ಗುರುವಾರ ಲಿಸ್ಬನ್‌ನಲ್ಲಿ ನಡೆದ ಯುಇಎಫ್‌ಎ ನೇಷನ್ಸ್ ಲೀಗ್ ಗುಂಪು ಹಂತದ ಪಂದ್ಯದಲ್ಲಿ ಕ್ರೊವೇಷಿಯಾದ ವಿರುದ್ಧದ ಪಂದ್ಯದಲ್ಲಿ ರೊನಾಲ್ಡೊ ಈ ವಿಕ್ರಮ ಸಾಧಿಸಿದರು.
ಈ ಪಂದ್ಯದಲ್ಲಿ ಪೋರ್ಚುಗಲ್ 2-1 ಗೋಲುಗಳ ಅಂತರದಿಂದ ಕ್ರೊವೇಷಿಯಾವನ್ನು ಸೋಲಿಸಿತು. ಹಾಗೂ ರೊನಾಲ್ಡೊ ಅವರ ಹೊಸ ಮೈಲುಗಲ್ಲಿಗೆ ಸಾಕ್ಷಿಯಾಯಿತು.
ಈ ಐತಿಹಾಸಿಕ ಸಾಧನೆಯೊಂದಿಗೆ ರೊನಾಲ್ಡೊ ಫುಟ್‌ಬಾಲ್ ಇತಿಹಾಸದಲ್ಲಿ 900 ಗೋಲುಗಳನ್ನು ಹೊಡೆದ ಏಕೈಕ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ಅವರು 900ನೇ ಗೋಲುಗಳಿಸುತ್ತಿದ್ದಂತೆ ಮೈದಾನದಲ್ಲಿ ಭಾವುಕರಾದರು. ಈ ವೇಳೆ ಮೈದಾನದಲ್ಲಿ ಸಹ ಆಟಗಾರರು ಹಾಗೂ ಅಭಿಮಾನಿಗಳು ರೊನಾಲ್ಡೊ ಅವರನ್ನು ಅಭಿನಂದಿಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು, ಫುಟ್‌ಬಾಲ್ ಪ್ರೇಮಿಗಳು, ಸೆಲೆಬ್ರಿಟಿಗಳು, ನಾನಾ ದೇಶಗಳ ರಾಜಕೀಯ ನಾಯಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.