ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Euro 2024 | ಕ್ರಿಸ್ಟಿಯಾನೊ ರೊನಾಲ್ಡೊ ಡಬಲ್ ಗೋಲು

Published 12 ಜೂನ್ 2024, 13:02 IST
Last Updated 12 ಜೂನ್ 2024, 13:02 IST
ಅಕ್ಷರ ಗಾತ್ರ

ಲಿಸ್ಬನ್: ಕ್ರಿಸ್ಟಿಯಾನೊ ರೊನಾಲ್ಡೊ ಗಳಿಸಿದ ಎರಡು ಗೋಲುಗಳ ನೆರವಿನಿಂದ ಪೋರ್ಚುಗಲ್ ತಂಡವು ಯುರೋ ಕಪ್ ಫುಟ್‌ಬಾಲ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಐರ್ಲೆಂಡ್ ಎದುರು ಜಯಿಸಿತು. 

ಸೌಥ್ ಆಫ್‌ ಪೋರ್ಟೊದ ಎವಿರೋ ಮುನ್ಸಿಪಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ  39 ವರ್ಷದ ರೊನಾಲ್ಡೊ ಮಿಂಚಿದರು. ಪೋರ್ಚುಗಲ್ ತಂಡವು 3–0ಯಿಂದ ಗೆದ್ದಿತು.

ಪಂದ್ಯದ 22ನೇ ನಿಮಿಷದಲ್ಲಿ ಫೆಲಿಕ್ಸ್ ಗೋಲು ಗಳಿಸಿದರು. ಎರಡನೇ ಅವಧಿಯಲ್ಲಿ ರೊನಾಲ್ಡೊ 50 ಮತ್ತು 60ನೇ ನಿಮಿಷಗಳಲ್ಲಿ ಗೋಲು ಹೊಡೆದರು. 

ಜರ್ಮನಿಯಲ್ಲಿ ನಡೆಯಲಿರುವ ಯುರೋ ಕಪ್ ಟೂರ್ನಿಯಲ್ಲಿ ಪೋರ್ಚುಗಲ್ ತಂಡವು ಎಫ್ ಗುಂಪಿನಲ್ಲಿ ಆಡಲಿದೆ. ಈ ಗುಂಪಿನಲ್ಲಿ ಟರ್ಕಿ, ಜೆಕ್ ಗಣರಾಜ್ಯ ಹಾಗೂ ಜಾರ್ಜಿಯಾ ತಂಡಗಳು ಸೆಣಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT