ಬುಧವಾರ, ಜೂನ್ 29, 2022
25 °C

ಎಎಫ್‌ಸಿ ಕಪ್‌ಗೆ ಚೆನ್ನೈಯಿನ್‌ ತಂಡ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಎರಡು ಬಾರಿ ಚಾಂಪಿಯನ್‌ ಆಗಿರುವ ಚೆನ್ನೈಯಿನ್‌ ಎಫ್‌ಸಿ ತಂಡ ಎಎಫ್‌ಸಿ ಕಪ್‌ ಅರ್ಹತಾ ಹಂತದ ‘ಪ್ಲೇ ಆಫ್‌’ ಪಂದ್ಯಕ್ಕೆ ಶುಕ್ರವಾರ ತಂಡವನ್ನು ಪ್ರಕಟಿಸಿದೆ.

ಗಾಯದಿಂದ ಗುಣಮುಖರಾಗಿರುವ ಧನಪಾಲ್‌ ಗಣೇಶ್‌, 25 ಸದಸ್ಯರ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಗಣೇಶ್‌ ಅವರು ಈ ಬಾರಿಯ ಐಎಸ್‌ಎಲ್‌ನಲ್ಲಿ ಕಣಕ್ಕಿಳಿದಿರಲಿಲ್ಲ. ಚೆನ್ನೈಯಿನ್‌ ತಂಡ 2017–18ನೇ ಸಾಲಿನ ಐಎಸ್‌ಎಲ್‌ನಲ್ಲಿ ಚಾಂಪಿಯನ್‌ ಆಗಿತ್ತು. ಹೀಗಾಗಿ ಎಎಫ್‌ಸಿ ಅರ್ಹತಾ ಹಂತದಲ್ಲಿ ಆಡುವ ಅವಕಾಶ ಸಿಕ್ಕಿದೆ.

ಚೆನ್ನೈಯಿನ್‌ ತಂಡ ಮಾರ್ಚ್‌ 6ರಂದು ಕೊಲಂಬೊದಲ್ಲಿ ನಡೆಯುವ ಮೊದಲ ಲೆಗ್‌ನ ಹೋರಾಟದಲ್ಲಿ ಆತಿಥೇಯ ಕೊಲಂಬೊ ಎಫ್‌ಸಿ ಎದುರು ಸೆಣಸಲಿದೆ. ಮಾರ್ಚ್‌ 13ರಂದು ಅಹಮದಾಬಾದ್‌ನಲ್ಲಿ  ಎರಡನೇ ಲೆಗ್‌ನ ಪೈಪೋಟಿ ನಿಗದಿಯಾಗಿದೆ.

ತಂಡ ಇಂತಿದೆ: ಗೋಲ್‌ ಕೀಪರ್‌ಗಳು: ಕರಣ್‌ಜೀತ್‌ ಸಿಂಗ್‌, ಸಂಜಿಬಾನ್‌ ಘೋಷ್‌ ಮತ್ತು ನಿಖಿಲ್‌ ಬರ್ನಾರ್ಡ್‌.

ಡಿಫೆಂಡರ್‌ಗಳು: ಮೈಲ್‌ಸನ್‌ ಅಲ್ವೆಸ್‌ (ಬ್ರೆಜಿಲ್‌), ಅಲಿ ಸಬಿಯಾ (ಬ್ರೆಜಿಲ್‌), ಜೊಹಮಿಂಗ್‌ಲಿಯಾನ ರಾಲ್ಟೆ, ಜೆರಿ ಲಾಲ್ರಿಂಜುವಾಲ, ಲಾಲ್ದಿಯಾನ್‌ಲಿಯಾನ ರೆಂಥಾಲೀ, ತೊಂದೊನ್ಬಾ ಸಿಂಗ್‌, ಹೆನ್ರಿ ಆ್ಯಂಟೋನಿ ಮತ್ತು ರಿಯಾಮ್ಸೊಚುಂಗ್‌ ಅಯಿಮೋಲ್‌.

ಮಿಡ್‌ಫೀಲ್ಡರ್‌ಗಳು: ಕ್ರಿಸ್‌ ಹರ್ಡ್‌ (ಆಸ್ಟ್ರೇಲಿಯಾ), ಅನಿರುದ್ಧ್‌ ಥಾಪಾ, ಜರ್ಮನ್‌ಪ್ರೀತ್ ಸಿಂಗ್‌, ಧನಪಾಲ್‌ ಗಣೇಶ್‌, ರಾಫೆಲ್‌ ಆಗಸ್ಟೊ (ಬ್ರೆಜಿಲ್‌), ಥಾಯ್‌ ಸಿಂಗ್‌, ಫ್ರಾನ್ಸಿಸ್ಕೊ ಫರ್ನಾಂಡೀಸ್‌, ಐಸಾಕ್‌ ವ್ಯಾನಮಲ್‌ಸ್ವಾಮ, ಹಲಿಚರಣ್‌ ನರ್ಜರಿ ಮತ್ತು ಜೊನುನ್‌ಮಾವಿಯಾ.

ಫಾರ್ವರ್ಡ್‌ಗಳು: ಜೆಜೆ ಲಾಲ್‌ಪೆಕ್ಲುವಾ, ಸಿ.ಕೆ.ವಿನೀತ್‌, ಮೊಹಮ್ಮದ್‌ ರಫಿ, ಬವಲ್ತೆ ರೊಹಮಿಂಗ್‌ಥಾಂಗಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು