ಬುಧವಾರ, ಅಕ್ಟೋಬರ್ 27, 2021
21 °C

ಐ ಲೀಗ್‌: ಡೆಲ್ಲಿ ಎಫ್‌ಸಿ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉತ್ತಮ ಆಟವಾಡಿದ ಡೆಲ್ಲಿ ಎಫ್‌ಸಿ ತಂಡವು ಐ–ಲೀಗ್ ಫುಟ್‌ಬಾಲ್ ಅರ್ಹತಾ ಟೂರ್ನಿಯಲ್ಲಿ  ಕೇರಳ ಯುನೈಟೆಡ್‌ ಎಫ್‌ಸಿ ಎದುರು 2–1ರಿಂದ ಜಯ ಸಾಧಿಸಿತು.

ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ವಿಜೇತ ತಂಡದ ಪರ ಅನ್ವರ್‌ ಅಲಿ (47ನೇ ನಿಮಿಷ) ಹಾಗೂ ಹಿಮಾಂಶು ಜಾಂಗ್ರಾ (60ನೇ ನಿಮಿಷ) ಕಾಲ್ಚಳಕ ತೋರಿದರು.

ಹೃಷಿ ಧಾತ್‌ (23ನೇ ನಿಮಿಷ) ಕೇರಳ ಪರ ಒಂದು ಗೋಲು ದಾಖಲಿಸಿದರು.

ಆಡಿದ ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿದರುವ ಡೆಲ್ಲಿ ತಂಡವು ‘ಬಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಕೆಂಕ್ರೆ ಎಫ್‌ಸಿ ಕಾರ್ಬೆಟ್‌ ಎಫ್‌ಸಿಯೊಡನೆ ಗೋಲುರಹಿತ ಡ್ರಾ ಸಾಧಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು