ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಸ್ಟಾಗ್ರಾಂ ಮೂಲಕ ರೊನಾಲ್ಡೊ ಪಡೆಯುವ ವಾರ್ಷಿಕ ಆದಾಯ ₹ 378 ಕೋಟಿ!

ಒಂದು ಪೋಸ್ಟ್ ಹಾಕಿದರೆ ಸಿಗುತ್ತೆ ₹ 7 ಕೋಟಿ
Last Updated 30 ಜನವರಿ 2020, 12:30 IST
ಅಕ್ಷರ ಗಾತ್ರ

ನವದೆಹಲಿ: ಪೋರ್ಚುಗಲ್ ಫುಟ್‌ಬಾಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನುಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 20 ಕೋಟಿ 41ಲಕ್ಷಜನರು ಹಿಂಬಾಲಿಸುತ್ತಿದ್ದು, ಇಷ್ಟು ಸಂಖ್ಯೆಯ ಹಿಂಬಾಲಕರನ್ನು ಹೊಂದಿರುವ ಮೊದಲಿಗ ಎಂಬ ಖ್ಯಾತಿ ಅವರದ್ದಾಗಿದೆ.

ಇದಕ್ಕೆ ಸಂಬಂಧಿಸಿದ ವಿಡಿಯೊವನ್ನು ಹಂಚಿಕೊಂಡಿರುವ ರೊನಾಲ್ಡೊ,‘ವಾವ್‌ 200 ಮಿಲಿಯನ್‌!!! ಈ ಪ್ರಯಾಣವನ್ನು ಪ್ರತಿನಿತ್ಯ ನನ್ನೊಂದಿಗೆ ಹಂಚಿಕೊಂಡ ಪ್ರತಿಯೊಬ್ಬರಿಗೂ ಧನ್ಯವಾದಗಳು!!’ ಎಂದು ಬರೆದುಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನ ಮಾರ್ಕೆಟಿಂಗ್‌ ಸಂಸ್ಥೆ ಹಾಪರ್‌ ಪ್ರಕಾರ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ತಾವು ಹಂಚಿಕೊಳ್ಳುವ ಪ್ರತಿಯೊಂದು ಪ್ರಾಯೋಜಿತ ಪೋಸ್ಟ್‌ಗೂ ಅಂದಾಜು ₹ 7 ಕೋಟಿ (9 ಲಕ್ಷ ಯುರೋ)ಆದಾಯ ಗಳಿಸುತ್ತಾರೆ. ಅದರಂತೆ ಪ್ರತಿ ವರ್ಷ ಅವರು ಅಂದಾಜು ₹ 378 ಕೋಟಿ (48 ಮಿಲಿಯನ್‌ ಯುರೋ)ಆದಾಯ ಗಳಿಸುತ್ತಾರೆ. ಈ ಮೊತ್ತವು ಅವರು ಪ್ರತಿನಿಧಿಸುವ ಯುವಂಟಸ್‌ ಫುಟ್‌ಬಾಲ್‌ ಕ್ಲಬ್‌ನಲ್ಲಿ ಗಳಿಸುವ ಮೊತ್ತಕ್ಕಿಂತಲೂ ಅಧಿಕವಾಗಿದೆ.

ಸದ್ಯ ರೊನಾಲ್ಡೊಗೆ ಯುವಂಟಸ್‌ ವಾರ್ಷಿಕ ಅಂದಾಜು ₹ 267 ಕೋಟಿ (34 ಮಿಲಿಯನ್‌ ಯುರೋ) ನೀಡುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಹೆಚ್ಚು ಆದಾಯ ಹೊಂದಿರುವ ಮತ್ತೊಬ್ಬ ವ್ಯಕ್ತಿ ಲಿಯೋನೆಲ್‌ ಮೆಸ್ಸಿ. ಅರ್ಜೆಂಟಿನಾ ಫುಟ್‌ಬಾಲ್‌ ತಂಡದ ನಾಯಕನಾಗಿರುವ ಮೆಸ್ಸಿಅಂದಾಜು ₹ 183 (23.3 ಮಿಲಿಯನ್‌ ಯುರೋ) ಆದಾಯ ಗಳಿಸುತ್ತಾರೆ.

‘ಯುವಂಟಸ್‌ ಆಟಗಾರ ರೊನಾಲ್ಡೊ, ಫೇಸ್‌ಬುಕ್‌ನಲ್ಲಿಯೂ ಅತಿಹೆಚ್ಚು ಜನರು ಇಷ್ಟಪಡುವ ಮತ್ತುಹಿಂಬಾಲಿಸುವ ವ್ಯಕ್ತಿಯಾಗಿದ್ದಾರೆ’ಎಂದುಹಾಪರ್‌ ತಿಳಿಸಿದೆ. ಫೇಸ್‌ಬುಕ್‌ನಲ್ಲಿ ರೊನಾಲ್ಡೊಗೆ12.44 ಕೋಟಿ ಹಿಂಬಾಲಕರಿದ್ದಾರೆ.

ರೊನಾಲ್ಡೊ ನಂತರ ಅತಿಹೆಚ್ಚು ಹಿಂಬಾಲಕರನ್ನು ಹೊಂದಿರುವವರು

ಸ್ಥಾನ ಹೆಸರು ದೇಶ ಕ್ಷೇತ್ರ/ಸಾಧನೆ ಹಿಂಬಾಲಕರು
02 ಎರಿಯಾನ ಗ್ರಾಂಡೆ ಅಮೆರಿಕ ಗಾಯಕಿ 17.3 ಕೋಟಿ
03 ದಿ ರಾಕ್‌ ಖ್ಯಾತಿಯ ಡ್ವೇನ್‌ ಜಾನ್ಸನ್‌ ಅಮೆರಿಕ ನಟ 17ಕೋಟಿ
04 ಸಲೀನಾ ಗೋಮೆಜ್‌ ಅಮೆರಿಕ ಗಾಯಕಿ 16.7 ಕೋಟಿ
05 ಕೈಲೀ ಜೆನ್ನರ್‌ ಅಮೆರಿಕ ಕಿರುತೆರೆ 16.7 ಕೋಟಿ
06 ಕಿಮ್‌ ಕರ್ದಾಶಿಯನ್‌ ಅಮೆರಿಕ ರೂಪದರ್ಶಿ 15.8 ಕೋಟಿ
07 ಲಿಯೊನೆಲ್‌ ಮೆಸ್ಸಿ ಅರ್ಜೆಂಟಿನಾ ಫುಟ್‌ಬಾಲ್‌ 14.8ಕೋಟಿ
08 ಬಿಯಾಂಕೆ ಅಮೆರಿಕ ಗಾಯಕಿ 13.9 ಕೋಟಿ
09 ನೇಯ್ಮರ್‌ ಬ್ರೆಜಿಲ್‌ ಫುಟ್‌ಬಾಲ್‌ 13.2 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT