ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂರೊ ಕಪ್‌: ಕುಸಿದುಬಿದ್ದ ಆಟಗಾರ–ಪಂದ್ಯ ಸ್ಥಗಿತ

Last Updated 12 ಜೂನ್ 2021, 22:28 IST
ಅಕ್ಷರ ಗಾತ್ರ

ಕೋಪನ್‌ಹೇಗನ್‌: ಯೂರೋಪಿಯನ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆಟಗಾರನೊಬ್ಬ ಕುಸಿದುಬಿದ್ದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.

ಫಿನ್‌ಲೆಂಡ್‌ ಎದುರಿನ ‘ಬಿ‘ ಗುಂಪಿನ ಪಂದ್ಯದಲ್ಲಿ ಡೆನ್ಮಾರ್ಕ್‌ನ ಮಿಡ್‌ಫೀಲ್ಡರ್‌ ಕ್ರಿಸ್ಟಿಯನ್ ಎರಿಕ್ಸನ್‌ ಏಕಾಏಕಿ ಕ್ರೀಡಾಂಗಣದಲ್ಲಿ ಕುಸಿದರು. ಪಂದ್ಯದ ಮೊದಲಾರ್ಧದ ಅಂತ್ಯದ ವೇಳೆ ಈ ಘಟನೆ ನಡೆಯಿತು. ತಕ್ಷಣ ಅವರನ್ನು ಸ್ಟ್ರೆಚರ್ ಮೂಲಕ ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಯಿತು.

‘ವೈದ್ಯಕೀಯ ತುರ್ತಿನ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಯೂರೋಪಿಯನ್‌ ಫುಟ್‌ಬಾಲ್ ಸಂಸ್ಥೆಗಳ ಒಕ್ಕೂಟ (ಯುಇಎಫ್‌ಎ) ತಿಳಿಸಿದೆ.

‘ಕ್ರಿಸ್ಟಿಯನ್‌ ಅವರಿಗೆ ಪ್ರಜ್ಞೆ ಬಂದಿದ್ದು, ಆರೋಗ್ಯ ಸ್ಥಿರವಾಗಿದೆ’ ಎಂದು ಡೆನ್ಮಾರ್ಕ್‌ ಫುಟ್‌ಬಾಲ್ ಫೆಡರೇಷನ್ ಟ್ವೀಟ್ ಮಾಡಿದೆ.

ಶನಿವಾರ ಬಾಕುವಿನಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ವೇಲ್ಸ್ ತಂಡವು ಸ್ವಿಟ್ಜರ್ಲೆಂಡ್‌ನೊಂದಿಗೆ 1–1ರ ಡ್ರಾ ಸಾಧಿಸಿತು.

ಇಟಲಿ ಶುಭಾರಂಭ: ಶುಕ್ರವಾರ ರೋಮ್‌ನಲ್ಲಿ ನಡೆದ ಪ‍ಂದ್ಯದಲ್ಲಿ ಆ ತಂಡವು 3–0ಯಿಂದ ಟರ್ಕಿಯನ್ನು ಮಣಿಸಿತು. ಟರ್ಕಿಯ ಮೆರಿಹ್ ಡೆಮಿರಲ್‌ 53ನೇ ನಿಮಿಷದಲ್ಲಿ ಎದುರಾಳಿಗೆ ‘ಉಡುಗೊರೆ ಗೋಲು’ ನೀಡಿದರು. ಸಿರೊ ಇಮ್ಮೊಬಿಲ್‌ (66ನೇ ನಿ.) ಮತ್ತು ಲೊರೆಂಜೊ (79ನೇ ನಿ.) ಇಟಲಿ ಪರ ಯಶಸ್ಸು ಸಾಧಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT