ಮುಂಬೈ:ದೇಶದಲ್ಲಿ ಒಂದು ಕಡೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಇದರ ನಡುವೆಯೇ ಏಷ್ಯಾ ಕಪ್ ಫುಟ್‌ಬಾಲ್ ಆಯೋಜನೆಗೆ ವೇದಿಕೆ ಸಿದ್ಧವಾಗಿದೆ.

ಮುಂದಿನ ವಾರ ನಡೆಯಲಿರುವ ಟೂರ್ನಿಯಲ್ಲಿ ಆಡಲು ಚೈನಿಸ್ ತೈಪೆ ತಂಡವು ಗುರುವಾರ ಇಲ್ಲಿಗೆ ಬಂದಿಳಿದಿದೆ. ಆದರೆ, ಕೊಚ್ಚಿಯಿಂದ ಮುಂಬೈಗೆ ಹೊರಟಿದ್ದ ಭಾರತ ತಂಡದ ವಿಮಾನವು ವಿಳಂಬವಾಯಿತು. ಅದರಿಂದಾಗಿ ಸಂಜೆ ನಡೆಯಬೇಕಿದ್ದ ಮಾಧ್ಯಮಸಂವಾದವನ್ನು ಮುಂದೂಡಲಾಯಿತು.

ಭಾರತ ತಂಡವು ಎ ಗುಂಪಿನಲ್ಲಿ ಆಡಲಿದೆ. ಇರಾನ್ (ಜ. 20), ಚೈನಿಸ್ ತೈಪೆ (ಜ. 23) ಮತ್ತು ಚೀನಾ (ಜ. 26) ಎದುರು ಆಡಲಿದೆ.

ಪುಣೆಯಲ್ಲಿಯೂ ಪಂದ್ಯಗಳು ನಡೆಯಲಿವೆ. ಆದ್ದರಿಂದ ಅಲ್ಲಿ ಆಡುವ ಕೆಲವು ತಂಡಗಳು ಮುಂಬೈನಿಂದ ಪುಣೆಗೆ ರಸ್ತೆ ಮಾರ್ಗದ ಮೂಲಕ ಪ್ರಯಾಣ ಮಾಡಲಿವೆ ಎಂದು ತಿಳಿದುಬಂದಿದೆ.

‘ಇದೇ 15ರಂದು ಕೊರಿಯಾ ಗಣರಾಜ್ಯ ತಂಡವು ಇಲ್ಲಿಗೆ ಬರಲಿದೆ. ಇಲ್ಲಿಯ ಪ್ಲಷ್ ಹೋಟೆಲ್‌ನಲ್ಲಿ ವಸತಿ ಕಲ್ಪಿಸಲಾಗಿದೆ’ ಎಂದ ಮೂಲಗಳು ತಿಳಿಸಿವೆ.

ಎಲ್ಲ ತಂಡಗಳ ಆಟಗಾರರು ಕಟ್ಟುನಿಟ್ಟಿನ ಬಯೋಬಬಲ್ ನಿಯಮಗಳನ್ನು ಪಾಲಿಸಬೇಕು. ಹೋಟೆಲ್‌ನಲ್ಲಿರುವ ಸಿಬ್ಬಂದಿಯನ್ನೂ ತಪಾಸಣೆ ಮಾಡಲಾಗಿದ್ದು. ಅವರನ್ನೂ ಬಯೋಬಬಲ್ ನಿಯಮಗಳಿಗೆ ಒಳಪಡಿಸಲಾಗಿದೆ. ಹೊರಗಿನ ಯಾರೂ ಸಿಬ್ಬಂದಿ, ಆಟಗಾರರು, ಅಧಿಕಾರಿಗಳನ್ನು ಭೇಟಿಯಾಗುವಂತಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಪುಣೆ ಹೊರವಲಯದಲ್ಲಿರುವ ಬಾಲೆವಾಡಿಯ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ. 2008ರಲ್ಲಿ ಇಲ್ಲಿ ಯೂತ್ ಕಾಮನ್‌ವೆಲ್ತ್ ಗೇಮ್ಸ್ ಪಂದ್ಯಗಳನ್ನು ಆಯೋಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.