0 ಮುನ್ನಡೆ ದೊರಕಿಸಿಕೊಟ್ಟರು. ಆದರೆ ಇವರ ಶ್ರಮಕ್ಕೆ ಐಗೊರ್ ಆ್ಯಂಗುಲೊ ತಣ್ಣಿರೇರಚಿದರು. 66 ಮತ್ತು 69ನೇ ನಿಮಿಷದಲ್ಲಿ ಸತತವಾಗಿ ಎರಡು ಗೋಲು ಹೊಡೆದ ಆ್ಯಂಗುಲೊ ತಮ್ಮ ತಂಡಕ್ಕೆ ಸಮಬಲದ ಅವಕಾಶ ಕೊಟ್ಟರು.

ನಂತರದ ರೋಚಕ ಹೋರಾಟದಲ್ಲಿ ಉಭಯ ತಂಡಗಳ ಗೋಲು ಗಳಿಕೆಯ ಪ್ರಯತ್ನಗಳು ವ್ಯರ್ಥವಾದವು. ಗೋವಾದ ಕೋಚ್ ಫರಾಂಡೊ ಮತ್ತು ಬಿಎಫ್‌ಸಿಯ ಕೋಚ್ ಕ್ವದ್ರತ್ ಅವರ ಯೋಜನೆಗಳು ಕೈಗೂಡಲಿಲ್ಲ. ಆದರೆ ಎರಡೂ ತಂಡಗಳಿಗೆ ಗೆಲುವು ಒಲಿಯಲಿಲ್ಲ.

ಹೆಚ್ಚು ಪಾಸ್‌ಗಳನ್ನು ಆಡಿದ ಗೋವಾ ಮೊದಲಾರ್ಧದದಲ್ಲಿ ಗೋಲು ಗಳಿಸುವಲ್ಲಿ ಯಶಸ್ಸು ಸಾಧಿಸಲಿಲ್ಲ. ಆದರೆ ಬಿಎಫ್‌ಸಿ ಆರಂಭಿಕ ಹಂತದಲ್ಲಿ ಉತ್ತಮವಾಗಿ ಆಡಿ ನಂತರದಲ್ಲಿ ಎಡವಿತು. ಬಿಎಫ್‌ಸಿಗೆ ನಾಲ್ಕು ಕಾರ್ನರ್‌ಗಳು ಲಭಿಸಿದ್ದವು.

ಸುನೀಲ್ ಚೆಟ್ರಿಯ ಕಾಲ್ಚಳಕಕ್ಕೂ ಈ ಪಂದ್ಯದಲ್ಲಿ ಗೋಲು ಒಲಿಯಲಿಲ್ಲ. ಬಿಎಫ್‌ಸಿಯ ತಾರಾ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರ ಕಣ್ತಪ್ಪಿಸಿದ ಆ್ಯಂಗುಲೊ ಗೋಲು ಹೊಡೆಯುವಲ್ಲಿ ಯಶಸ್ವಿಯಾದರು. ಸಮಬಲದ ನಂತರ ಗೋವಾದ ರಕ್ಷಣಾ ಪಡೆಯು ಉತ್ತಮವಾಗಿ ಆಡಿದ್ದರಿಂದ ಚೆಟ್ರಿ ಬಳದ ಆಕ್ರಮಣ ಶೈಲಿ ಆಟಕ್ಕೆ ಮೇಲುಗೈ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT